ಘಾನಾ: ಗ್ರಾಮೀಣ ಅಮಾಂಕ್ವಾಕ್ರೋಮ್‌ನಲ್ಲಿ ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರಿಗೆ ಸಹೋದರಿಯರು ಪರಿಹಾರ ಒದಗಿಸುತ್ತಾರೆ
ಸಿಸ್ಟರ್ ಸಿಲ್ವಿ ಲುಮ್ ಚೋ, MSHR
ಘಾನಾದ ಡೊಂಕೋರ್ಕ್ರೋಮ್‌ನ ಪ್ರೇಷಿತ ಧರ್ಮಪ್ರಾಂತ್ಯದಲ್ಲಿರುವ ಅಮಂಕ್ವಾಕ್ರೋಮ್‌ನ ಪವಿತ್ರ ಜಪಮಾಲೆಯ ಆರೋಗ್ಯ ಕೇಂದ್ರ, ಬಡವರು, ನಿರ್ಲಕ್ಷಿತರು ಮತ್ತು ದೀನದಲಿತರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.
ಪವಿತ್ರ ಜಪಮಾಲೆ ಮಾತೆಯ ಧರ್ಮಪ್ರಚಾರಕ ಸಭೆಯ ಸಹೋದರಿಯರು, (MSHR) ನಡೆಸುತ್ತಿರುವ ಈ ಆರೋಗ್ಯ ಕೇಂದ್ರವು, ಜಿಲ್ಲೆ ಮತ್ತು ಅದರಾಚೆಗಿನ ಅನೇಕ ಗ್ರಾಮಸ್ಥರಿಗೆ ಒಂದು ಮೋಕ್ಷವಾಗಿದೆ, ಏಕೆಂದರೆ ಈ ಆರೋಗ್ಯ ಕೇಂದ್ರದಿಂದ ಅವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯ ಭರವಸೆ ಬಗ್ಗೆ ವಿಶ್ವಾವಿದೆ ಮತ್ತು ಅವರು ಚಿಕಿತ್ಸೆಗೆ ಹಣವನ್ನು ಪಾವತಿಸಲು ಸಮರ್ಥರಾಗಿದ್ದರೂ ಅಥವಾ ಸಮರ್ಥರಲ್ಲದಿದ್ದರೂ ಅವರಿಗೆ ಯಾವಾಗಲೂ ಆರೈಕೆ ಮಾಡಲಾಗುತ್ತದೆ ಎಂದು ಅವರಿಗೆ ತಿಳಿದಿದೆ.
ಅಫ್ರಾಮ್ ಬಯಲು ಪ್ರದೇಶದ ಉಳಿದ ಭಾಗಗಳಂತೆ ಅಮಾನ್ಕ್ವಾಕ್ರೋಮ್ ಕೂಡ ಅತಿ ಹೆಚ್ಚು ಬಡತನ ಅನುಭವಿಸುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ವೈದ್ಯತಜ್ಞರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಕ್ತರಾಗದ ಕಾರಣ ಅನೇಕ ರೋಗಿಗಳು ಮನೆಯಲ್ಲಿಯೇ ಸಾಯುತ್ತಿದ್ದಾರೆ.
ಕೆಲವು ಗರ್ಭಿಣಿಯರು ವೈದ್ಯಕೀಯ ವೆಚ್ಚಗಳ ಭಯದಿಂದ ಮನೆಯಲ್ಲಿಯೇ ಹೆರಿಗೆ ಮಾಡಲು ಬಯಸುತ್ತಾರೆ ಮತ್ತು ಅನೇಕರು ಇತರ ತೊಂದರೆ ಮತ್ತು ತೊಡಕುಗಳ ಕಾರಣದಿಂದಾಗಿ ಪ್ರಮುಖ ಸಾರಿಗೆ ಸಾಧನವಾದ ಮೋಟಾರ್‌ಸೈಕಲ್‌ಗಳಲ್ಲಿ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಬರುತ್ತಾರೆ. ಕಳಪೆ ರಸ್ತೆ ಜಾಲದಿಂದಾಗಿ, ಕೆಲವರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬಹುದು ಅಥವಾ ತಮ್ಮ ಜೀವವನ್ನು ಕಳೆದುಕೊಳ್ಳಬಹುದು ಎಂಬ ಅಪಾಯದ ನಿರ್ಧಾರವನ್ನು ತೆಗೆದುಕೊಳ್ಳದಿರಲು ಬಯಸುತ್ತಾರೆ.
ಅಮಾನ್ಕ್ವಾಕ್ರೋಮ್‌ನಂತಹ ದೊಡ್ಡ ಸಮುದಾಯದ ಅಗತ್ಯಗಳನ್ನು ಪೂರೈಸಲು, ಕೇವಲ ಎರಡೇ ಎರಡು ಕೊಳವೆಬಾವಿಗಳಿರುವ ಕಾರಣ, ನಿವಾಸಿಗಳು ನೀರಿನ ಕೊರತೆಯನ್ನು ಸಹ ಎದುರಿಸುತ್ತಿದ್ದಾರೆ.
ಆ ಪ್ರದೇಶದಲ್ಲಿ ಯಾವುದೇ ನೈರ್ಮಲ್ಯ ಸೌಲಭ್ಯಗಳು ಲಭ್ಯವಿಲ್ಲ, ಇದು ವ್ಯಾಪಕ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅಮಾನ್ಕ್ವಾಕ್ರೋಮ್‌ನಲ್ಲಿಯೂ ಮಾರುಕಟ್ಟೆ ಇಲ್ಲ, ಮತ್ತು ನಿವಾಸಿಗಳು ಆಹಾರ ಪದಾರ್ಥಗಳನ್ನಾಗಲಿ ಅಥವಾ ದಿನಸಿ ವಸ್ತುಗಳನ್ನು ಖರೀದಿಸಲು, ಇನ್ನೊಂದು ಪಟ್ಟಣವಾದ ಡೊಂಕೋರ್ಕ್ರೋಮ್‌ಗೆ ಸುಮಾರು 11.2 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ.
ಪವಿತ್ರ ಜಪಮಾಲೆ ಮಾತೆಯ ಧರ್ಮಪ್ರಚಾರಕ ಸಭೆಯ ಸಹೋದರಿಯರ ಕೊಡುಗೆ
ತಾವು ಸೇವೆ ಸಲ್ಲಿಸುವ ಜನರಿಗೆ ಹತ್ತಿರವಾಗಬೇಕಾದ ಅಗತ್ಯದಿಂದ ಪ್ರೇರಿತರಾದ ಪವಿತ್ರ ಜಪಮಾಲೆ ಧರ್ಮಪ್ರಚಾರಕ ಸಭೆಯ ಸಹೋದರಿಯರು, ಡೊನ್‌ಕೋರ್‌ಕ್ರೋಮ್‌ನಲ್ಲಿರುವ ತಮ್ಮ ಕಾನ್ವೆಂಟ್‌ನಲ್ಲಿನ ಸೌಕರ್ಯವನ್ನು ತೊರೆದು ಪವಿತ್ರ ಜಪಮಾಲೆಯ ಆರೋಗ್ಯ ಕೇಂದ್ರದಲ್ಲಿರುವ ಹಳೆಯ ದಾದಿಯರ ವಸತಿಗೃಹದಲ್ಲಿ ವಾಸಿಸಲು ಬಂದರು, ಅಲ್ಲಿಂದ ಅವರು ರೋಗಿಗಳ ನೋವುಗಳಿಗೆ ಸ್ಪಂದಿಸುವ ಮೂಲಕ ಅವರನ್ನು ತಲುಪಿದರು ಮತ್ತು ಸೌಲಭ್ಯದ ದಿನನಿತ್ಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ.
ತಮ್ಮ ದಿನನಿತ್ಯದ ಆರೋಗ್ಯ ಸೇವೆಯ ಜೊತೆಗೆ, ಸಹೋದರಿಯರು ಬರವಣಿಗೆಯ ಯೋಜನೆಯ ಮೂಲಕ ಹಣವನ್ನು ಸಂಗ್ರಹಿಸುವತ್ತ ಗಮನ ಹರಿಸಿದ್ದಾರೆ. ಈ ಬರವಣಿಗೆಯ ಯೋಜನೆಯು ಆರೋಗ್ಯ ಸೌಲಭ್ಯದ ಬೆಳವಣಿಗೆಗೆ ತುಂಬಾ ಕೊಡುಗೆ ನೀಡಿದೆ.
2016ರಲ್ಲಿ ಸಹೋದರಿಯರು ಈ ಸೇವೆಯ ನಿರ್ವಹಣೆಯನ್ನು ವಹಿಸಿಕೊಂಡಾಗಿನಿಂದ, ಎರಡು ಬ್ಲಾಕ್‌ಗಳ ಸೌಲಭ್ಯವು ಅಗಾಧ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಕಂಡಿದೆ.
ಅಮಂಕ್ವಾಕ್ರೋಮ್‌ನಲ್ಲಿ ಬಡವರ ಕೂಗಿಗೆ ಕಿವಿಗೊಟ್ಟ ಇಬ್ಬರು ಪ್ರವರ್ತಕ MSHR ಸಹೋದರಿಯರು, ವೈದ್ಯಕೀಯ ವೈದ್ಯೆಯಾಗಿದ್ದ ಸಿಸ್ಟರ್ ರೋಸ್ ಫಾರೆನ್ ರವರು ಮತ್ತು ಆಕೆಯ ಸಿಬ್ಬಂದಿ ಸೂಲಗಿತ್ತಿಯಾದ ಸಿಸ್ಟರ್ ಎನ್‌ಕೆಚಿ ಒರೆಬೋಸಿ ಕ್ಯಾರೋಲಿನ್, ನಂತರ ಸೂಲಗಿತ್ತಿ ದಾದಿಯಾಗಿದ್ದ ಸಿಸ್ಟರ್ ಸಿಸಿಲಿಯಾ ಡೈಕ್ ರವರು ಸೇರಿಕೊಂಡರು.
2020ರಲ್ಲಿ, ಔಷಧಾಲಯ, ಪ್ರಯೋಗಾಲಯ, ಸ್ಕ್ಯಾನ್ ಕೊಠಡಿ, ಇಂಜೆಕ್ಷನ್ ಕೊಠಡಿ ಮತ್ತು ಪುರುಷರ ವಾರ್ಡ್ ಹೊಂದಿರುವ ಹೊಸ ಹೊರರೋಗಿ ವಿಭಾಗ (OPD) ಬ್ಲಾಕ್ ನಿರ್ಮಾಣವು ಗಮನಾರ್ಹ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.
ಮೂರು ವರ್ಷಗಳ ನಂತರ, ಆಧುನಿಕ ಹೆರಿಗೆ ವಿಭಾಗವನ್ನು ಸಮಕಾಲೀನ ಶೌಚಾಲಯ ಸೌಲಭ್ಯಗಳೊಂದಿಗೆ ಅನಾವರಣಗೊಳಿಸಲಾಯಿತು. ಈ ಬದಲಾವಣೆಗಳು ವರ್ಧಿತ ಆರೋಗ್ಯ ಸೇವೆಗಳ ಬದ್ಧತೆಯನ್ನು ಬಲಪಡಿಸಿದವು.
2016ರಲ್ಲಿ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಇದ್ದ ಆರೋಗ್ಯ ಕೇಂದ್ರವು ಪ್ರಸ್ತುತ 42 ಸಿಬ್ಬಂದಿಗೆ ವಿಕಸನಗೊಂಡಿದೆ, ಇದರಲ್ಲಿ ಮೂವರು ಶುಶ್ರೂಷಕಿಯರು ಸೇರಿದ್ದಾರೆ. ಸರಾಸರಿಯಾಗಿ, ವಾರಕ್ಕೆ 105 ರೋಗಿಗಳು ಹೊರರೋಗಿ ವಿಭಾಗಕ್ಕೆ ಭೇಟಿ ನೀಡುತ್ತಾರೆ, ಸುಮಾರು 25 ಜನರು ಹೆರಿಗೆ ಬ್ಲಾಕ್ ನ್ನು ಬಳಸುತ್ತಾರೆ.
ಮೇಲಿನ ಈ ಎಲ್ಲಾ ಬೆಳವಣಿಗೆಗಳು ದಾನಿಗಳ ಸಹಯೋಗದೊಂದಿಗೆ ಧಾರ್ಮಿಕ ಸಹೋದರಿಯರ ಅವಿಶ್ರಾಂತ ಪ್ರಯತ್ನಗಳಿಂದ ಸಾಧ್ಯವಾಯಿತು.
ಕೇಂದ್ರದಲ್ಲಿನ ತಮ್ಮ ಕೆಲಸದ ಹೊರತಾಗಿ, ಪವಿತ್ರ ಜಪಮಾಲೆ ಮಾತೆಯ ಧರ್ಮಪ್ರಚಾರಕ ಸಭೆಯ ಸಹೋದರಿಯರು ನಿಯತಕಾಲಿಕವಾಗಿ ಇತರ ಸಮುದಾಯಗಳು ಮತ್ತು ಅಮಾನ್ಕ್ವಾಕ್ರೋಮ್‌ನ ಶಾಲೆಗಳಲ್ಲಿ ಆರೋಗ್ಯ ಮತ್ತು ಇತರ ಸಂಬಂಧಿತ ಸಮಸ್ಯೆಗಳ ಕುರಿತು ಸಂವೇದನಾಶೀಲ ತರಬೇತಿಯನ್ನು ನಡೆಸುತ್ತಿದ್ದಾರೆ.
ಅವರು ಜನರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಸಹ ಆಯೋಜಿಸುತ್ತಾರೆ, ಇದರಲ್ಲಿ ಪ್ರಮುಖವಾಗಿ ಸಕ್ಕರೆ ತಪಾಸಣೆ, ಪ್ರಯೋಗಾಲಯ ಪರೀಕ್ಷೆ, ಕಣ್ಣು ಮತ್ತು ಹಲ್ಲು ತಪಾಸಣೆ ಸೇರಿವೆ.
ಸ್ಥಳೀಯ ಧರ್ಮಸಭೆ, ಸಮುದಾಯ ಮತ್ತು ಇತರ ಪಾಲುದಾರರಿಂದ ಬೆಂಬಲ
ಸ್ಥಳೀಯ ಧರ್ಮಸಭೆಯ ನಾಯಕರು ಅಮಂಕ್ವಾಕ್ರೋಮ್‌ನಲ್ಲಿರುವ ಸಿಸ್ಟರ್‌ಗಳ ಧ್ಯೇಯಕ್ಕೆ ಉತ್ತಮ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ.
ಸ್ಥಳೀಯ ಮುಖ್ಯಸ್ಥರು ಕೂಡ ಈ ಸೇವೆಯಲ್ಲಿ ಹೊರತಾಗಿಲ್ಲ. ಸಿಸ್ಟರ್‌ಗಳನ್ನು ಆರ್ಥಿಕವಾಗಿ ಬೆಂಬಲಿಸಲು ಅವರಿಗೆ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೂ, ಧರ್ಮಪ್ರಚಾರ ಪ್ರಯತ್ನಗಳಿಂದಾಗಿ ತಮ್ಮ ಸಮುದಾಯವು ಏನಾಗುತ್ತಿದೆ ಎಂಬುದರ ಬಗ್ಗೆ ಅವರು ಸಂತೋಷ ಮತ್ತು ತೃಪ್ತಿಯನ್ನು ವ್ಯಕ್ತಪಡಿಸುತ್ತಾರೆ.
ಬಡವರಾಗಿದ್ದರೂ, ಮುಖ್ಯಸ್ಥರು ಯಾವಾಗಲೂ ನಮ್ಮೊಂದಿಗಿರುತ್ತಾರೆ. ನಾವು ಯಾವುದೇ ಕಾರ್ಯವನ್ನು ಮಾಡಿದರೂ, ಅವರು ನಮಗೆ ಕರೆ ಮಾಡಲು ಹೇಳುತ್ತಾರೆ. ಅವರು ತಮ್ಮ ಜನರನ್ನು ಸಾಮೂಹಿಕ ಕೆಲಸಕ್ಕೆ ಬರುವಂತೆ ಒಟ್ಟುಗೂಡಿಸುತ್ತಾರೆ," ಎಂದು ಸಿಸ್ಟರ್ ಎನ್‌ಕೆಚಿ ರವರು ಒಪ್ಪಿಕೊಂಡರು.
ಸೌಲಭ್ಯದ ಉಸ್ತುವಾರಿ ವಹಿಸಿರುವವರ ಆರೋಗ್ಯ ವಿಮಾ ಯೋಜನೆಯು ಸಹ ಬಹಳ ಸಹಾಯಕವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ. ಆರೋಗ್ಯ ಕೇಂದ್ರವು ಹೆಚ್ಚಾಗಿ ದೈವಿಕ ಅನುಗ್ರಹದ ಮೂಲಕ ಉಳಿದುಕೊಂಡಿದೆ; ಎಂದು ಸಿಸ್ಟರ್ ಎನ್ಕೆಚಿರವರು ಸಾಕ್ಷ್ಯ ನುಡಿಯುತ್ತಾ, "ಧರ್ಮಪ್ರಚಾರವನ್ನು ಮಾಡಿ ಮತ್ತು ಧರ್ಮಪ್ರಚಾರದ ದ್ಯೇಯವನ್ನು ದೇವರು ಉಳಿಸಿಕೊಡುತ್ತಾರೆ ಎಂಬ ತಮ್ಮ ನಂಬಿಕೆಯನ್ನು ಹಂಚಿಕೊಂಡರು.
"ನಾವು ಅಮಾಂಕ್ವಾದಲ್ಲಿ ಪ್ರಾರಂಭಿಸಿದ ವಿಶ್ವಾಸವನ್ನು ಉಳಿಸಿಕೊಂಡರೆ, ನಮಗೆ ಎಂದಿಗೂ ಕೊರತೆ ಎದುರಾಗುವುದಿಲ್ಲ" ಎಂದು ಸಿಸ್ಟರ್ ಫಾರೆನ್ ರವರು ಪ್ರತಿಪಾದಿಸಿದರು.