ಪ್ರಭುವಿನ ದಿನದ ಚಿಂತನೆ: 'ಹುಡುಕಲು ಮತ್ತು ಆಲಿಸಲು ಒಂದು ಕರೆ'
ಧರ್ಮಗುರು ಮೇರಿಯನ್ ನ್ಗುಯೆನ್, OSB
ನಾವು ನಮ್ಮ ಮನಸ್ಸಿನಲ್ಲಿ ಒಂದು ಸುಂದರವಾದ ವಿಷಯನ್ನು ಕಲ್ಪಿಸಿಕೊಂಡಾಗ, ಕೆಲವೊಮ್ಮೆ ನಾವು ಅದನ್ನು ಈಗಾಗಲೇ ರುಚಿ ನೋಡಿದ್ದೇವೆ ಎಂದು ನಮಗೆ ಅನಿಸುತ್ತದೆ. ಪ್ರಭುಯೇಸು ದೇವರ ರಾಜ್ಯವನ್ನು ತರಲು ಹಾತೊರೆಯುತ್ತಿದ್ದಂತೆ (ಲೂಕ 12:49), ನಮ್ಮ ತಪಸ್ಸುಕಾಲವು ಶಿಸ್ತುಗಳ ಮೂಲಕ ದೇವರೊಂದಿಗೆ ಆಳವಾದ ಸಂಪರ್ಕವನ್ನು ಸಾಧಿಸುವಲ್ಲಿ ನಾವು ಸಹ ಅವಿಶ್ರಾಂತಿಯನ್ನು ಅನುಭವಿಸಬಹುದು.
ಆದರೂ, ನಿಜವಾದ ಆಧ್ಯಾತ್ಮಿಕ ಬೆಳವಣಿಗೆಯು ಸಮಯ ತೆಗೆದುಕೊಳ್ಳುತ್ತದೆ. ನಾವೆಲ್ಲರೂ ಸುಲಭವಾಗಿ ಬರುವುದನ್ನು ಹೆಚ್ಚು ಹಗುರವಾಗಿ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿಯೇ "ಸುಲಭವಾಗಿ ಬನ್ನಿ, ಸುಲಭವಾಗಿ ಹೋಗಿ" ಎಂಬ ನುಡಿ ಮಾತು ಬಂದಿರಬಹುದು.
ತಪಸ್ಸುಕಾಲದ ನಮ್ಮ ಪ್ರಯಾಣದ ಆರಂಭದಲ್ಲಿಯೇ ನಮ್ಮ ಅಂತಿಮ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೆ, ಮತ್ತೇನನ್ನು, ನಾವು ನಿರೀಕ್ಷಿಸಬಹುದು? ಈ ತಪಸ್ಸುಕಾಲದ ಮೊದಲ ವಾರದ ಶುಭಸಂದೇಶದ ಅಥವಾ ದೈವವಾಕ್ಯ ವಿಧಿಯ ಭಾಗವು ದೇವರು ನಮ್ಮನ್ನು ಆಹ್ವಾನಿಸುತ್ತಾನೆ, ನಮಗೆ ಒಂದು ನೋಟವನ್ನು ನೀಡುತ್ತಾನೆ ಮತ್ತು ಸಲಹೆ ನೀಡುತ್ತಾನೆ ಎಂದು ಸೂಚಿಸುತ್ತದೆ.
ಆಗಸ್ಟೀನ್ ಮತ್ತು ಗ್ರೆಗೊರಿ ಇಬ್ಬರೂ ರೂಪಾಂತರವನ್ನು ಶಿಷ್ಯರ ವಿಶ್ವಾಸವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿರುವ ಆಳವಾದ ಮತ್ತು ನಿಕಟ ಬಹಿರಂಗಪಡಿಸುವಿಕೆಯಾಗಿ ನೋಡಿದರು (ಆಗಸ್ಟೀನ್, ಪ್ರಬೋಧನೆ 78; ಗ್ರೆಗೊರಿ, ಪ್ರವಚನ 32). ಈ ಉಡುಗೊರೆಯು ಪ್ರಭುವಿನ ಆಹ್ವಾನದೊಂದಿಗೆ ಪ್ರಾರಂಭವಾಯಿತು: ಪ್ರಭುಯೇಸುವು ಪೇತ್ರ, ಯೋಹಾನ ಮತ್ತು ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆ ಮಾಡಲು ಬೆಟ್ಟವನ್ನು ಹತ್ತಿದನು. ಶಿಷ್ಯರು ಪ್ರಭುಯೇಸುವಿನ ನೇತೃತ್ವದಲ್ಲಿ ಕೈಗೊಳ್ಳುವ ಈ ಪ್ರಯಾಣಕ್ಕೆ ತಮ್ಮನ್ನು ತಾವು ಲಭ್ಯಗೊಳಿಸಿಕೊಂಡರು.
ಧರ್ಮಸಭೆಯ ಗುರುಗಳು ಅಥವಾ ಯಾಜಕರು ಪೇತ್ರನ ವಿಸ್ವಾಸವನ್ನು, ಯಾಕೋಬರು ಭರವಸೆಯನ್ನು ಮತ್ತು ಯೋಹಾನನು ಪ್ರೀತಿಯ ಪ್ರತಿನಿಧಿಯಾಗಿ ವ್ಯಾಖ್ಯಾನಿಸುತ್ತಾರೆ. ಇದು ಅರ್ಥಪೂರ್ಣವಾಗಿದೆ ಏಕೆಂದರೆ ಇವು ದೈವಶಾಸ್ತ್ರದ ಸದ್ಗುಣಗಳಾಗಿವೆ. ದೇವರಿಂದ ನಮ್ಮನ್ನು ಆತನ ಬಳಿಗೆ ಕರೆದೊಯ್ಯುವ ಉಡುಗೊರೆಗಳಾಗಿವೆ.
ಸಾಂಪ್ರದಾಯಿಕವಾಗಿ ಪವಿತ್ರಸಭೆಯ ಪವಿತ್ರ ಸ್ಥಳವೆಂದು ಅರ್ಥೈಸಿಕೊಳ್ಳುವ ಪರ್ವತವು, ದೇವರನ್ನು ಭೇಟಿಯಾಗಲ ಅಥವಾ ಎದುರುಗೊಳ್ಳಲು ಸಾಮಾನ್ಯವಾದುದ್ದಕ್ಕಿಂತ ಮೇಲೇರುವ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ನಮಗೆ ನೆನಪಿಸುತ್ತದೆ. ನಾವು ಈ ಅಧ್ಯಾಯದ ದೈವವಾಕ್ಯದ ಬಗ್ಗೆ ಧ್ಯಾನಿಸುತ್ತಿದ್ದೇವೆ ಎಂಬ ಅಂಶವು, ನಾವು ದೇವರ ಆಹ್ವಾನವನ್ನು ಸ್ವೀಕರಿಸಿದ್ದೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ತೋರಿಸುತ್ತದೆ. ನಾವು ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ.
ಯೇಸು ಪ್ರಾರ್ಥಿಸುತ್ತಿದ್ದಂತೆ, ಆತನ ಮುಖಭಾವ ಬದಲಾಯಿತು, ಮತ್ತು ಆತನ ಉಡುಪು ಬೆಳ್ಳಗಾಯಿತು. ಮತ್ತಾಯನ ಲೆಕ್ಕಚಾರದಲ್ಲಿ, ಆತನ ಮುಖವು “ಸೂರ್ಯನಂತೆ” ಹೊಳೆಯಿತು (ಮತ್ತಾಯ 17:2). ಆದರೆ ಸೂರ್ಯನನ್ನು ನೋಡಿ ಕುರುಡನಾಗದೆ ಇರುವವರು ಯಾರು?
ದೇವರ ಬೆಳಕು ಮತ್ತು ಮಹಿಮೆ ಮಾನವ ಸಾಮರ್ಥ್ಯಕ್ಕೆ ಮೀರಿದ್ದು, ಆದ್ದರಿಂದ ದೇವರು ಘೋಷಿಸಿದನು, "ಯಾವ ಮನುಷ್ಯನೂ ನನ್ನ ಮುಖವನ್ನು ನೋಡಿ ಬದುಕಲಾರನು" (ವಿಮೋಚನಕಾಂಡ 33:20). ಆದರೂ, ಪ್ರಭುಯೇಸುವು ಮನುಷ್ಯನಾಗಿದ್ದರೂ, ದೇವರ ನಲ್ಮೆಯ ಪುತ್ರರಾಗಿದ್ದರು, ಹೀಗೆ ಶಿಷ್ಯರು ದೇವರ ಮಹಿಮೆಯ ಒಂದು ನೋಟವನ್ನು ಪಡೆದ ಅದೃಷ್ಟ ವ್ಯಕ್ತಿಗಳಾಗಿ ಬದುಕಿದರು.
"ಹುಡುಕಿ, ನಿಮಗೆ ಸಿಗುವುದು" (ಮತ್ತಾಯ 7:7) ಎಂದು ಪವಿತ್ರಗ್ರಂಥವು ನಮಗೆ ಭರವಸೆ ನೀಡುತ್ತದೆ, ಏಕೆಂದರೆ ದೇವರು ತನ್ನ ಮಾತಿಗೆ ಪ್ರಾಮಾಣಿಕರಾಗಿದ್ದಾರೆ: "ನೀವು ನನ್ನನ್ನು ಹುಡುಕುವಿರಿ ಮತ್ತು ಮನಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ" (ಯೆರೆಮೀಯ 29:13). ಆದರೆ ಸದ್ಯಕ್ಕೆ, ನಾವು ಒಂದು ನೋಟವನ್ನು ಮಾತ್ರ ಪಡೆಯಬಹುದು, ಏಕೆಂದರೆ ನಾವು ಇನ್ನೂ ಆ ದೈವಿಕ ಮಹಿಮೆಯ ಪೂರ್ಣ ಶಕ್ತಿಯನ್ನು ಹೊರಲು ಸಿದ್ಧರಿಲ್ಲ. (ಯೋಹಾನ 16:12).
ಪರ್ವತವನ್ನು ಹತ್ತಿದ ಶಿಷ್ಯರಂತೆ, ನಾವು ನಮ್ಮ ಪೂರ್ಣ ಹೃದಯದಿಂದ ದೇವರನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದೇವೆಯೇ? ಆತನು ನಮಗೆ ಒಂದು ಕ್ಷಣದ ಆಧ್ಯಾತ್ಮಿಕ ಸ್ಪಷ್ಟತೆಯನ್ನು ನೀಡಿದಾಗ, ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದೇವೆ?
ಪೇತ್ರನು ಪ್ರಭವುವಿನ ದೈವಪ್ರಕಟನೆಯ ದರ್ಶನವನ್ನು ಉಳಿಸುವಂತೆ ಬೇಡಿಕೊಂಡರೂ, ಈ ಅದ್ಭುತ ದರ್ಶನವು ಹೆಚ್ಚು ಕಾಲ ಉಳಿಯಲಿಲ್ಲ. ಆ ದೈವಪ್ರಕಟನೆಯ ದರ್ಶನ ನೋಟದ ಕಣ್ಮರೆಯಾದಾಗ, ಶಿಷ್ಯರು ತಾವು ದೇವರ ಮುಖವನ್ನು ನೋಡಿದ್ದೇವೆಂದು ಅರಿತುಕೊಂಡರು ಮತ್ತು ತಮ್ಮ ಮಾನವ ದೌರ್ಬಲ್ಯದಲ್ಲಿ ಭಯಭೀತರಾದರು.
ಆದರೆ ದೇವರು ಅವರ ನಾಶವನ್ನು ಬಯಸಲಿಲ್ಲ. ಬದಲಿಗೆ, ಅವರನ್ನು “ಈತನು ನನ್ನ ಪುತ್ರನು: ನಾನು ಆರಿಸಿಕೊಂಡವನು. ಈತನ ಮಾತಿಗೆ ಕಿವಿಗೊಡಿರಿ” ಎಂಬ ವಾಣಿ ಕೇಳಿಸಿತು, ಈ ಮಾತುಗಳಿಂದ ಧೈರ್ಯ ತುಂಬಿದರು.
ದೇವರ ಮಾತುಗಳನ್ನು ಆಲಿಸುವ ಶಕ್ತಿಯನ್ನು ಜ್ಞಾನವು ಯಾವಾಗಲೂ ದೃಢಪಡಿಸಿದೆ: "ನನ್ನ ಮಗನೇ, ನನ್ನ ಮಾತುಗಳತ್ತ ಗಮನಹರಿಸು; ನನ್ನ ಮಾತುಗಳಿಗೆ ನಿನ್ನ ಕಿವಿಗೊಡು. ಈ ದಿವ್ಯ ಅನುಭವವನ್ನು ನಿನ್ನ ದೃಷ್ಟಿಯಿಂದ ತಪ್ಪಿಸಿಕೊಳ್ಳದಿರಲಿ; ಅವುಗಳನ್ನು ನಿನ್ನ ಹೃದಯದಲ್ಲಿ ಇರಿಸಿಕೋ. ಅವುಗಳನ್ನು ಕಂಡುಕೊಳ್ಳುವವರಿಗೆ ಜೀವವೂ ಅವರ ಸರ್ವಾಂಗಕ್ಕೂ ವಾಸಿಯೂ ಆಗಿವೆ." (ಜ್ಞಾನೋಕ್ತಿ 4:20-22; RB ಜ್ಞಾನೋಕ್ತಿ 1; ಧರ್ಮೋಕ್ತಿ 30:19-20; ಯೆಶಾಯ 55:3).
ಈ ಜ್ಞಾನಾರ್ಜನೆಯು, ಇನ್ನು ಮುಂದೆ ಕೇವಲ ಒಂದು ಪುಟದಲ್ಲಿನ ಪದಗಳಾಗಿ ಉಳಿಯಕೂಡದು; ಅದು ಯೇಸುವಿನ ದೇಹದ ಮಾಂಸದ ರೂಪವನ್ನು ಪಡೆದುಕೊಂಡಿದೆ. ಅವರು ತಮ್ಮ ಮಾತುಗಳನ್ನು ಇನ್ನೂ ಮುಂದುವರಿಸುತ್ತಾರೆ, ನಮ್ಮನ್ನು ಆಹ್ವಾನಿಸುತ್ತಾನೆ, ತನ್ನ ಮಹಿಮೆಯ ನೋಟವನ್ನು ಬಹಿರಂಗಪಡಿಸುತ್ತಾನೆ ಮತ್ತು ತನ್ನ ವಾಕ್ಯದ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತಾನೆ.
ಪ್ರಶ್ನೆ: ದೇವರು ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುವಾಗ ನಾವು ಅವರ ಮಾತುಗಳಿಗೆ ಕಿವಿಗೊಟ್ಟಿದ್ದೇವೆಯೇ?