VATICAN-POPE-AUDIENCE VATICAN-POPE-AUDIENCE  (AFP or licensors)

ಮೆಕ್ಸಿಕೋ ನೆರೆಹಾವಳಿಯ ಅವಘಡಕ್ಕೆ ಬಲಿಯಾದವರಿಗಾಗಿ ವಿಶ್ವಗುರುಗಳ ಪ್ರಾರ್ಥನೆ

ವಿಶ್ವಗುರು ಫ್ರಾನ್ಸಿಸ್ ರು ಮೆಕ್ಸಿಕೋ ದೇಶದ ನೆರೆಹಾವಳಿಗೆ ತುತ್ತಾಗಿ, ಬಲಿಯಾದವರಿಗಾಗಿಯೂ, ಅನಿವಾರ್ಯವಾಗಿ ಹೊರ ದೇಶಗಳಲ್ಲಿ ಈ ಪ್ರವಾಹದ ಸಲುವಾಗಿ ಸ್ಥಗಿತಗೊಂಡಿದ್ದು, ತೊಂದರೆಗೊಳಗಾದವರಿಗಾಗಿಯೂ ಸರ್ವೇಶ್ವರರಲ್ಲಿ ಪ್ರಾರ್ಥಿಸಿದರು.

ಫ್ರಾನ್ಸೆಸ್ಕೋ ಮೆರಿಯೊರವರಿಂದ


ಭಾನುವಾರದಂದು ಮೆಕ್ಸಿಕೋ ದೇಶದ ಹಿಡಿಲ್ಗೋ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಅತಿರೇಖಕ್ಕೆ ಬಲಿಯಾದ 17 ಮಂದಿಯತ್ತ ತಮ್ಮ ಆಲೋಚನಾ ಲಹರಿ ಯನ್ನು ಹರಿಸುವುದರ ಮೂಲಕ ವಿಶ್ವಗುರು ಗಳು, ಪ್ರಾರ್ಥನಾಪೂರ್ವಕವಾಗಿ, ಎಲ್ಲರ ಚಿತ್ತವನ್ನು ಸಂತ್ರಸ್ಥರೆಡೆಗೆ ಸೆಳೆದರು.


ಸಂತ ಪೇತ್ರನ ಚೌಕ ದಲ್ಲಿ ಮಾತೆ ಮರಿಯಳ ಪ್ರಾರ್ಥನ ಪರಣದ ತರುವಾಯ ಮಾತನಾಡುತ್ತಾ, ಪೂಜ್ಯರು ನೆರೆಯಿಂದ ಅಸ್ವಸ್ಥರಾದವರ ಶುಶ್ರೂಷೆಯ ಸಲುವಾಗಿ, ಟುಲು ಆಸ್ಪತ್ರೆಯಲ್ಲಿರುವವರಿಗೂ, ಆ ಜನರ ಪ್ರೀತಿ ಬಾಂಧವರಿಗೂ ತಮ್ಮ ಆತ್ಮೀಯ ನಿಕಟತೆಯನ್ನು ವ್ಯಕ್ತ ಗೈದರು. ಸೆಪ್ಟೆಂಬರ್ 7 ರಂದು ಸುರಿದ ಧಾರಾಕಾರ ವರುಣ ಧಾರೆಯಿಂದಾಗಿ, ಟುಲಾ ಮತ್ತು ರೋಸಾಸ್ ನದಿಗಳ ದಡಗಳು, ಒಡೆದು ಹಿಡಾಲ್ಗೋ ರಾಜ್ಯದ ಟುಲಾ ನಗರಸಭೆಯನ್ನು ವರುಣಾವೃತಗೊಳಿಸಿತ್ತು.


ನೆರೆಯಿಂದ ರಸ್ತೆ ಬೀದಿಗಳಲ್ಲಿ, ನೀರು ಸಾರಿಸಿಕೊಂಡು ಹೋಗಿ, ಕಟ್ಟಡಗಳಳೊಳಗೆ ನುಗ್ಗಿ ಆಸ್ಪತ್ರೆಗಳಳೊಳಗೂ ಮೆಕ್ಸಿಕೋದ ಸಾಮಾಜಿಕ ರಕ್ಷಣಾ ಸಂಸ್ಥೆಯ ಕಛೇರಿಯೊಳಗೂ, ಜಲಮಯಗೊಳಿಸಿತು. ಪ್ರವಾಹದ ಅಬ್ಬರ ದಿಂದಾಗಿ ಕ್ಷೇತ್ರದ ವಿದ್ಯುಚ್ಛಕ್ತಿ ಕಡಿತಗೊಂಡಿದ್ದು , ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಕೋವಿಡ್- 19 ರ ರೋಗಿಗಳಲ್ಲಿ 17 ರೋಗಿಗಳು ಇಹಲೋಕ ತ್ಯಜಿಸಿದರು.


ಮನೆಯಿಂದ ದೂರವಿದ್ದವರಿಗಾಗಿ ವಿಶ್ವಗುರುಗಳ ಪ್ರಾರ್ಥನೆ ನಿವೇದನೆ :
ತರುವಾಯ ವಿಶ್ವಗುರುಗಳು, ಈ ಅವಘಢದ ಸಲುವಾಗಿ ದೂರದ ವಿದೇಶಗಳಲ್ಲಿ ಸ್ಥಗಿತ ಗೊಂಡವರಿಗಾಗಿ ಪ್ರಾರ್ಥನೆ ಸಲ್ಲಿಸಿದರು.ದುರದೃಷ್ಟವಶಾತ್ ಬೇರೆ ಬೇರೆ ರೀತಿಯಲ್ಲಿ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕಿ, ತೊಂದರೆಗೀಡಾಗಿದ್ದಾರೆ. ಇವರೆಲ್ಲರನ್ನು ಕುರಿತು ಪೂಜ್ಯರು, ‘ಪರದೇಶದಲ್ಲಿ ಸ್ಥಗಿತ ಗೊಂಡವರೆಲ್ಲರೂ, ಆದಷ್ಟು ಬೇಗ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗುವ ಭರವಸೆಯೊಂದಿಗೆ ಸರ್ವೇಶ್ವರರಲ್ಲಿ ಮೊರೆ ಹೋಗುವೆನು’ ಎನ್ನುತ್ತಾ ತಮ್ಮ ಆಶೀರ್ವಾದಪೂವ೯ಕ ಹಿತವಚನಗಳನ್ನು ನುಡಿದರು.



26 January 2024, 15:01