2022.09.30 Sunday Gospel Reflections 2022.09.30 Sunday Gospel Reflections 

ದೇವರ ದಿನದ ಚಿಂತನೆ: 'ಭರವಸೆಯ ಬೆಳಕು'

ಧರ್ಮಸಭೆಯು ಆಗಮನ ಕಾಲದ ಎರಡನೇ ಭಾನುವಾರವನ್ನು ಆಚರಿಸುತ್ತಿದ್ದಂತೆ, ಫಾ. ಎಡ್ಮಂಡ್ ಪವರ್, OSB, "ಭರವಸೆಯ ಬೆಳಕು" ಎಂಬ ವಿಷಯದ ಅಡಿಯಲ್ಲಿ ಭಾನುವಾರದ ಆರಾಧನಾ ವಿಧಿಯ ವಾಚನಗಳ ಕುರಿತು ತನ್ನ ಚಿಂತನೆಗಳನ್ನು ನೀಡುತ್ತಾರೆ.

ಧರ್ಮಗುರು. ಎಡ್ಮಂಡ್ ಪವರ್, OSB

ಈ ಭಾನುವಾರ, ನಾವು ಒಂದು ರೀತಿಯ ಸ್ವರ್ಗೀಯ ಪ್ರದರ್ಶನದ ಕಾಲ್ನನಡಿಗೆಯಡಿಯಲ್ಲಿ ಪವಿತ್ರ ವಾಚನಗಳನ್ನು ಕೇಳಲು ಪ್ರಾರಂಭಿಸುತ್ತೇವೆ: ದೇವರ ಮೆಚ್ಚಿನ, ವ್ಯಕ್ತಿಗತವಾದ ಜೆರುಸಲೆಮ್, ಶೋಕಾರ್ಥದ ವಸ್ತ್ರವನ್ನು ತೊರೆದು, ಪ್ರಭಾವಭರಿತವಾದ ಪ್ರಕಾಶಮಾನವಾದ ವಸ್ತ್ರವನ್ನು ಧರಿಸುತ್ತದೆ, ಮೇಲ್ನೋಟದ ಆಡಂಬರವಾದ ವಸ್ತ್ರವಲ್ಲ, ಆದರೆ ದೈವಿಕ ಒಳ್ಳೆಯತನ ಮತ್ತು ಸಮಗ್ರತೆಯ ಪ್ರತಿಬಿಂಬವಾದ ಪ್ರಕಾಶಮಾನವಾದ ವಸ್ತ್ರವನ್ನು ಧರಿಸಿದೆ.

ಇದು ಮೊದಲ ವಾಚನದ ಬಾರೂಖ್ ರವರ ಕಾವ್ಯಾತ್ಮಕ ದೃಷ್ಟಿಯಾಗಿದ್ದು, ಮನದ ಭಾವಗಳನ್ನು ಕಂಪಿಸುವ ಚಿತ್ರಗಳನ್ನು ಮೆಚ್ಚುವವರಿಗೆ, ಈ ಅಧ್ಯಾಯವು ಧ್ಯಾನದ ಕ್ಷಣಕ್ಕೆ ಅರ್ಹವಾಗಿದೆ.

ಇಂದಿನ ಶಭಸಂದೇಶದಲ್ಲಿ ಇದು ಸ್ನಾನಿಕ ಯೋವಾನ್ನರ ಸಂದೇಶವಾಗಿದ್ದು,ಬಾರೂಖ್ ರವರ ಸಂದೇಶವಾಗಿರಲಿಲ್ಲ, ಆದರೆ ಆಗಮನ ಕಾಲದ ಮಹಾನ್ ಪ್ರವಾದಿಯಾದ ಯೆಶಾಯನನ್ನು ಉಲ್ಲೇಖಿಸುತ್ತಾರೆ.

ನಿರ್ಬಂಧಿಸಿದ ಜಗತ್ತಿನಲ್ಲಿ ನಾವು ಬಂಧಿತರಾಗಿಲ್ಲದೆ, ದೇವರ ವಾಕ್ಯವು ನಮಗೆ ಭರವಸೆಯ ಚೈತನ್ಯವನ್ನು ಉಂಟುಮಾಡುವ ರೂಪಾಂತರದ ಆಳವಾದ ನೋಟವನ್ನು ಇಂದಿನ ಶಭಸಂದೇಶವು ನಮಗೆ ನೀಡುತ್ತದೆ.

ಶಭಸಂದೇಶಕಾರ ಲೂಕರವರ ಆರಂಭಿಕ ಪದಗಳು ಐತಿಹಾಸಿಕ ವಾಸ್ತವದಲ್ಲಿ ದೈವಿಕ ಆಹ್ವಾನವನ್ನುನೀಡುತ್ತದೆ: ಸ್ನಾನಿಕ ಯೋವಾನ್ನ ಸಮಯದಲ್ಲಿ ರೋಮನ್ ಸಾಮ್ರಾಜ್ಯದ ಮೇಲೆ ಪ್ರಾಬಲ್ಯ ಹೊಂದಿರುವ ರಾಜಕೀಯ ವ್ಯಕ್ತಿಗಳು 2024 ರ ಜಗತ್ತಿನಲ್ಲಿ ಪ್ರಾಬಲ್ಯ ಹೊಂದಿರುವ ಅದೇ ಜನರು: ಇಲ್ಲಿರುವ ವ್ಯತ್ಯಾಸವೇನೆಂದರೆ ಅವರ ಹೆಸರುಗಳು ಮತ್ತು ಮುಖಗಳು ವಿಭಿನ್ನವಾಗಿವೆಯಷ್ಟೇ.

ಜೀವನದ ಸಮಗ್ರತೆ ಮತ್ತು ಬದ್ಧತೆಗಾಗಿ ಪ್ರವಾದಿಯ ಧ್ವನಿಗಳು ಇಂದಿಗೂ ಸಹ ಬೆಂಗಾಡಿನಲ್ಲಿ ಕೂಗುತ್ತಿವೆ. ಜಗತ್ತನ್ನು ಪರಿವರ್ತಿಸಲು ಇನ್ನು ಮುಂದೆ ವಿಭಜನೆಯಾಗದಂತೆ ಮತ್ತು ಚದುರಿಹೋಗದಂತೆ , ನಮ್ಮ ಸನ್ನಿವೇಶಗಳನ್ನು ವಾಸ್ತವಿಕ ಸತ್ಯದ ಮೂಲಕ ಸಹಜವಾಗಿ ನಿರ್ಧರಿಸಿ, ದೇವರ ಮಹಿಮೆಯ ಬೆಳಕಿನೆಡೆಗೆ ನಡೆಯಲು ನಮ್ಮನ್ನು ಕರೆಯುತ್ತವೆ.

ಆಸ್ಕರ್ ವೈಲ್ಡ್  ರವರ ಒಂದು ನಾಟಕದಲ್ಲಿ, "ನಾವೆಲ್ಲರೂ ಚರಂಡಿಯಲ್ಲಿದ್ದೇವೆ, ಆದರೆ ನಮ್ಮಲ್ಲಿ ಕೆಲವರು ನಕ್ಷತ್ರಗಳನ್ನು ನೋಡುತ್ತಿದ್ದಾರೆ" ಎಂದು ಬರೆದಿದ್ದಾರೆ.

ಬೆಳಕು ಮತ್ತು ವೈಭವವು, ಇಂದಿನ ಬಾರೂಖ್ರವರ ವಾಚನವನ್ನು ಬೇಧಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ಡಿಸೆಂಬರ್‌ ತಿಂಗಳ ಕತ್ತಲೆಯಲ್ಲಿ, ಚೂಪಾದ ನಕ್ಷತ್ರಗಳು, ನಗರದ ದೀಪಗಳಿಂದ ಮುಳುಗದಿದ್ದರೆ, ಕೊಳಕು ಮತ್ತು ಕೊಳಕುಗಳಿಗಿಂತ ಹೆಚ್ಚಿನ ಪ್ರಭಾವವನ್ನು ಹೊಂದಿರುವ ಭರವಸೆಯು ಮಿನುಗುತ್ತದೆ.

ಆಗಮನ ಕಾಲವು ತುಲನಾತ್ಮಕವಾಗಿ ಕಡಿಮೆ ಅವಧಿಯಲ್ಲಿ, ಚದುರಿದ ನಮ್ಮ ಆಕಾಂಕ್ಷೆಗಳು ಮತ್ತು ಭರವಸೆಗಳನ್ನು ಗಮನಕ್ಕೆ ತರುತ್ತದೆ, ಏಕೆಂದರೆ ಬರಲಿರುವ ಪ್ರಭು ಯೇಸುವಿಗಾಗಿ, ತಾಳ್ಮೆಯಿಂದ ಕಾದು ನೋಡುವುದನ್ನು ಮುಂದುವರಿಸುತ್ತೇವೆ, ಅಂತಿಮ ಗಳಿಗೆಯಲ್ಲಿ ಖಂಡಿತವಾಗಿಯೂ ಬರುತ್ತಾರೆ, ಎಂಬ ನಂಬಿಕೆಯಿಂದ ತೆರೆದ ಹೃದಯಗಳನ್ನು ಪ್ರಭುವಿಗೆ ಲಭ್ಯವಿರಿಸೋಣ.

ಈ ವರ್ಷದ ಆಗಮನ ಕಾಲದ ಎರಡನೇ ಭಾನುವಾರ ಡಿಸೆಂಬರ್ 8 ರಂದು ಬರುತ್ತದೆ, ಇದು ಅಮಲೋದ್ಭವ ಮಾತೆಯ ಸಾಂಭ್ರಮಿಕ ಸಾಧಾರಣ ದಿನವಾಗಿದೆ. ಸಮುದ್ರದ ನಕ್ಷತ್ರ ಎಂದು ಕರೆಯಲ್ಪಡುವ ಮಾತೆ ಮರಿಯಳ ಭರವಸೆಯ ಬೆಳಕನ್ನು ನಮ್ಮ ಮೇಲೆಯೂ ಬೆಳಗಿಸಲಿ.

07 December 2024, 13:12