ವಲಸೆ ಮತ್ತು ಕಾನೂನಿನ ನಿಯಮದ ಬಗ್ಗೆ ಚರ್ಚಿಸಲು ರೋಮ್‌ನಲ್ಲಿ ಶಿಕ್ಷಣ ತಜ್ಞರು ಒಟ್ಟುಗೂಡುತ್ತಾರೆ
ವ್ಯಾಟಿಕನ್ ಸುದ್ದಿ
ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯ ಮತ್ತು ರೋಮ್‌ನ ಜಗದ್ದಗುರುಗಳ ಗ್ರೆಗೋರಿಯನ್ ವಿಶ್ವವಿದ್ಯಾಲಯಗಳು ಒಟ್ಟಾಗಿ 'ಜಾಗತಿಕ ವಲಸೆ ಮತ್ತು ಕಾನೂನಿನ ನಿಯಮ' ಕುರಿತು ಸಮ್ಮೇಳನವನ್ನು ಆಯೋಜಿಸಿದ್ದು, ಇದು ಇಂದು, ಏಪ್ರಿಲ್ 11 ಶುಕ್ರವಾರ ಮತ್ತು ನಾಳೆ ರೋಮ್‌ನಲ್ಲಿ ನಡೆಯಲಿದೆ.
ಇಂದು ವಿಶ್ವದಾದ್ಯಂತ 281 ಮಿಲಿಯನ್‌ಗಿಂತಲೂ ಹೆಚ್ಚು ಜನರು ತಮ್ಮ ಜನ್ಮಸ್ಥಳ ಅಥವಾ ತಾಯ್ನಾಡನಿಂದ ಹೊರಗೆ ವಾಸಿಸುತ್ತಿದ್ದಾರೆ ಎಂದು ಕಾರ್ಯಕ್ರಮದ ಜಾಲತಾಣದ ಪುಟವು ಹೇಳುತ್ತದೆ. ಲಕ್ಷಾಂತರ ವಲಸಿಗರು, ಅವರ ಮೂಲ ದೇಶಗಳು ಮತ್ತು ಆತಿಥೇಯ ರಾಷ್ಟ್ರಗಳು ವಲಸೆಯಿಂದ ಪ್ರಯೋಜನ ಪಡೆದಿವೆ, ಆದರೆ ಇಂದು ವಲಸೆಯ ವಿಷಯವು ವಿಶ್ವದಾದ್ಯಂತ ಅನೇಕ ಸ್ಥಳಗಳಲ್ಲಿ, ವಿಶೇಷವಾಗಿ 'ಜಾಗತಿಕ ಉತ್ತರ'ದಲ್ಲಿ ರಾಜಕೀಯ ವಿವಾದಾತ್ಮಕ ವಿಷಯವಾಗಿದೆ.
"ಈ ಸಮ್ಮೇಳನವು ವಲಸೆ ಬಿಕ್ಕಟ್ಟಿನ ಐತಿಹಾಸಿಕ ಕಾರಣಗಳು, ಉಲ್ಬಣಗೊಳ್ಳುತ್ತಿರುವ ಸಮಕಾಲೀನ ಒತ್ತಡಗಳು ಮತ್ತು ಪರಿಣಾಮಕಾರಿ ವಲಸೆ ನಿಯಂತ್ರಣದೊಂದಿಗೆ ಕಾನೂನು ನಿಯಮದ ತತ್ವಗಳನ್ನು ಮರು ವ್ಯಾಖ್ಯಾನಿಸುವ ಸವಾಲುಗಳನ್ನು ಪರಿಶೋಧಿಸುತ್ತದೆ, ಇದು ವಿಶ್ವಗುರು ಫ್ರಾನ್ಸಿಸ್ ರವರ 'ನೀವು ಅಪರಿಚಿತರಿಗೆ ಅಪರಾಧ ಮಾಡಬಾರದು ಅಥವಾ ದಬ್ಬಾಳಿಕೆ ಮಾಡಬಾರದು' ಎಂಬ ಬೈಬಲ್ ನ ಉಪದೇಶದ ಜ್ಞಾಪನೆಯಿಂದ ಮಾರ್ಗದರ್ಶಿಸಲ್ಪಡುತ್ತದೆ" ಎಂದು ವಿವರಣೆಯು ಮುಂದುವರಿಯುತ್ತದೆ.
ಸಮ್ಮೇಳನದಲ್ಲಿ ಭಾಷಣಕಾರರಲ್ಲಿ ಲೊಯೊಲಾ ಚಿಕಾಗೋ ಮತ್ತು ಗ್ರೆಗೋರಿಯನ್ ಎರಡರಲ್ಲೂ ಶೈಕ್ಷಣಿಕ ಸಿಬ್ಬಂದಿ ಮತ್ತು ಲತೀನ್ ಅಮೆರಿಕದ ಜಗದ್ಗುರುಗಳ ಆಯೋಗದ ಮುಖ್ಯಸ್ಥೆ ಎಮಿಲ್ಸ್ ಕೂಡಾ ಸೇರಿದ್ದಾರೆ.
ಲೊಯೊಲಾ ವಿಶ್ವವಿದ್ಯಾಲಯ ಚಿಕಾಗೋವು ಮಧ್ಯಪಶ್ಚಿಮ ಅಮೇರಿಕ ನಗರದಲ್ಲಿ ನೆಲೆಗೊಂಡಿರುವ ಜೆಸ್ವಿಟ್ ಸಂಸ್ಥೆಯಾಗಿದ್ದು, 1870 ರಲ್ಲಿ ಸ್ಥಾಪನೆಯಾಯಿತು. 1551ರಲ್ಲಿ ಲೊಯೊಲಾದ ಸಂತ ಇಗ್ನೇಷಿಯಸ್ ಸ್ಥಾಪಿಸಿದ ಜಗದ್ಗುರುಗಳ ಗ್ರೆಗೋರಿಯನ್ ವಿಶ್ವವಿದ್ಯಾಲಯವು ಜೆಸ್ವಿಟ್ ಸಂಸ್ಥೆಯಾಗಿದ್ದು, ಧರ್ಮಸಭೆಗೆ ಸಂಬಂಧಿಸಿದ ಪದವಿಗಳನ್ನು ನೀಡುತ್ತದೆ.