ಹುಡುಕಿ

ಕುಕಿ ಪಾಲಿಸಿ
ನ್ಯಾವಿಗೇಷನ್‌ ಅನ್ನು ಸುಲಭವಾಗಿಸಲು ವ್ಯಾಟಿಕನ್‌ ನ್ಯೂಸ್‌ ಸುದ್ದಿತಾಣವು ತಾಂತ್ರಿಕ ಹಾಗೂ ಅದೇ ರೀತಿಯ ಕುಕಿಗಳನ್ನು ಬಳಸುತ್ತದೆ ಹಾಗೂ ಸೇವೆಗಳನ್ನು ಖಾತರಿಪಡಿಸುತ್ತದೆ. ಮುಂದುವರೆದು, ಥರ್ಡ್‌ ಪಾರ್ಟಿಗಳ ತಾಂತ್ರಿಕ ಹಾಗೂ ವಿಶ್ಲೇಷಣಾತ್ಮಕ ಕುಕಿಗಳನ್ನು ಸಹ ಬಳಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ. ಇದನ್ನು ಮುಚ್ಚುವ ಮೂಲಕ ನೀವು ಕುಕಿಗಳ ಬಳಕೆಗೆ ಒಪ್ಪುತ್ತೀರಿ.
ಒಪ್ಪಿಕೊಳ್ಳುತ್ತೇನೆ
 Padre Tomaz Mavrich, visita in Ucraina Padre Tomaz Mavrich, visita in Ucraina 

'ಡ್ರೋನ್‌ಗಳು ಮತ್ತು ಬಾಂಬ್‌ಗಳ ಅಡಿಯಲ್ಲಿ, ನಾನು ಉಕ್ರೇನ್‌ನಲ್ಲಿ ವೀರರನ್ನು ಕಂಡೆ'

ವಿನ್ಸೆಂಟಿಯನ್ಸ್‌ನ ಪ್ರಧಾನ ಶ್ರೇಷ್ಠಗುರುವಾದ ಟೊಮಾಜ್ ಮಾವ್ರಿಕ್ ರವರು, ದೇಶಾದ್ಯಂತ ಇರುವ ಧಾರ್ಮಿಕ ಸಭೆಗಳ ಸಮುದಾಯಗಳಿಗೆ ಈ ತಿಂಗಳು ಅವರ ಭೇಟಿಯ ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಸಮಯದಲ್ಲೂ ಅವರು ಹೇಗೆ ನಿರಂತರವಾಗಿ ಸಹಾಯವನ್ನು ನೀಡುತ್ತಿದ್ದಾರೆ ಎಂಬುದರ ಬಗ್ಗೆ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾರೆ.

ಸ್ವಿಟ್ಲಾನಾ ದುಖೋವಿಚ್

ಮೂರು ವರ್ಷಗಳ ಯುದ್ಧ, ಅಸಹನೀಯ ನೋವು ಮತ್ತು ಸಂಕಟದ ನಂತರವೂ, ಪ್ರತಿಯೊಬ್ಬರೂ ತಮ್ಮ ಸ್ಥಳದಲ್ಲಿ ಉಳಿಯುತ್ತಾರೆ, ಯಾವುದೇ ಕ್ಷಣದಲ್ಲಿ ಡ್ರೋನ್ ಬೀಳಬಹುದಾದ ಸ್ಥಳಗಳಲ್ಲಿ, ಅಥವಾ ಇತರ ರೀತಿಯ ಸ್ಫೋಟಕಗಳು ಅವರ ಮನೆ, ಅಪಾರ್ಟ್ಮೆಂಟ್ ಅಥವಾ ಅವರು ಒಂದು ಸೇರುವ ದೇವಾಲಯಗಳನ್ನು ಹೊಡೆಯಬಹುದು. ಅದನ್ನು ಲೆಕ್ಕಿಸದೆ, ಅವರು ಭೇಟಿಯಾಗುತ್ತಾರೆ, ಪ್ರಾರ್ಥನೆಯನ್ನು ಮುಂದುವರಿಸುತ್ತಾರೆ ಮತ್ತು ಯಾವುದೇ ಸಮಯದಲ್ಲೂ ಯಾರಿಗಾದರೂ ಸಹಾಯ ಮಾಡಲು ಸಿದ್ಧರಾಗಿದ್ದಾರೆ.

ಧರ್ಮಪ್ರಚಾರ ಮತ್ತು ಸಂತ ವಿನ್ಸೆಂಟ್ ಡಿ ಪಾಲ್ ರವರ ಡಾಟರ್ಸ್ ಆಫ್ ಚಾರಿಟಿ ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿ ಗುರುಗಳಾದ ಟೊಮಾಸ್ ಮಾವ್ರಿಕ್ ರವರು ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಅವಲೋಕನವನ್ನು ಮಾಡಿದರು, ಅವರು ಮಾರ್ಚ್ 10-22 ರಂದು ಯುದ್ಧ-ಹಾನಿಗೊಳಗಾದ ರಾಷ್ಟ್ರಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡಿದರು, ಅಲ್ಲಿ ಅವರು ವಿನ್ಸೆಂಟಿಯನ್ನರ ಸಭೆಯವರ ಸೇವಾ ಕಾರ್ಯಚಟುವಟಿಕೆಗಳನ್ನು ನೇರವಾಗಿ ವೀಕ್ಷಿಸಿದರು.

ಭಯವಿಲ್ಲದೆ ಒಗ್ಗಟ್ಟಾಗಿರುವುದು
ಅವರು ತಮ್ಮ ಭೇಟಿಯ ಉದ್ದೇಶಗಳನ್ನು ಹಂಚಿಕೊಂಡರು, "ನನ್ನ ಭೇಟಿಯು, ನಾವು ಅವರೊಂದಿಗೆ ಇದ್ದೇವೆ, ಮತ್ತು "ಸಭೆಯ ಪ್ರಸನ್ನತೆಯು ಪರೋಕ್ಷವಾಗಿ ಅವರೊಂದಿಗೆ ಇದೆ ಎಂದು ತೋರಿಸುವುದು, ಈ ಕ್ರಿಯೆಗಳು ನಾವು ಅವರನ್ನು ಮರೆತಿಲ್ಲ ಎಂದು ಖಚಿತಪಡಿಸುತ್ತದೆ.

ನಾವು ನಿರಂತರವಾಗಿ ಉಕ್ರೇನ್‌ಗಾಗಿ ಪ್ರಾರ್ಥಿಸುತ್ತೇವೆ ಮತ್ತು ದೂರವಾಣಿ ಅಥವಾ ಇಮೇಲ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತೇವೆ ಎಂದು ಧರ್ಮಗುರು ಮಾವ್ರಿಕ್ ರವರು ಹೇಳಿದರು.

ಅದೇನೇ ಇರಲಿ, ಈ ಪ್ರದೇಶವು ಕಷ್ಟಕರವಾಗಿರಬಹುದು ಅಥವಾ ಅಪಾಯಕಾರಿಯಾಗಿರಬಹುದು ಎಂಬುದನ್ನು ಲೆಕ್ಕಿಸದೆ ಒಂದು ಅಥವಾ ಎರಡು ಸ್ಥಳಗಳಲ್ಲ, ಆದರೆ ಎಲ್ಲವನ್ನೂ ನಾನೇ ಹೋಗಿ ನೋಡುವುದು ಉತ್ತಮ ಎಂದು ಅವರು ಗಮನಿಸಿದರು. ನನ್ನ ಸಹೋದ್ಯೋಗಿಗಳು ಅಲ್ಲಿದ್ದಾರೆ, ನಾನು ಕೂಡ ಅಲ್ಲಿರಬೇಕಾಗಿತ್ತು. ಧರ್ಮಗುರು ಟೊಮಾಜ್ ರವರು ಕೈವ್, ಒಡೆಸ್ಸಾ, ಖಾರ್ಕಿವ್, ಜಕರ್‌ಪಾಟಿಯಾ ಪ್ರದೇಶದ ಪೆರೆಚಿನ್, ಚೆರ್ನಿವ್ಟ್ಸಿ ಪ್ರದೇಶದಲ್ಲಿ ಸ್ಟೊರೊಜಿನೆಟ್ಸ್ ಮತ್ತು ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ಸ್ನಿಯಾಟಿನ್‌ನಲ್ಲಿರುವ ಧರ್ಮಪ್ರಚಾರಕ ಸಭೆಯ ಎಲ್ಲಾ ಆರು ಸಮುದಾಯಗಳನ್ನು ಭೇಟಿ ಮಾಡವುದರಲ್ಲಿ ಯಶಸ್ವಿಯಾದರು.

ನನ್ನನ್ನು,ನೀವು ಭಯಪಡುತ್ತೀರಾ ಎಂದು ಕೇಳಿದಾಗ, ಪ್ರಧಾನ ಶ್ರೇಷ್ಠಗುರುಗಳು ಹೀಗೆಂದು ಉತ್ತರಿಸಿದರು, "ಇಲ್ಲ, ಇಲ್ಲ, ನಾನು ಸಂಪೂರ್ಣವಾಗಿ ಶಾಂತಿಯಿಂದ ಇದ್ದೇನೆ. ಇಲ್ಲಿ ಕೈವ್‌ನಲ್ಲಿ, ಒಡೆಸ್ಸಾದಲ್ಲಿ, ಖಾರ್ಕಿವ್‌ನಲ್ಲಿ ಡ್ರೋನ್‌ಗಳು ಅಥವಾ ಸಮೀಪಿಸುತ್ತಿರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಸೈರನ್‌ಗಳನ್ನು ಕೇಳಿದರೂ ಸಹ, ನಾನು ಶಾಂತವಾಗಿದ್ದೇನೆ, "ಇದು ಒಂದು ಅನುಗ್ರಹವಾಗಿದೆ."

ಉದಾರ ಧರ್ಮಸಭೆ
ಧರ್ಮಗುರು ಟೊಮಾಜ್ ರವರು ಉಕ್ರೇನ್‌ಗೆ ಹೋಗಿದ್ದು, ಅಲ್ಲಿರುವ ಜನರ ಮಾತುಗಳು, ಪಾಠಗಳು ಅಥವಾ ಸಲಹೆಗಳನ್ನು ನೀಡಲು ಅಲ್ಲ, ಬದಲಿಗೆ ಅಲ್ಲಿರುವ ಜನರಿಂದ ಮತ್ತು ತಮ್ಮ ಸಹೋದ್ಯೋಗಿಗಳಿಂದ, ಜೀವನದ ಪಾಠಗಳನ್ನು ಕಲಿಯಲು, ಕೇಳಲು, ನೋಡಲು ಮತ್ತು ಜನರನ್ನು ಭೇಟಿ ಮಾಡಲು ಎಂದು ಸ್ಪಷ್ಟಪಡಿಸಿದರು. ಹಲವಾರು ಬಾರಿ ಮುಖಾಮುಖಿ ಸಂಭಾಷಣೆಯಲ್ಲಿ ನಾನು ಗಮನಿಸಿರುವುದು ಏನೆಂದರೆ ಪ್ರಾಥಮಿಕವಾಗಿ ವಿಶ್ವಾಸದ ಪುರಾವೆಯಾಗಿದೆ, "ನಾನು ಅವರಿಗೆ ಹೇಳಿದ್ದೇನೆ: 'ನೀವು ಪ್ರಾರ್ಥಿಸುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ, ಪ್ರಾರ್ಥಿಸುವುದನ್ನು ಮುಂದುವರಿಸಿ, ದೈವಾರಾಧನಾ ವಿಧಿಯಲ್ಲಿ ಭಾಗವಹಿಸಿರಿ, ನೀವು ಬದುಕಿರುವ ಮತ್ತು ಬದುಕುತ್ತಿರುವ ಈ ಭಯಾನಕ ಸಂದರ್ಭಗಳಲ್ಲಿಯೂ ಸಹ, ಯೇಸುವಿನ ಕೊನೆಯ ಪದವನ್ನು ಮರಯಬೇಡಿ, ಸತ್ಯವು ನಶಿಸಿಹೋಗುವುದಿಲ್ಲ ಎಂದು ವಿಶ್ವಾಸಿಸುವುದನ್ನು ಮುಂದುವರಿಸಿರಿ.

ಧರ್ಮಗುರುವಿಗೆ ಹೊಳೆದ ಇನ್ನೊಂದು ವಿಷಯವೆಂದರೆ, ಅಗತ್ಯವಿರುವವರಿಗೆ ಸಹಾಯ ಮಾಡಿದ ಅನೇಕ ಯಾಜಕರು, ಸನ್ಯಾಸಿಗಳು ಮತ್ತು ಸಾಮಾನ್ಯ ಜನರ ಔದಾರ್ಯ.

ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಅವರು ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ ಆದರೆ ಎಲ್ಲರಿಗೂ ಸಹಾಯ ಮಾಡಲು ಸಿದ್ಧರಾಗಿದ್ದಾರೆ ಎಂದು ನಾನು ಗಮನಿಸಿದ್ದೇನೆ, ಇದು ವಿವಿಧ ಗ್ರಾಮಗಳು, ನಗರಗಳು ಮತ್ತು ಸಾಧ್ಯವಾದರೆ, ಯುದ್ಧದಲ್ಲಿರುವ ಸೈನಿಕರಿಗೂ ಸಹ ಮಾನವೀಯ ಸಹಾಯವನ್ನು ತರುತ್ತದೆ.
 

27 ಮಾರ್ಚ್ 2025, 13:59
Prev
April 2025
SuMoTuWeThFrSa
  12345
6789101112
13141516171819
20212223242526
27282930   
Next
May 2025
SuMoTuWeThFrSa
    123
45678910
11121314151617
18192021222324
25262728293031