ಫಿಲಿಪೈನ್ಸ್: ಚುನಾವಣೆಗಳಿಗೆ ಮುಂಚಿತವಾಗಿ ಧರ್ಮಸಭೆಯು ವಿವೇಚನೆಗೆ ಕರೆ ನೀಡುತ್ತದೆ
ಲಿಸಾ ಝೆಂಗಾರಿನಿ
ಸುಮಾರು 70 ಮಿಲಿಯನ್ ಫಿಲಿಪೈನ್ ನಾಗರಿಕರು ಮೇ 12, 2025 ರಂದು ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಮತ ಚಲಾಯಿಸಲಿದ್ದಾರೆ, ಸ್ಥಳೀಯ ಸರ್ಕಾರಗಳಿಗೆ ಶಾಸಕರು ಮತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ, ಶಾಸಕಾಂಗ, ಸ್ಥಳೀಯ ಮತ್ತು ಪ್ರಾದೇಶಿಕ ಹುದ್ದೆಗಳಿಗೆ 18,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಡುಟರ್ಟೆ v/s ಮಾರ್ಕೋಸ್
ಈ ಮತಪತ್ರವು ಹಾಲಿ ಅಧ್ಯಕ್ಷ ಫರ್ಡಿನಾಂಡ್ "ಬಾಂಗ್‌ಬಾಂಗ್" ಕಿರಿಯ ಮಾರ್ಕೋಸ್ಗೆ ಸಾರ್ವಜನಿಕ ಬೆಂಬಲದ ಮಾಪಕವಾಗಲಿದೆ ಮತ್ತು 2022ರಲ್ಲಿ ಮಾರ್ಕೋಸ್ ರವರನ್ನು ಅಧಿಕಾರಕ್ಕೆ ತಂದ ಹನ್ನೊಂದು ಪ್ರಬಲ "ಯುನಿಟೀಮ್" ಮೈತ್ರಿಕೂಟದ ತೀವ್ರ ಕುಸಿತದ ನಂತರ, ಇದನ್ನು ಮಾಜಿ ಅಧ್ಯಕ್ಷರ ಮಗಳು ಸಾರಾ ಡುಟರ್ಟೆ ಉಪಾಧ್ಯಕ್ಷೆಯಾಗಿ, ಪ್ರಭಾವಿ ಡುಟರ್ಟೆ ಮತ್ತು ಮಾರ್ಕೋಸ್ ರವರ ರಾಜಕೀಯ ರಾಜವಂಶಗಳ ನಡುವಿನ ಪ್ರಾಕ್ಸಿ ಯುದ್ಧವೆಂದು ಬಿಂಬಿಸಲಾಗಿದೆ.
ಭ್ರಷ್ಟಾಚಾರ ಮತ್ತು ದಂಗೆಗೆ ಪ್ರಚೋದನೆ ಆರೋಪದ ಮೇಲೆ ದೋಷಾರೋಪಣೆ ದೂರು ದಾಖಲಿಸಿ ಕೇವಲ ಒಂದು ತಿಂಗಳ ನಂತರ, ಮಾರ್ಚ್ 11 ರಂದು ಅವರ ತಂದೆ ರೊಡ್ರಿಗೋ ಡುಟರ್ಟೆರವರನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಹಸ್ತಾಂತರಿಸಲಾಯಿತು.
ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ
ಹಿಂದಿನ ಚುನಾವಣೆಗಳಂತೆ, ಚುನಾವಣಾ ಪ್ರಕ್ರಿಯೆಯು ಮತ ಖರೀದಿ, ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ತಪ್ಪು ಮಾಹಿತಿಯಂತಹ ವ್ಯವಸ್ಥಿತ ಸಮಸ್ಯೆಗಳಿಂದ ಮುಚ್ಚಿಹೋಗಿದೆ.
"ಯುನಿಟೀಮ್" ಈಗ ಮುರಿದುಬಿದ್ದಿರುವುದರಿಂದ, ಫೆಬ್ರವರಿ 11 ರಂದು ಪ್ರಾರಂಭವಾದ ಚುನಾವಣಾ ಪ್ರಚಾರವು ಹೆಚ್ಚು ಹೆಚ್ಚು ಧ್ರುವೀಕರಣಗೊಳ್ಳುತ್ತಿದೆ ಮತ್ತು ಸಾಮಾಜಿಕ ಮಾಧ್ಯಮವು ಮತ್ತೆ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಮುಖಾಮುಖಿಯಾಗುತ್ತಿದೆ.
ದ್ವೇಷಪೂರಿತ ಮಾತು
ಕ್ಯಾಥೋಲಿಕ್ ಚರ್ಚ್ ಮೂಲದ ಸಮೀಕ್ಷೆಯ ಕಾವಲು ಸಂಸ್ಥೆಯಾದ ಧರ್ಮಕೇಂದ್ರದ ಜವಾಬ್ದಾರಿಯುತ ಮತದಾನದ ಪಾಲನಾ ಸಮಿತಿ (ಪ್ಯಾರಿಷ್ ಪ್ಯಾಸ್ಟೋರಲ್ ಕೌನ್ಸಿಲ್ ಫಾರ್ ರೆಸ್ಪಾನ್ಸಿಬಲ್ ವೋಟಿಂಗ್-PPCRV). ಈ ವಿಷಯಗಳ ಬಗ್ಗೆಬಹಳ ಕಳವಳ ವ್ಯಕ್ತಪಡಿಸಿದೆ ಮತ್ತು ಕೆಲವು ಅಭ್ಯರ್ಥಿಗಳು ಮತ್ತು ಇತರ ಧರ್ಮಸಭೆಗಳು ಹಾಗೂ ನಾಗರಿಕ ಸಂಸ್ಥೆಗಳ ಇತ್ತೀಚಿನ ಲೈಂಗಿಕ ಹೇಳಿಕೆಗಳನ್ನು ಬಲವಾಗಿ ಖಂಡಿಸಿದೆ.
ಗುಂಪಿನ ವಕ್ತಾರೆ ಅನಾ ಸಿಂಗ್ಸನ್ ರವರ ಪ್ರಕಾರ, ಈ ಘಟನೆಗಳು ಎಲ್ಲಾ ಮತದಾರರು ಮತದಾನದಲ್ಲಿ ಬುದ್ಧಿವಂತಿಕೆಯಿಂದ ಮತದಾನ ಮಾಡಿ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಲು "ಎಚ್ಚರಗೊಳ್ಳುವ ಕರೆ" ಯಾಗಿ ಕಾರ್ಯನಿರ್ವಹಿಸಬೇಕು. ಮತವು ಪವಿತ್ರವಾದುದು ಮತ್ತು ಪ್ರಮುಖ ಮೌಲ್ಯಗಳ ಆಧಾರದ ಮೇಲೆ ನಾವು ಅಭ್ಯರ್ಥಿಗಳನ್ನು ವಿವೇಚಿಸಿ ಆಯ್ಕೆ ಮಾಡಬೇಕು ಎಂಬುದನ್ನು ಅವು ನಮಗೆ ನೆನಪಿಸುತ್ತವೆ ಎಂದು ಅವರು "ದೇವರ ಭಯ, ಪ್ರಾಮಾಣಿಕತೆ, ಶಿಕ್ಷಣ, ಶ್ರದ್ಧೆ, ಸಹಾಯಶೀಲತೆ, ಕಾಳಜಿ ಮತ್ತು ಸಾಮಾನ್ಯ ಒಳಿತಿಗಾಗಿ ಪ್ರೀತಿ"ಯನ್ನು ಉಲ್ಲೇಖಿಸಿ ಈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆಗಳ ಕುರಿತು ಧರ್ಮಾಧ್ಯಕ್ಷರುಗಳ ಪಾಲನಾ ಪತ್ರ
ಅಲ್ಲದೆ, ಚುನಾವಣೆಗೆ ಮುಂಚಿತವಾಗಿ ಫಿಲಿಪೈನ್ ನ ಧರ್ಮಾಧ್ಯಕ್ಷರುಗಳ ಸಮ್ಮೇಳನ (CBCP) ಮತದಾರರು ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮತ್ತು ಸಾಮಾನ್ಯ ಒಳಿತನ್ನು ಖಚಿತಪಡಿಸಿಕೊಳ್ಳಲು ತಮ್ಮ ಹಕ್ಕಿನ ಧ್ವನಿಯನ್ನು ಬಳಸಬೇಕೆಂದು ಒತ್ತಾಯಿಸುವ ಪಾಲನಾ ಪತ್ರವನ್ನು ಬಿಡುಗಡೆ ಮಾಡಿದೆ. "ಇತರರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿ" ಎಂಬ ಶೀರ್ಷಿಕೆಯ ಪತ್ರದಲ್ಲಿ ಧರ್ಮಾಧ್ಯಕ್ಷರುಗಳು ಮತದಾರರಿಗೆ "ಸಾರ್ವಜನಿಕ ಸೇವಕನ ಸೇವೆ ಪ್ರಾಥಮಿಕ ಜವಾಬ್ದಾರಿ" ಎಂದು ಫಿಲಿಪೈನ್ ಜನರು "ವಿಶೇಷವಾಗಿ ಬಡವರು ಮತ್ತು ದುರ್ಬಲರ" ಜೀವನವನ್ನು ಸುಧಾರಿಸುವುದು ಎಂದು ನೆನಪಿಸಿದರು.
ನಮ್ಮ ಧರ್ಮಕೇಂದ್ರಗಳು, ನಗರಗಳು, ಪ್ರಾಂತ್ಯಗಳು ಮತ್ತು ಇಡೀ ದೇಶದ ಒಳಿತಿಗಾಗಿ ಸೇವೆ ಸಲ್ಲಿಸುವ ಪ್ರಾಮಾಣಿಕ ಉದ್ದೇಶಗಳನ್ನು ಹೊಂದಿರುವ ಸಮರ್ಥ ನಾಯಕರು ಮತ್ತು ಶಾಸಕರು ನಮಗೆ ಬೇಕು" ಎಂದು ಧರ್ಮಾಧ್ಯಕ್ಷರುಗಳು ಹೇಳಿದರು.