ಹುಡುಕಿ

2024.12.06 Infos d'Orient 2024.12.06 Infos d'Orient 

ಪ್ರಾಚ್ಯ ಸುದ್ದಿ ಸಮಾಚಾರ– ಡಿಸೆಂಬರ್ 6, 2024

L'Œuvre d'Orient ಸಹಯೋಗದೊಂದಿಗೆ ನಿರ್ಮಿಸಲಾದ ಪ್ರಾಚ್ಯ ಧರ್ಮಸಭೆಗಳಿಂದ ಈ ವಾರದ ಸುದ್ದಿಯಲ್ಲಿ, ಸಿರಿಯನ್ ನಗರಗಳು ಬಂಡುಕೋರರ ವಶದಲ್ಲಿವೆ, ಉಕ್ರೇನಿಯನ್ನರು ಸಂತ ನಿಕೋಲಸ್ ರವರ ದಿನವನ್ನು ಆಚರಿಸುತ್ತಾರೆ ಮತ್ತು ಪವಿತ್ರ ನಾಡಿನಲ್ಲಿ ಆಗಮನ ಕಾಲದ ಆರಂಭವನ್ನು ಗುರುತಿಸುತ್ತದೆ.


ಪ್ರಾಚ್ಯ ಧರ್ಮಸಭೆಗಳಿಂದ ಈ ವಾರದ ಸುದ್ದಿ ಸಮಾಚಾರ

ಯುದ್ಧವು ಅಲೆಪ್ಪೊಗೆ ಮರಳುತ್ತದೆ
ಉತ್ತರ ಸಿರಿಯಾದ ಅಲೆಪ್ಪೊ ಮತ್ತು ಹಮಾ ನಗರಗಳು ಇಡ್ಲಿಬ್ ಪ್ರದೇಶದಿಂದ ಹುಟ್ಟಿಕೊಂಡ ಸಶಸ್ತ್ರ ಸೇನಾಪಡೆ ಹಯಾತ್ ತಹ್ರೀರ್ ಅಲ್-ಶಾಮ್ರವರ ಕೈಗೆ ಬಿದ್ದಿವೆ. ಇದರಲ್ಲಿ ಕೆಲವು ನಿವಾಸಿಗಳು ಓಡಿಹೋದರು, ಆದರೆ ಹೆಚ್ಚಿನವರು ಕ್ಷಿಪ್ರ ಆಕ್ರಮಣ ಮತ್ತು ಸರ್ಕಾರಿ ಸೇನೆಯಿಂದ ಪ್ರತಿರೋಧದ ಕೊರತೆಯಿಂದ ಕಾವಲುಗಾರರಾದರು ಎಂದು ವರದಿಯಾಗಿದೆ.

13 ವರ್ಷಗಳ ಯುದ್ಧದ ನಂತರ, ಕ್ರೈಸ್ತ ಧರ್ಮಸಭೆಯ ನಾಯಕರು ದೈನಂದಿನ ಹಿಂಸಾಚಾರದ ಸಂಭವನೀಯ ಮರಳುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಕ್ರಿಯೆಯಾಗಿ, ಸಿರಿಯನ್ ಸೈನ್ಯವು ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿತು, ಇದರ ಪರಿಣಾಮವಾಗಿ ಹಲವಾರು ಸಾವುನೋವುಗಳು ಮತ್ತು ಫ್ರಾನ್ಸಿಸ್ಕನ್ನರು ನಡೆಸುತ್ತಿದ್ದ ಪವಿತ್ರ ನಾಡಿನ ಮಹಾವಿದ್ಯಾಲಯವು ನಾಶವಾಯಿತು ಎಂದು ಹೇಳಲಾಗಿದೆ.

ಉಕ್ರೇನ್‌ನಲ್ಲಿ ಸಂತ ನಿಕೋಲಸ್
ಭಾನುವಾರ, ಡಿಸೆಂಬರ್ 1ರಂದು, ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರಾದ ಪ್ರಧಾನ ಮಹಾಧರ್ಮಾಧ್ಯಕ್ಷ ಸ್ವಿಯಾಟೊಸ್ಲಾವ್ ಶೆವ್‌ಚುಕ್ರವರು, ಎಲ್ವಿವ್‌ನ ಪಿತೃಪ್ರಧಾನ ನಿಲಯದಲ್ಲಿ ಸಂತ ನಿಕೋಲಸ್ ನಿವಾಸವನ್ನು ಉದ್ಘಾಟಿಸಿ, ಸಂತರ ಹಬ್ಬವನ್ನು ಆಚರಿಸಲು ಪಾಲಿಸಿದ ಕ್ರೈಸ್ತ ಸಂಸ್ಕೃತಿಯ ಸಂಪ್ರದಾಯವು ಎಲ್ಲರ ಮೆಚ್ಚುಗುಗೆಯನ್ನು ಪಡೆದಿದೆ.

ಮಕ್ಕಳಿಗೆ ಆತಿಥ್ಯ ನೀಡಲು, ಹಬ್ಬದ ಕ್ಷಣಗಳನ್ನು ಹಂಚಿಕೊಳ್ಳಲು ಮತ್ತು ತಮ್ಮ ಉಡುಗೊರೆಗಳನ್ನು ಪರಸ್ಪರ ಹಂಚಿಕೊಳ್ಳಲು ಈ ನಿವಾಸವು ಡಿಸೆಂಬರ್ 15ರವರೆಗೆ ತೆರೆದಿರುತ್ತದೆ.

ಬಿಕ್ಕಟ್ಟಿನ ಸಮಯದಲ್ಲಿ ನೈತಿಕ ಬೆಂಬಲವನ್ನು ನೀಡುವ ತನ್ನ ಧ್ಯೇಯಕ್ಕೆ ಪ್ರಾಮಾಣಿಕವಾಗಿ, ಧರ್ಮಸಭೆಯು "ಯುದ್ಧದ ಕಾರಣದಿಂದ ತನ್ನ ಬಾಲ್ಯವನ್ನು ಕಳೆದುಕೊಂಡ ಮಕ್ಕಳಿಗೆ ಸಂತೋಷವನ್ನು ತರುವ" ಗುರಿಯನ್ನು ಹೊಂದಿದೆ ಎಂದು ವ್ಯಕ್ತಪಡಿಸಿದೆ.

ಎಲ್ವಿವ್‌ನಲ್ಲಿರುವ ಪವಿತ್ರಾತ್ಮರ ದೈವಶಾಸ್ತ್ರದ ಗುರುವಿದ್ಯಾಮಂದಿರದ ಗಾಯಕರಿಂದ ಕ್ರಿಸ್‌ಮಸ್ ಕ್ಯಾರೋಲ್‌ಗೀತೆಗಳು ಹಬ್ಬದ ವಾತಾವರಣವನ್ನು ಹೆಚ್ಚಿಸಿದವು.

ಜೆರುಸಲೆಮ್ನಲ್ಲಿ ಆಗಮನಕಾಲ ಪ್ರಾರಂಭವಾಗುತ್ತದೆ
ಡಿಸೆಂಬರ್ 1ರಂದು, ಧರ್ಮಗುರು. ಫ್ರಾನ್ಸೆಸ್ಕೊ ಪ್ಯಾಟನ್ರವರು ಬೆತ್ಲೆಹೇಮ್‌ಗೆ ತನ್ನ ಸಾಂಭ್ರಮಿಕ ಪ್ರವೇಶವನ್ನು ಮಾಡಿದನು, ಇದು ಆಗಮನ ಕಾಲದ ಆರಂಭವನ್ನು ಗುರುತಿಸಿತು.

ಜೆರುಸಲೇಮ್‌ನಿಂದ ಯಾತ್ರಿಕರಾಗಿ ಆಗಮಿಸಿದ ಪವಿತ್ರ ನಾಡಿನ ಕಸ್ಟೋಸ್ ರವರನ್ನು ಸ್ಟಾರ್ ಸ್ಟ್ರೀಟ್‌ನಲ್ಲಿ/ ನಕ್ಷತ್ರಗಳ ಬೀದಿಯಲ್ಲಿ ಮತ್ತು ಅಲ್-ಜರಾರಾ ಮಹಾದ್ವಾರದ ಕಮಾನಿನಡಿಯಲ್ಲಿ ಮಕ್ಕಳು, ಭಕ್ತಾಧಿಗಳು ಮತ್ತು ಧಾರ್ಮಿಕ ಪ್ರತಿನಿಧಿಗಳ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

“ಗ್ರೊಟ್ಟೊ ಆಫ್ ದಿ ನೇಟಿವಿಟಿಯಲ್ಲಿ/ ಕ್ರಿಸ್ತ ಜನನದ ಗವಿಯಲ್ಲಿ,” ಅವರು ಆಗಮನ ಕಾಲದ ಮೊದಲ ಮೇಣದಬತ್ತಿಯನ್ನು ಬೆಳಗಿಸಿದರು: "ಕ್ರಿಸ್‌ಮಸ್‌ಗೆ ಮುಂಚಿತವಾಗಿ ಈ ಯುದ್ಧವು ಕೊನೆಗೊಳ್ಳುತ್ತದೆ ಎಂಬ ಪ್ರಾಮಾಣಿಕ ಭರವಸೆಯೊಂದಿಗೆ, ಸಾಧ್ಯವಾದಷ್ಟು ಬೇಗ ಪವಿತ್ರ ನಾಡಿಗೆ ಭಕ್ತಾಧಿಗಳು ಮರಳಲು ನಾನು ಯಾತ್ರಿಕರನ್ನು ಆಹ್ವಾನಿಸುತ್ತೇನೆ." ಎಂದು ನುಡಿದಿದ್ದಾರೆ.

06 December 2024, 12:29