ಭರವಸೆ ಮೂಡಿಸುವ ಕಾರ್ಯದಲ್ಲಿ ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರುಗಳ ಕೊಡುಗೆ
ಲಿಸಾ ಝೆಂಗಾರಿನಿ
ಮುಂದಿನ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸಲು ಆಸ್ಟ್ರೇಲಿಯಾದ ಮತದಾರರು ಮೇ 3ರಂದು ಮತದಾನಕ್ಕೆ ತೆರಳಲಿದ್ದಾರೆ, ಹಾಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಲೇಬರ್ ರವರು ಪಕ್ಷಕ್ಕೆ ಎರಡನೇ ಬಾರಿಯ ಅವಧಿಗೆ ಮರುಚುನಾವಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ, ಕೇಂದ್ರ-ಬಲ ಪ್ರಗತಿಪರ-ದೇಶೀಯ ಒಕ್ಕೂಟದ ನಾಯಕ, ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ರವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಆರ್ಥಿಕ ಹೋರಾಟಗಳು, ಅಂತರರಾಷ್ಟ್ರೀಯ ಅನಿಶ್ಚಿತತೆ ಮತ್ತು ರಾಜಕೀಯ ಧ್ರುವೀಕರಣದ ನಡುವೆ ನಡೆಯುತ್ತಿರುವ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳೆಂದರೆ, ದೈನಂದಿನ ಜೀವನ ಶೈಲಿಯ ವೆಚ್ಚ, ವಸತಿ, ಜೊತೆಗೆ ಆರೋಗ್ಯ ರಕ್ಷಣೆ, ವಲಸೆ, ಅಪರಾಧ ಮತ್ತು ಹವಾಮಾನ ಕ್ರಮಗಳು.
ಸಾಮಾನ್ಯ ಒಳಿತನ್ನು ಮುನ್ನಡೆಸಲು ಮತ್ತು ಭರವಸೆಗೆ ದಾರಿ ಮಾಡಿಕೊಡಲು ಒಂದು ಅವಕಾಶ
ಮತದಾನಕ್ಕೂ ಮುನ್ನ, ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರುಗಳು "ಜೂಬಿಲಿ ವರ್ಷದಲ್ಲಿ ಭರವಸೆಯನ್ನು ತರಲು ಕರೆಯಲಾಗಿದೆ" ಎಂಬ ಶೀರ್ಷಿಕೆಯ ಚುನಾವಣಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದು ಕಥೋಲಿಕ ಮತದಾರರನ್ನು ಜೂಬಿಲಿ ವರ್ಷದ ವಿಷಯದಿಂದ ಪ್ರೇರಿತರಾಗಿ "ಭರವಸೆಯ ಜನರಾಗಲು” ಮತ್ತು ರಾಷ್ಟ್ರದ ನೈತಿಕ ಹಾಗೂ ಸಾಮಾಜಿಕ ದಿಕ್ಕನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಗುರುತಿಸಲು ಒತ್ತಾಯಿಸುತ್ತದೆ.
ಮತದಾನವು ಕೇವಲ ನಾಗರಿಕ ಕರ್ತವ್ಯವಲ್ಲ, ಬದಲಿಗೆ ಸಾಮಾನ್ಯ ಒಳಿತನ್ನು ಮುನ್ನಡೆಸಲು ಮತ್ತು ಭರವಸೆಗೆ ದಾರಿ ಮಾಡಿಕೊಡಲು ಒಂದು ಅವಕಾಶ ಎಂದು ಜೂಬಿಲಿಯು ನಮಗೆ ನೆನಪಿಸುತ್ತದೆ ಎಂದು ಅವರು ಬರೆದಿದ್ದಾರೆ.
ಕಥೋಲಿಕರು ಚಿಂತಿಸಬೇಕಾದ ಪ್ರಮುಖ ನೈತಿಕ ಮತ್ತು ಸಾಮಾಜಿಕ ಸಮಸ್ಯೆಗಳು
ಕಥೋಲಿಕರು ಮತ ಚಲಾಯಿಸುವ ಮೊದಲು ಯೋಚಿಸಬೇಕಾದ ಕೆಲವು ಪ್ರಮುಖ ನೈತಿಕ ಮತ್ತು ಸಾಮಾಜಿಕ ವಿಷಯಗಳನ್ನು ಈ ಹೇಳಿಕೆಯು ಎತ್ತಿ ತೋರಿಸುತ್ತದೆ. ಅವು ಗರ್ಭಧಾರಣೆಯಿಂದ ನೈಸರ್ಗಿಕ ಮರಣದವರೆಗೆ ಜೀವನದ ಪಾವಿತ್ರ್ಯವನ್ನು ಎತ್ತಿಹಿಡಿಯುವುದನ್ನು ಒಳಗೊಂಡಿವೆ; ಕುಟುಂಬಗಳಿಗೆ ಬೆಂಬಲ; ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಹಕ್ಕುಗಳು; ದೇವರ ಸೃಷ್ಟಿಯ ಜವಾಬ್ದಾರಿಯುತ ಉಸ್ತುವಾರಿ, ಸಾಮಾನ್ಯ ಒಳಿತನ್ನು ಉತ್ತೇಜಿಸುವುದು ಮತ್ತು ಆಸ್ಟ್ರೇಲಿಯದ ನಾಗರಿಕರೆಲ್ಲರು ಅಭಿವೃದ್ಧಿ ಹೊಂದಬಹುದಾದ ನ್ಯಾಯಯುತ ಸಮಾಜವನ್ನು ಬೆಳಸುವುದು.
ಹೇಳಿಕೆಯ ಕೊನೆಯಲ್ಲಿ ಸೇರಿಸಲಾದ ಪ್ರಾರ್ಥನೆಯು, ರಾಷ್ಟ್ರ ಮತ್ತು ಅದರ ವೈವಿಧ್ಯಮಯ ಜನರ ಮೇಲೆ ಪ್ರಭುಕ್ರಿಸ್ತನ ಮಾರ್ಗದರ್ಶನವನ್ನು ಮತ್ತು ಆತನ ಕೃಪೆಯ ಮೂಲಕ ಅವರ ಜೀವನವನ್ನು ಪರಿವರ್ತಿಸುವಂತೆ ಕೋರುತ್ತದೆ.
ಕಥೋಲಿಕ ಸಾಮಾಜಿಕ ಬೋಧನೆಯ ತತ್ವಗಳು
ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರುಗಳು ಕಥೋಲಿಕ ಸಾಮಾಜಿಕ ಬೋಧನೆಯ ನಾಲ್ಕು ಮೂಲಭೂತ ತತ್ವಗಳನ್ನು ಪುನರುಚ್ಚರಿಸುವ ಮೂಲಕ ಮುಕ್ತಾಯಗೊಳಿಸುತ್ತಾರೆ: ಮಾನವ ಘನತೆ, ಸಾಮಾನ್ಯ ಒಳಿತನ್ನು ಉತ್ತೇಜಿಸುವುದು; ಒಂದು ನಿರ್ಧಾರ ಅಥವಾ ನೀತಿಯಿಂದ ನೇರವಾಗಿ ಪರಿಣಾಮ ಬೀರುವ ಜನರು ಮತ್ತು ಒಗ್ಗಟ್ಟಿನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪಾತ್ರವನ್ನು ಹೊಂದಿರಬೇಕು. ಇದು ಮಾನವರು ಒಂದು ಮಾನವ ಕುಟುಂಬವನ್ನು ರೂಪಿಸುವ ಮತ್ತು ರಾಷ್ಟ್ರೀಯ, ಜನಾಂಗೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಸೈದ್ಧಾಂತಿಕ ವ್ಯತ್ಯಾಸಗಳ ಹೊರತಾಗಿಯೂ ಪರಸ್ಪರ ಜವಾಬ್ದಾರಿಗಳನ್ನು ಹೊಂದಿರುವ ಸಾಮಾಜಿಕ ಜೀವಿಗಳು ಎಂದು ಒಪ್ಪಿಕೊಳ್ಳುತ್ತದೆ.