ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ - ಮಾರ್ಚ್ 26, 2025
ಪೂರ್ವ ಧರ್ಮಸಭೆಗಳಿಂದ ಈ ವಾರದ ಸುದ್ದಿ
ಪೂರ್ವದ ಧರ್ಮಸಭೆಗಳಲ್ಲಿ ಮಂಗಳವಾರ್ತೆಯ ಹಬ್ಬ
ಮಂಗಳವಾರ, ಮಾರ್ಚ್ 25 ರಂದು, ಕ್ರೈಸ್ತರು ಗೇಬ್ರಿಯಲ್ ದೇವದೂತರಿಂದ ಪೂಜ್ಯ ಕನ್ಯಾ ಮಾತೆ ಮೇರಿಯ ದೈವಿಕ ಮಾತೃತ್ವದ ಮಂಗಳವಾರ್ತೆಯ ಘೋಷಣೆಯನ್ನು ಸ್ಮರಿಸುವ ಹಬ್ಬವನ್ನು ಆಚರಿಸಿದರು.
ಹಿಂದಿನ ದಿನ, ಜೆರುಸಲೇಮ್‌ನ ಲತೀನ್ ಕುಲಸಚಿವ ಕಾರ್ಡಿನಲ್ ಪಿಯರ್‌ಬಟ್ಟಿಸ್ಟಾ ಪಿಜ್ಜಾಬಲ್ಲಾರವರು, ಗುರುಗಳು ಮತ್ತು ಭಕ್ತವಿಶ್ವಾಸಿಗಳನ್ನು ಸುತ್ತುವರೆದಿರುವ ಮಂಗಳವಾರ್ತೆಯ ಮಹಾದೇವಾಲಯದಲ್ಲಿ ಸಾಂಭ್ರಮಿಕ ಪ್ರವೇಶವನ್ನು ಮಾಡಿದರು, ಶಾಂತಿಗಾಗಿ ಪ್ರಾರ್ಥನೆಯ ಉತ್ಸಾಹದಲ್ಲಿ ಮಂಗಳವಾರ್ತೆಯ ಹಬ್ಬವನ್ನು ಪ್ರಾರಂಭಿಸಿದರು. ಲೆಬನಾನ್ ನಲ್ಲಿ ಮಂಗಳವಾರ್ತೆಯ ಹಬ್ಬದ ದಿನವನ್ನು ಸಾರ್ವಜನಿಕ ರಜಾದಿನವಾಗಿ ಅನನ್ಯವಾಗಿ ಆಚರಿಸುತ್ತದೆ.
ಸಂತ ರಫ್ಕಾ
ಭಾನುವಾರ, ಮಾರ್ಚ್ 23 ರಂದು, ಲೆಬನಾನಿನ ಕ್ರೈಸ್ತರು ಸಂತ ರಫ್ಕಾ ಅರೆ-ರಾಯಸ್ ರವರ ಹಬ್ಬವನ್ನು ಆಚರಿಸಿದರು, ಇದು ವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವದ ಉದಾಹರಣೆಯಾಗಿದೆ.
ಚಾನನೀರ್‌ನ ನಿವಾಸಿಗಳು ಆಕೆಯ ಅವಶೇಷಗಳನ್ನು ದಿವ್ಯಬಲಿಪೂಜೆಯೊಂದಿಗೆ, ಸ್ತುತಿಸ್ತೋತ್ರಗಳು ಮತ್ತು ಬೀದಿಗಳಲ್ಲಿ ಹೂವುಗಳನ್ನು ಹಾಕಿ, ಪ್ರಾರ್ಥನೆಗಳ ಮೂಲಕ ಆಕೆಯನ್ನು ಪೂಜಿಸಿದರು.
1832ರಲ್ಲಿ ಜನಿಸಿದ ಮರೋನೈಟ್ ಕನ್ಯಾಸ್ತ್ರಿಯು ಅಚಲವಾದ ವಿಶ್ವಾಸದೊಂದಿಗೆ ಕುರುಡುತನ ಮತ್ತು ಪಾರ್ಶ್ವವಾಯುವನ್ನು ಸ್ವೀಕರಿಸುವ ಮೂಲಕ ತನ್ನ ದೊಡ್ಡ ನೋವನ್ನು ಸಹಿಸಿಕೊಳ್ಳುತ್ತಾರೆ. ಆಕೆಯು 1914ರಲ್ಲಿ ನಿಧನರಾದರು ಮತ್ತು 2001ರಲ್ಲಿ ಸಂತ ಪದವಿಗೇರಿಸಪ್ಲಟ್ಟರು. ಅವರ ಪ್ರೀತಿ ಮತ್ತು ಧೈರ್ಯದ ಉದಾಹರಣೆಯು ಭಕ್ತವಿಶ್ವಾಸಿಗಳನ್ನು ಪ್ರೇರೇಪಿಸುತ್ತದೆ.
ತಪಸ್ಸುಕಾಲವು ಮುಂದುವರಿಯುತ್ತದೆ
ಭಾನುವಾರ, ಪೂರ್ವದ ಧರ್ಮಸಭೆಗಳು, ತಮ್ಮ ಸಂಪ್ರದಾಯಗಳ ಪ್ರಕಾರ ತಮ್ಮ ತಪಸ್ಸುಕಾಲದ ಪ್ರಯಾಣವನ್ನು ಮುಂದುವರೆಸಿದವು.
ಬೈಜಾಂಟೈನ್ ಸಂಪ್ರದಾಯವು ಶಿಲುಬೆಯ ಭಾನುವಾರವನ್ನು ಆಚರಿಸಿತು, ಈ ಶಿಲುಬೆಯ ಭಾನುವಾರವು ಸಾವಿನ ಮೇಲೆ ಕ್ರಿಸ್ತರ ವಿಜಯವನ್ನು ಗುರುತಿಸುತ್ತದೆ.
ಶಿಲುಬೆಯ ವಿಶೇಷ ಪೂಜೆ ನಡೆಯಿತು. ತಪಸ್ಸುಕಾಲದ ಪ್ರಯತ್ನಗಳಲ್ಲಿ ಅವರನ್ನು ಪ್ರೋತ್ಸಾಹಿಸಲು, ದೇವಾಲಯದ ಮಧ್ಯದಲ್ಲಿ ಶಿಲುಬೆಯನ್ನು ಇರಿಸಿ ಪೂಜಿಸಲಾಯಿತು ಮತ್ತು ಮಾನವನ ಜೀವೋದ್ಧಾರವು ಅಥವಾ ಮೋಕ್ಷ ಭಾಗ್ಯವು ಈ ಶಿಲುಬೆಯ ಮೂಲಕ ದೊರೆಯುತ್ತದೆ ಎಂದು ಭಕ್ತವಿಶ್ವಾಸಿಗಳಿಗೆ ನೆನಪಿಸುತ್ತದೆ.
ಅರ್ಮೇನಿಯನ್ ಧರ್ಮಸಭೆಗಳು ಆರ್ಥಿಕತೆಯ ಭಾನುವಾರವನ್ನು ಆಚರಿಸಿದವು, ವಿಶ್ವಾಸದ್ರೋಹಿ ಮೇಲ್ವಿಚಾರಕನ ಸಾಮತಿಯಿಂದ ಸ್ಫೂರ್ತಿ ಪಡೆದವು. ಅದರಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಧ್ಯಾತ್ಮಿಕ ಮೋಕ್ಷ ಭಾಗ್ಯವನ್ನು ಖಚಿತಪಡಿಸಿಕೊಳ್ಳಲು ಐಹಿಕ ಸರಕುಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕೆಂದು ಪ್ರಭುಯೇಸು ಉತ್ತೇಜಿಸುತ್ತಾರೆ.