ಧರ್ಮಗುರು ಫಾಲ್ಟಾಸ್: ಗಾಜಾದಲ್ಲಿನ ಮಕ್ಕಳು 'ಶಾಂತಿಯ ಅಮೂಲ್ಯ ಕೊಡುಗೆ'ಗೆ ಅರ್ಹರು
ರಾಬರ್ಟೊ ಸೆಟೆರಾ
ಗಾಜಾದಲ್ಲಿ ಹೊಸದಾಗಿ-ಪ್ರಾರಂಭವಾದ ಯುದ್ಧವು ಕೊಲ್ಲಲ್ಪಟ್ಟ ಮಕ್ಕಳ ಸಂಖ್ಯೆಯಿಂದ ಹೆಚ್ಚು ಗುರುತಿಸಲ್ಪಟ್ಟಿದೆ.
L'Osservatore Romano ರೊಂದಿಗಿನ ಸಂದರ್ಶನದಲ್ಲಿ, ಪವಿತ್ರ ನಾಡಿನ ಪಾಲನೆಯ ಶ್ರೇಷ್ಠಗುರುವಾದ ಇಬ್ರಾಹಿಂ ಫಾಲ್ಟಾಸ್ ರವರು, ಗಾಜಾದ ಕುಟುಂಬಗಳ ಮೇಲೆ ಉಳಿದಿರುವ ಗಾಯಗಳನ್ನು ಮತ್ತು ಗಾಜಾದ ಮಕ್ಕಳನ್ನು ಸಾಧ್ಯವಾದಷ್ಟು ಬೆಂಬಲಿಸಲು ಮತ್ತು ಆಶ್ರಯಿಸಲು ಧರ್ಮಸಭೆಯ ಪ್ರಯತ್ನಗಳನ್ನು ಪರಿಶೋಧಿಸಿದರು.
ಪ್ರಶ್ನೆ: ಧರ್ಮಗುರು ಇಬ್ರಾಹಿಂರವರೇ, ಯಾವುದೇ ಯುದ್ಧದಲ್ಲಿ ಇಷ್ಟು ಹೆಚ್ಚಿನ ಶೇಕಡಾವಾರು ಮಕ್ಕಳ ಸಾವು ಸಂಭವಿಸಿಲ್ಲ. ಏಕೆ ಎಂದು ಅರ್ಥಮಾಡಿಕೊಳ್ಳಲು ನೀವು ನಮಗೆ ಸಹಾಯ ಮಾಡಬಹುದೇ?
ಗಾಜಾದಲ್ಲಿನ ಕುಟುಂಬಗಳು ಸಾಮಾನ್ಯವಾಗಿ ದೊಡ್ಡದಾಗಿರುವುದರಿಂದ ಮತ್ತು ಜನಸಂಖ್ಯೆಯು ಅಂದರೆ ಮಕ್ಕಳ ವಯಸ್ಸು ಕಡಿಮೆ ಅಥವಾ ಚಿಕ್ಕವರಾಗಿದ್ದಾರೆ ಎಂದು ನಾನು ನಂಬುತ್ತೇನೆ. ನಿಖರವಾದ ಕಾರಣಗಳನ್ನು ಗುರುತಿಸಲು ಕಷ್ಟವಾಗಿದ್ದರೂ ಸಹ, ಗಾಜಾದಲ್ಲಿ ಮಗುವನ್ನು ಕಳೆದುಕೊಂಡಿರುವ ಮತ್ತು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಕುಟುಂಬದ ಪೋಷಕರ ನೋವಿನೊಂದಿಗೆ ನಾನು ಆಳವಾಗಿ ಪರಿಚಿತನಾಗಿದ್ದೇನೆ. ನಿಷ್ಕಳಂಕ ಮತ್ತು ಹಾನಿಯನ್ನುಂಟುಮಾಡಲು ಅಸಮರ್ಥರಾಗಿರುವ ಮುಗ್ಧ ಮಕ್ಕಳನ್ನು ಕೊಲ್ಲುವುದು ಮಾನವೀಯತೆಯ ಕಳಂಕವಾಗಿದೆ, ಈ ಕಳಂಕವನ್ನು ಅದರ ಇತಿಹಾಸದಿಂದ ಎಂದಿಗೂ ಅಳಿಸಲು ಸಾಧ್ಯವಿಲ್ಲ.
ಗಾಜಾದಲ್ಲಿ ಕೊಲ್ಲಲ್ಪಟ್ಟ ಮಕ್ಕಳ ಸಂಖ್ಯೆಯು ಭಯಾನಕವಾಗಿದೆ ಮತ್ತು ಬದುಕುಳಿದವರಲ್ಲಿ ಅನೇಕರು ತಮ್ಮ ದೇಹಗಳು, ಅವರ ಹೃದಯಗಳು ಮತ್ತು ಅವರ ಮನಸ್ಸಿನಲ್ಲಿ-ತಮ್ಮ ಜೀವನದುದ್ದಕ್ಕೂ ಪಯಣಿಸುವ ಗಾಯಗಳ ಬಗ್ಗೆ ಯೋಚಿಸುವುದು ಹೃದಯ ವಿದ್ರಾವಕವಾಗಿದೆ. ಪಶ್ವಿಮ ದಂಡೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು ಕಡಿಮೆ ವರದಿ ಮಾಡುತ್ತವೆ, ಅಲ್ಲಿ ಸಾವುಗಳು, ಗಾಯಗಳು ಮತ್ತು ಬಂಧನಗಳು ಹೆಚ್ಚುತ್ತಿವೆ. ಅಲ್ಲಿಯೂ ಸಹ ಬಲಿಯಾದವರಲ್ಲಿ ಹೆಚ್ಚಿನವರು ಮಕ್ಕಳೇ.
ಪ್ರಶ್ನೆ: ನೀವು ಈ ಅನೇಕ ಮಕ್ಕಳಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದೀರಿ. ಯಾವುದೇ ನಿರ್ದಿಷ್ಟ ಕಥೆಗಳು ನಿಮ್ಮೊಂದಿಗೆ ಉಳಿದಿವೆಯೇ? ನೀವು ಹಂಚಿಕೊಳ್ಳಲು ಬಯಸುವ ಯಾವುದೇ ವಿಶೇಷವಾಗಿ ಮನಗಳನ್ನು ಸ್ಪಂದಿಸುವ ಪ್ರಕರಣಗಳು?
ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿರವರೊಂದಿಗೆ, ಅವರು ಇಟಲಿಗೆ ಆಗಮಿಸಿದಾಗ ನಾನು ಹೆಚ್ಚಿನ ಮಕ್ಕಳನ್ನು ಸ್ವಾಗತಿಸಿದೆ. ನಾವು ವಿಮಾನ ನಿಲ್ದಾಣದಲ್ಲಿ ಮಕ್ಕಳಿಗಾಗಿ ಕಾಯುತ್ತಿರುವಾಗ ಅವರ ಬಗ್ಗೆ ಮಾತನಾಡಿದ್ದೇವೆ, ಆದರೆ ಒಮ್ಮೆ ನಾವು ಅವರ ಕಥೆಗಳನ್ನು ಪೋಷಕರು ಮತ್ತು ಪೋಷಕರಿಂದ ಕೇಳಿದಾಗ ನಾವು ಮೂಕ ವಿಸ್ಮಯರಾಗಿದ್ದೇವೆ.
ನಂತರ, ನಾನು ಅವರನ್ನು ಆಸ್ಪತ್ರೆಗಳಿಗೆ ಭೇಟಿ ಮಾಡಿದ್ದೇನೆ ಮತ್ತು ಕಾಲಕ್ರಮೇಣ ಅವರು ಚೇತರಿಸಿಕೊಂಡರು. ಕಾಲಿನ ತೀವ್ರ ಗಾಯಗಳೊಂದಿಗೆ ಬಂದ ಒಬ್ಬ ಹುಡುಗನನ್ನು ನಾನು ಭೇಟಿಯಾದೆ, ಸಂಕೀರ್ಣ ಕಾರ್ಯಾಚರಣೆಯ ನಂತರ ಅವನು ಮತ್ತೆ ನಡೆಯುವುದನ್ನು ನಾನು ನೋಡಿದೆ. ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಯುವತಿಯೊಬ್ಬಳು ಈಗ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ, ಆದರೂ ಅವಳು ಬಂದಾಗ, ಅವಳು ಗಂಭೀರ ಸ್ಥಿತಿಯಲ್ಲಿದ್ದಳು ಎಂದು ವೈದ್ಯರು ನನಗೆ ಎಚ್ಚರಿಸಿದರು.
ಇಟಲಿಯಲ್ಲಿ, ಈ ಮಕ್ಕಳು ವೈದ್ಯಕೀಯ ಆರೈಕೆ ಮತ್ತು ಪ್ರೀತಿ ಎರಡನ್ನೂ ಪಡೆದಿದ್ದಾರೆ. ಕೆಲವರು ಈಗಾಗಲೇ ಇಟಾಲಿದ ಬಾಷೆಯನ್ನು ಮಾತನಾಡುತ್ತಿದ್ದಾರೆ. ಅವರು ನನ್ನನ್ನು ಕರೆದಾಗ, ನಾನು ಅಂತಿಮವಾಗಿ ಅವರ ಧ್ವನಿಯಲ್ಲಿ ಶಾಂತಿಯನ್ನು ಕೇಳುತ್ತದ್ದೇನೆ - ದೇವರಿಗೆ ಧನ್ಯವಾದಗಳು.
ಪ್ರಶ್ನೆ: ಕಳೆದ ಮಂಗಳವಾರ ಯುದ್ಧವು ಪುನರಾರಂಭಗೊಂಡಾಗಿನಿಂದ, ಕೊಲ್ಲಲ್ಪಟ್ಟ ಮಕ್ಕಳ ಸಂಖ್ಯೆಯು ಗಗನಕ್ಕೇರಿದೆ - ಮೊದಲ ರಾತ್ರಿಯೊಂದರಲ್ಲೇ 130 ಮಕ್ಕಳು ಸಾವನ್ನಪ್ಪಿದ್ದಾರೆ. ಗಾಜಾದಿಂದ ನೀವು ಯಾವ ಸುದ್ದಿಯನ್ನು ಸ್ವೀಕರಿಸುತ್ತಿದ್ದೀರಿ?
ದುಃಖಕರ ವಿಷಯವೆಂದರೆ, ಸಂಖ್ಯೆಯು ಈಗಾಗಲೇ ಏರಿದೆ ಮತ್ತು ಹಿಂಸಾಚಾರ ನಿಲ್ಲದ ಹೊರತು, ಈ ಸಂಖ್ಯೆಯು ಹೆಚ್ಚುತ್ತಲೇ ಇರುತ್ತದೆ. ಗಾಜಾದಿಂದ ನಾನು ಪಡೆಯುತ್ತಿರುವ ಸುದ್ದಿಯು ಆಳವಾಗಿ ಕಳವಳಕಾರಿಯಾಗಿದೆ. ಹೋರಾಟದ ಮರು-ಪ್ರಾರಂಭವು ಹಠಾತ್ ಮತ್ತು ಅತ್ಯಂತ ಹಿಂಸಾತ್ಮಕವಾಗಿತ್ತು.
ಪವಿತ್ರ ನಾಡಿನಲ್ಲಿ ಇದು ಪವಿತ್ರ ಸಮಯ: ಮುಸ್ಲಿಮರಿಗೆ ರಂಜಾನ್ ಮತ್ತು ಕ್ರೈಸ್ತರಿಗೆ ತಪಸ್ಸುಕಾಲವಾಗಿದೆ. ಜನರು ಸಾಮಾನ್ಯವಾಗಿ ಪರಸ್ಪರರ ಸಂಸ್ಕಾರಗಳು, ಆರಾಧನೆಗಳು ಮತ್ತು ಸಂಪ್ರದಾಯಗಳನ್ನು ಗೌರವಿಸುವ ಸಮಯವು ಇದಾಗಿದೆ.
ಈ ಕಾಲದಲ್ಲಿ ತುಂಬಾ ಸಾವು ಮತ್ತು ವಿನಾಶದ ಬಗ್ಗೆ ಕೇಳುವುದು ವಿಶೇಷವಾಗಿ ದುಃಖಕರವಾಗಿದೆ. ಮುಗ್ಧ ಜನರ ಸಾವು ಯಾವಾಗಲೂ ನೋವಿನಿಂದ ಕೂಡಿದೆ.
ಪ್ರಶ್ನೆ: ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ದಿಗ್ಭ್ರಮೆಗೊಳಿಸುವಂತಿವೆ: ಯುದ್ಧ ಪ್ರಾರಂಭವಾದಾಗಿನಿಂದ 15,613 ಮಕ್ಕಳು ಕೊಲ್ಲಲ್ಪಟ್ಟರು ಮತ್ತು 33,900 ಮಂದಿ ಗಾಯಗೊಂಡರು. ಸತ್ತವರಲ್ಲಿ 876 ನವಜಾತ ಶಿಶುಗಳು ಮತ್ತು 4,110 ಐದು ವರ್ಷದೊಳಗಿನ ಮಕ್ಕಳು. ಅನಾಥರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ಬಳಿ ಏನಾದರೂ ಮಾಹಿತಿ ಇದೆಯೇ? ಎಷ್ಟು ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ ಎಂದು ನಂಬಲಾಗಿದೆ? ಅವರನ್ನು ಯಾರು ನೋಡಿಕೊಳ್ಳುತ್ತಿದ್ದಾರೆ?
ಅಂದಾಜಿನ ಪ್ರಕಾರ ಸುಮಾರು 20,000 ಮಕ್ಕಳು ಅನಾಥರಾಗಿದ್ದಾರೆ. ದುರದೃಷ್ಟಕರವಾಗಿ, ಆ ಸಂಖ್ಯೆಯು ಹೆಚ್ಚಾಗಬಹುದು, ಏಕೆಂದರೆ ಅವಶೇಷಗಳ ಅಡಿಯಲ್ಲಿ ಇನ್ನೂ ಎಷ್ಟು ದೇಹಗಳನ್ನು ಹೂಳಲಾಗಿದೆ ಎಂದು ನಮಗೆ ತಿಳಿದಿಲ್ಲ. ಅನೇಕ ಸಂದರ್ಭಗಳಲ್ಲಿ, ಹಿರಿಯ ಮಕ್ಕಳು ತಮ್ಮ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಿದ್ದಾರೆ, ವಯಸ್ಕರ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ ಎಂದು ನನಗೆ ಹೇಳಲಾಗಿದೆ.
ಈ ಯುದ್ಧದ ದೊಡ್ಡ ದುರಂತವೆಂದರೆ ನಮಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ: ಮಾನವೀಯ ನೆರವು ಪಡೆಯಲು ಸಾಧ್ಯವಿಲ್ಲ ಮತ್ತು ಕೆಲವೇ ಸ್ವಯಂಸೇವಕರನ್ನು ಗಾಜಾಕ್ಕೆ ಅನುಮತಿಸಲಾಗಿದೆ. ಇತ್ತೀಚೆಗೆ ತುಂಬಾ ಹತ್ತಿರವಾಗಿದ್ದರೂ ಸಹ ಶಕ್ತಿಹೀನವಾಗಿರುವುದು ವಿನಾಶಕಾರಿಯಾಗಿದೆ.