2024.04.12 Meeting of the students that receive scholarship from John Paul II Scholarship Fund from the Papal Foundation 2024.04.12 Meeting of the students that receive scholarship from John Paul II Scholarship Fund from the Papal Foundation   (foto don Paweł Rytel-Andrianik)

2,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ ಪೇಪಲ್ ಫೌಂಡೇಶನ್, 25 ವರ್ಷಗಳ ವಾರ್ಷಿಕವೋತ್ಸವವನ್ನು ಆಚರಿಸುತ್ತಿದೆ.

ಯಾಜಕ ಅಭ್ಯರ್ಥಿಗಳಿಗೆ, ಧಾರ್ಮಿಕ ಮತ್ತು ಶ್ರೀ ಸಾಮಾನ್ಯರಿಗೆ ವಿದ್ಯಾರ್ಥಿವೇತನವನ್ನು ಪೂರೈಸುವುದರ ಮೂಲಕ ಪೇಪಲ್ ಫೌಂಡೇಶನ್ ತನ್ನ 25 ವರ್ಷಗಳ ವಾರ್ಷಿಕವೋತ್ಸವವನ್ನು ಆಚರಿಸುತ್ತಿದೆ, ಆದ್ದರಿಂದ ಇವರೆಲ್ಲರೂ ದ್ವಿತೀಯ ಜಾನ್ ಪಾಲ್ರವರ ವಿದ್ಯಾರ್ಥಿವೇತನ ನಿಧಿಯ ಭಾಗವಾಗಿ ರೋಮ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಬಹುದಾಗಿದೆ.

ಧರ್ಮಗುರು. ಪಾವೆಲ್ ರೈಟೆಲ್-ಆಂಡ್ರಿಯಾನಿಕ್ ರವರು ಮತ್ತು ಟೊಮಾಸ್ ಝಿಲೆಂಕಿವಿಚ್ ರವರು

1988ನೇ ವರ್ಷದಲ್ಲಿ, ಅಮೇರಿಕಾದಲ್ಲಿ ಸ್ಥಾಪಿಸಲಾದ ಪೇಪಲ್ ಫೌಂಡೇಶನ್, ಆಫ್ರಿಕಾದಲ್ಲಿ ಶಾಲೆಗಳನ್ನು ನಿರ್ಮಿಸಿತು, ಲ್ಯಾಟಿನ್ ಅಮೇರಿಕಾದಲ್ಲಿ ವೈದ್ಯಕೀಯ ಆರೈಕೆಯನ್ನು ಒದಗಿಸಿದೆ ಮತ್ತು ವಿದ್ಯಾರ್ಥಿವೇತನವನ್ನು ನೀಡುವಂತಹ ಕ್ಷೇತ್ರಗಳಲ್ಲಿ ತನ್ನ ವ್ಯಾಪ್ತಿಯನ್ನು ಜಾಗತಿಕವಾಗಿ ವಿಸ್ತರಿಸಿದೆ.

ಡಿಸೆಂಬರ್ 5ರಂದು ದ್ವಿತೀಯ ಜಾನ್ ಪಾಲ್ರವರ ವಿದ್ಯಾರ್ಥಿವೇತನ ನಿಧಿಯ 25ನೇ ವಾರ್ಷಿಕೋತ್ಸವವನ್ನು ಪೇಪಲ್ ಫೌಂಡೇಶನ್ ಆಚರಿಸಿತು, ಇದು ಸುಮಾರು 2,000 ವ್ಯಕ್ತಿಗಳಿಗೆ ರೋಮ್‌ನಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿದೆ.

ಜಾಗತಿಕ ಸೇವಾನಿಯೋಗ
2024ನೇ ವರ್ಷದಲ್ಲಿ, 60ಕ್ಕೂ ಹೆಚ್ಚು ದೇಶಗಳಲ್ಲಿ ಪೇಪಲ್ ಫೌಂಡೇಶನ್ 118 ಯೋಜನೆಗಳನ್ನು ಬೆಂಬಲಿಸಿದೆ. ಈ ಉಪಕ್ರಮಗಳು ಶುದ್ಧ ನೀರಿನ್ನು ಪೂರೈಸುವುದರಲ್ಲಿ, ಶಾಲಾ ನಿರ್ಮಾಣ ಮತ್ತು ತರಗತಿಯ ನವೀಕರಣಗಳು ಸೇರಿದಂತೆ ವಿಶೇಷವಾದ ಅಗತ್ಯಗಳನ್ನು ಪೂರೈಸಿದೆ.

ಶುಭಸಂದೇಶದ ಪ್ರಚಾರಕ್ಕಾಗಿ ಧರ್ಮಸಭೆಯ ಬೋಧನೆಗಳನ್ನು ಭಾಷಾಂತರಿಸಲು, ದೇವಾಲಯಗಳು, ಮಠಗಳು ಮತ್ತು ಗುರುವಿದ್ಯಾಮಂದಿರಗಳನ್ನು ಮರುಸ್ಥಾಪಿಸಲು, ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಮತ್ತು ವಿದ್ಯಾರ್ಥಿವೇತನವನ್ನು ಒದಗಿಸಲು ಹಣವನ್ನು ಸಹ ನಿಗದಿಪಡಿಸಲಾಗಿದೆ. ಪ್ರತಿಯೊಂದು ಯೋಜನೆಯು, ವಿಶ್ವಗುರುವು ನಿಗದಿಪಡಿಸಿದ ಆದ್ಯತೆಗಳನ್ನು ಅನುಸರಿಸುತ್ತದೆ.

ಪೇಪಲ್‌ ಫೌಂಡೇಶನ್‌ ಪ್ರಾರಂಭದಿಂದಲೂ, ವಿಶ್ವಾದ್ಯಂತ ಗ್ರಾಮೀಣ ಮತ್ತು ದತ್ತಿ ಪ್ರಯತ್ನಗಳಲ್ಲಿ ವಿಶ್ವಗುರುವನ್ನು ಬೆಂಬಲಿಸುವ ಉದ್ದೇಶದ ಭಾಗವಾಗಿ ಈ ಕಾರಣಗಳಿಗಾಗಿ $225 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.

ಸಂತ ಪೇತ್ರರ ಮೇಲ್ವಿಚಾರಕರ ಕೊಡುಗೆಗಳ ಕಾರ್ಯಾಚಾರಣೆಯ ಮೂಲಕ ಈ ಯೋಜನೆಯು ಸಾಧ್ಯವಾಗಿದೆ, ಅಂತೆಯೇ ದಾನಿಗಳ ಉದಾರತೆಯು, ಅವರ ಹಣಕಾಸಿನ ಕೊಡುಗೆಯು, ಫೌಂಡೇಶನ್‌ನ ಯೋಜನೆಗಳನ್ನು ಚಾಲನೆ ಮಾಡಲು ಸಾಧ್ಯವಾಗಿದೆ,

ಪ್ರಮುಖ ವರ್ಷ: 1998
1998ರ ವರ್ಷವು ʼಪೇಪಲ್ ಫೌಂಡೇಶನ್‌ಗೆʼ ಒಂದು ಮೈಲಿಗಲ್ಲಿನ ವರ್ಷವಾಗಿದೆ, ಇದು ದ್ವಿತೀಯ ಜಾನ್ ಪಾಲ್ರವರ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಾರಂಭವನ್ನು ಸ್ಮರಿಸುತ್ತದೆ.

ವಿಶ್ವಗುರು ಸಂತ, ದ್ವಿತೀಯ ಜಾನ್ ಪಾಲ್ರವರು ಮತ್ತು ಆಗಿನ ಅಧ್ಯಕ್ಷ ಕಾರ್ಡಿನಲ್ ಫ್ರಾನ್ಸಿಸ್ ಓ'ಕಾನ್ನರ್ ರವರ ನಡುವಿನ ಸಂಭಾಷಣೆಯಿಂದ ಈ ಉಪಕ್ರಮವು ಹೊರಹೊಮ್ಮಿತು. ಜಾನ್ ಮತ್ತು ಕರೋಲ್ ಸೀಮನ್ರವರು ಈ ಕಾರ್ಯಕ್ರಮವನ್ನು ಸ್ಥಾಪಿಸಲು ಆರಂಭಿಕ ಹಣವನ್ನು ಒದಗಿಸಿದರು.

"ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ವಿಶ್ವಗುರು ದ್ವಿತೀಯ ಜಾನ್ ಪಾಲ್ರವರ ಮನದಾಳದ ಕೋರಿಕೆಯು ಆಳವಾಗಿ ವೈಯಕ್ತಿಕವಾಗಿತ್ತು," ಶ್ರೀ ಸೀಮನ್ರವರು ಈ ವಿಷಯದ ಬಗ್ಗೆ ವ್ಯಾಟಿಕನ್ ಸುದ್ಧಿಗೆ ತಿಳಿಸಿದರು. " ತಮ್ಮ ಅಧ್ಯಯನದ ಸಮಯದಲ್ಲಿ ಸ್ವತಃ ತಾವೇ ರೋಮ್‌ನ ಏಂಜೆಲಿಕಮ್‌ನಲ್ಲಿ ವಿದ್ಯಾರ್ಥಿವೇತನದ ಅನುಕೂಲದಿಂದ ತಮ್ಮ ಅಧ್ಯಯನವನ್ನು ಸ್ವೀಕರಿಸಿದ್ದರು ಎಂದು ಹೇಳಿದ್ದಾರೆ. ಅಂತೆಯೇ ಅಧ್ಯಯನದ ಅಗತ್ಯವಿರುವ ಧಾರ್ಮಿಕ ಪುರುಷರು ಮತ್ತು ಮಹಿಳೆಯರು ಮತ್ತು ಶ್ರೀ ಸಾಮಾನ್ಯ ನಾಯಕರಿಗೆ." ಈ ಅವಕಾಶವನ್ನು ಇತರರಿಗೆ ಲಭ್ಯವಾಗುವಂತೆ ಅವರು ಬಯಸಿದರು.

ಕಳೆದ 25 ವರ್ಷಗಳಲ್ಲಿ, ವಿದ್ಯಾರ್ಥಿವೇತನ ನಿಧಿಯು ವಿದ್ಯಾರ್ಥಿಗಳಿಗೆ ಸುಮಾರು $16 ಮಿಲಿಯನ್ ಆರ್ಥಿಕ ಸಹಾಯವನ್ನು ಒದಗಿಸಿದೆ, 1,959 ವ್ಯಕ್ತಿಗಳು ರೋಮ್‌ನಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿದೆ.

ಜೀವನವನ್ನು ಪರಿವರ್ತಿಸುವುದು
ವಿದ್ಯಾರ್ಥಿವೇತನ ಪಡೆದಿರುವ ಭಾರತದ ಸಹೋದರಿ ಅನ್ನಾ ಕಪೌನಮೈರವರು ರೋಮ್‌ನಲ್ಲಿನ ತನ್ನ ಅಧ್ಯಯನವು ಸಾಮಾಜಿಕ ಮಾಧ್ಯಮದ ಸರಿಯಾದ ಬಳಕೆಯಲ್ಲಿ ಯುವಜನರಿಗೆ ಉತ್ತಮ ತರಬೇತಿ ನೀಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

"ಇಂದು, ಸಾಮಾಜಿಕ ಮಾಧ್ಯಮದ ಪ್ರಭಾವವು ಯುವಕರು ಮತ್ತು ಮಕ್ಕಳ ಮೇಲೆ ಬೀರುತ್ತಿದೆ," "ಯುವಕರು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಳಿಸಿಕೊಂಡು, ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಬಳಕೆದಾರರಾಗಲು ಸಹಾಯ ಮಾಡುವುದೇ ನನ್ನ ಧ್ಯೇಯವಾಗಿದೆ. ಪೇಪಲ್ ಫೌಂಡೇಶನ್ಗೆ ಬೆಂಬಲವಾಗಿರುವ ಶ್ರೀ. ಜಾನ್ ಮತ್ತು ಶ್ರೀಮತಿ ಕರೋಲ್ ಸೀಮನ್ ರವರಿಗೆ "ನಾವು ನಮ್ಮ ಪ್ರಾರ್ಥನೆಗಳನ್ನು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಜವಾಬ್ದಾರಿಯುತರಾಗಲು ಕರೆ
ಪೇಪಲ್ ಫೌಂಡೇಶನ್‌ನ ಬೋರ್ಡ್ ಆಫ್ ಟ್ರಸ್ಟಿಗಳ ಅಧ್ಯಕ್ಷ ಕಾರ್ಡಿನಲ್ ಸೀನ್ ಒ'ಮ್ಯಾಲಿರವರು, ಸಂತ ಲೂಕರ ಶುಭಸಂದೇಶವನ್ನು ಉಲ್ಲೇಖಿಸಿದ್ದಾರೆ: "ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಸಲಾಗುವುದು, ಇನ್ನೂ ಹೆಚ್ಚು ವಹಿಸಿಕೊಂಡನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು" ಜಾಗತಿಕ ಅಸಮಾನತೆಯನ್ನು ನಿವಾರಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಅವರು ಒತ್ತಿ ಹೇಳಿದರು.

"ಶ್ರೀಮಂತ ಮತ್ತು ಬಡವರ ನಡುವಿನ ಅಂತರವು ಬೆಳೆಯುತ್ತಲೇ ಇರುವ ಸಮಾಜದಲ್ಲಿ, ಸಂತ ಪೇತ್ರರ ಮೇಲ್ವಿಚಾರಕರು, ಬಡವರು ಮತ್ತು ದುರ್ಬಲರ ಅಗತ್ಯಗಳಿಗೆ ಆದ್ಯತೆ ನೀಡುವ ತಮ್ಮ ಜವಾಬ್ದಾರಿಯನ್ನು ಗುರುತಿಸುತ್ತಾರೆ" ಎಂದು ಕಾರ್ಡಿನಲ್ ಒ'ಮ್ಯಾಲಿರವರು ಹೇಳಿದರು.

ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಸಾವೇಜ್ರವರು, "ಈ ಅನುದಾನಗಳು, ವಿದ್ಯಾರ್ಥಿವೇತನಗಳು ಮತ್ತು ದತ್ತಿ ಉಪಕ್ರಮಗಳು ಕಥೋಲಿಕ ಧರ್ಮಸಭೆಗೆ ನಮ್ಮ ಸಂಸ್ಥೆಯ ಕೊಡುಗೆಯಾಗಿದೆ."

ವಿಶ್ವಗುರುಗಳ ಸ್ವೀಕೃತಿ
ಏಪ್ರಿಲ್‌ನಲ್ಲಿ, ಪೇಪಲ್ ಫೌಂಡೇಶನ್‌ನ ಸದಸ್ಯರು ರೋಮ್‌ನಲ್ಲಿ ವಿಶ್ವಗುರು ಫ್ರಾನ್ಸಿಸ್ರವರನ್ನು ಭೇಟಿಯಾದರು.

ಪವಿತ್ರ ತಂದೆಯು ಅಗತ್ಯವಿರುವವರಿಗೆ ಸಹಾಯ ಮಾಡುವ ಸ್ಫೂರ್ತಿಯ ಮೂಲವು ಪ್ರಾರ್ಥನೆ ಮತ್ತು ಆರಾಧನೆಯಿಂದ ಬರುವುದು ಎಂದು ತಮ್ಮ ಭಾಷಣದಲ್ಲಿ ಒತ್ತಿಹೇಳಿದರು.

ವಿಶ್ವಾದ್ಯಂತ ಶೈಕ್ಷಣಿಕ, ಮಾನವೀಯ ಮತ್ತು ಗ್ರಾಮೀಣ ಯೋಜನೆಗಳನ್ನು ಬೆಂಬಲಿಸುವಲ್ಲಿ ಫೌಂಡೇಶನ್‌ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಎತ್ತಿ ತೋರಿಸಿದರು.

06 December 2024, 13:34