ಬಹ್ರೇನ್‌ನಲ್ಲಿ ಜಗದ್ಗುರುಗಳ ಪವಿತ್ರ ಬಾಲ್ಯದ ಹೊಸ ಕೇಂದ್ರವನ್ನು ಉದ್ಘಾಟಿಸಲಾಗಿದೆ
ಕೀಲ್ಸ್ ಗುಸ್ಸಿ
ಬಹ್ರೇನ್‌ನ ಅರೇಬಿಯಾದ ಮಾತೆ ಮರಿಯ ಪ್ರಧಾನಾಲಯದಲ್ಲಿ ಮಾರ್ಚ್ 28 ರಂದು, ಜಗದ್ಗುರುಗಳ ಪವಿತ್ರ ಬಾಲ್ಯದ ಸಮಾಜವು ಹೊಸ ಕೇಂದ್ರವನ್ನು ಅರೇಬಿಯಾದಲ್ಲಿ ಹೊಸ ಕೇಂದ್ರವನ್ನು ಉದ್ಘಾಟಿಸಿತು, ಈ ಉದ್ಘಾಟನೆಯು ಸ್ಥಳೀಯ ಕಥೋಲಿಕ ಸಮುದಾಯದಲ್ಲಿ ಪ್ರಮುಖ ಕ್ಷಣವನ್ನು ಸೂಚಿಸಿತು.
ಪ್ರಪಂಚದಾದ್ಯಂತ 130ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬರುವ ಈ ಸಮಾಜವು, ಪ್ರಪಂಚದಾದ್ಯಂತ ಮಕ್ಕಳ ದುಃಖವನ್ನು ನಿವಾರಿಸಲು ಧರ್ಮಸಭೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಜಾಗತಿಕ ಉಪಕ್ರಮವಾಗಿ, ಅಗತ್ಯವಿರುವ ಮಕ್ಕಳನ್ನು ಬೆಂಬಲಿಸುವ ಮಹತ್ವಕ್ಕಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ, ಜಗದ್ಗುರುಗಳ ಪವಿತ್ರ ಬಾಲ್ಯದ ಸಮಾಜವು ಬಡತನ, ಸಂಘರ್ಷ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಬಿಕ್ಕಟ್ಟಿನಲ್ಲಿ ವಾಸಿಸುವ ಮಕ್ಕಳಿಗೆ ಸಹಾಯವನ್ನು ಒದಗಿಸುತ್ತಿದೆ.
ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಒಟ್ಟಾರೆ ಯೋಗಕ್ಷೇಮದ ಮೂಲಭೂತ ಸಂಪನ್ಮೂಲಗಳು ವಿಶ್ವಾದ್ಯಂತ ಮಕ್ಕಳಿಗೆ ಲಭ್ಯವಾಗುವಂತೆ ಒಗ್ಗಟ್ಟಿನ, ಪ್ರಾರ್ಥನೆ, ದಾನ, ಮತ್ತು ಪರಸ್ಪರ ಬೆಂಬಲವನ್ನು ಬೆಳೆಸುವುದು ಸಂಸ್ಥೆಯ ಧ್ಯೇಯವಾಗಿದೆ.
ಪ್ರಾರ್ಥನೆಯು ಜೀವನವನ್ನು ಬದಲಾಯಿಸಬಹುದು
ಧರ್ಮಾಧ್ಯಕ್ಷರಾದ ಅಲ್ಡೊ ಬೆರಾರ್ಡಿರವರು ಅರ್ಪಿಸಿದ ದಿವ್ಯಬಲಿಪೂಜೆಯ ಮೂಲಕ ಉತ್ತರ ಅರೇಬಿಯಾದ ಪ್ರೇಷಿತ ಧರ್ಮಪ್ರಾಂತ್ಯದ ಸಮಾಜದಲ್ಲಿ ಜಗದ್ಗುರುಗಳ ಪವಿತ್ರ ಬಾಲ್ಯದ ಹೊಸ ಕೇಂದ್ರವನ್ನು ಸ್ಥಾಪಿಸಿದರು, ಇದರ ಅಧಿಕಾರ ವ್ಯಾಪ್ತಿಯು ನಾಲ್ಕು ದೇಶಗಳನ್ನು ಒಳಗೊಂಡಿದೆ: ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ. ಅವರ ಪ್ರವಚನದ, ಚಿಂತನೆಗಳನ್ನು ಮತ್ತು ಕ್ರಿಯೆಯ ಕರೆಯಿಂದ ತುಂಬಿದ್ದು, ಪ್ರಸ್ತುತ ಜನರು ಜಗದ್ಗುರುಗಳ ಸಮಾಜಕ್ಕೆ ಮುಕ್ತವಾಗಿರಲು ಸವಾಲು ಹಾಕಿದರು.
ಧರ್ಮಾಧ್ಯಕ್ಷರು ಮಕ್ಕಳ ಜೀವನದಲ್ಲಿ ಪ್ರಾರ್ಥನೆಯ ಮಹತ್ವವನ್ನು ಒತ್ತಿ ಹೇಳಿದರು, "ನಾವು ಮಕ್ಕಳಿಗಾಗಿ ಪ್ರಾರ್ಥಿಸಬೇಕು, ಆದರೆ ನಾವು ಒಬ್ಬರಿಗೊಬ್ಬರು ಪ್ರಾರ್ಥಿಸಲು ಅವರಿಗೆ ಕಲಿಸಬೇಕು."
ಪ್ರಾರ್ಥನೆ ಮತ್ತು ಪರಸ್ಪರ ಕ್ರಿಯೆಯು ಅತ್ಯಂತ ದುರ್ಬಲರ ಜೀವನವನ್ನು ಬದಲಾಯಿಸಬಲ್ಲದು ಎಂದು ಅವರು ಒತ್ತಿ ಹೇಳಿದರು.
ಜಗದ್ಗುರುಗಳ ಪವಿತ್ರ ಬಾಲ್ಯದ ಸಮಾಜವು ಕೇವಲ ಮಕ್ಕಳಿಗೆ ಆಟದ ವಸ್ತು ಅಥವಾ ಇತರ ವಸ್ತುಗಳನ್ನು ನೀಡುವುದಲ್ಲ. ಬದಲಿಗೆ, ಅದನ್ನು ಮೀರಿ ಅವರಿಗೆ ಅವಶ್ಯವಾದುವುಗಳನ್ನು ಪೂರೈಸುವುದು ಮತ್ತು ಮಕ್ಕಳಲ್ಲಿ ಜವಾಬ್ದಾರಿ ಹಾಗೂ ಒಗ್ಗಟ್ಟಿನ ಸಾರ್ವತ್ರಿಕ ಪ್ರಜ್ಞೆಯನ್ನು ಸೃಷ್ಟಿಸುವತ್ತ ಗಮನಹರಿಸುತ್ತದೆ.
ಉದ್ಘಾಟನಾ ಸಮಾರಂಭದ ದಿವ್ಯಬಲಿಪೂಜೆಯ ಕೊನೆಯಲ್ಲಿ, ಸುಮಾರು 46 ಮಕ್ಕಳು ಜಗದ್ಗುರುಗಳ ಪವಿತ್ರ ಬಾಲ್ಯದ ಸಮಾಜಕ್ಕೆ ತಮ್ಮ ಬದ್ಧತೆಯ ಭಾಗವಾಗಿ ಪ್ರಾರ್ಥಿಸಲು, ಹಂಚಿಕೊಳ್ಳಲು ಮತ್ತು ಸಹಾಯ ಮಾಡಲು ಸಾಂಭ್ರಮಿಕ ಪ್ರತಿಜ್ಞೆ ಮಾಡಿದರು.
ಸಮಾಜದ ಇತಿಹಾಸ
1800 ರ ದಶಕದ ಮಧ್ಯಭಾಗದಲ್ಲಿ, ಫ್ರೆಂಚ್ ಧರ್ಮಾಧ್ಯಕ್ಷರಾದ ಚಾರ್ಲ್ಸ್ ಡಿ ಫೋರ್ಬಿನ್-ಜಾನ್ಸನ್, ದೀಕ್ಷಾಸ್ನಾನ ಸಂಸ್ಕಾರವಿಲ್ಲದೆ ಚೀನಾದಲ್ಲಿ ಮಕ್ಕಳು ಸಾಯುತ್ತಿದ್ದಾರೆ ಎಂಬ ಸುದ್ದಿಯಿಂದ ಪ್ರೇರೇಪಿಸಲ್ಪಟ್ಟರು, ವಿಶ್ವಾಸದ ಪ್ರಚಾರಕ್ಕಾಗಿ ಜಗದ್ಗುರುಗಳ ಪವಿತ್ರ ಬಾಲ್ಯದ ಸಮಾಜದ ಸಂಸ್ಥಾಪಕರಿಂದ ಸಹಾಯವನ್ನು ಕೇಳಿದರು.
ಧರ್ಮಾಧ್ಯಕ್ಷರಾದ ಡಿ ಫೋರ್ಬಿನ್-ಜಾನ್ಸನ್ ರವರು ಫ್ರಾನ್ಸ್ ನ ಮಕ್ಕಳನ್ನು ಪ್ರಾರ್ಥನೆ ಮತ್ತು ದೃಢವಾದ ಕ್ರಿಯೆಯ ಮೂಲಕ ಮಕ್ಕಳಿಗೆ ಸಹಾಯ ಮಾಡುವ ಕಲ್ಪನೆಯನ್ನು ಹೊಂದಿದ್ದರು.
ಪ್ರತಿ ಮಗುವು ಮಾಡಿದ ಬದ್ಧತೆಯೆಂದರೆ ಮಾತೆಮೇರಿಗೆ ಒಂದು ಜಯವಾಗಲಿ ಎಂದು ಪ್ರಾರ್ಥಿಸುವುದು ಮತ್ತು ತಿಂಗಳಿಗೆ ಒಂದು ಸಣ್ಣ ನಾಣ್ಯವನ್ನು ನೀಡುವುದು. ಮೇ 19, 1843 ರಂದು, ಈ ಸಮಾಜವು "ಮಕ್ಕಳಿಗೆ ನೆರವಾಗುವ ಮಕ್ಕಳು" ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಯಿತು.