ಪೋಪ್ ಫ್ರಾನ್ಸಿಸ್ ತಾಂಜಾನಿಯಾದ ಅಧ್ಯಕ್ಷರನ್ನು ಭೇಟಿ ಮಾಡಿದರು ಪೋಪ್ ಫ್ರಾನ್ಸಿಸ್ ತಾಂಜಾನಿಯಾದ ಅಧ್ಯಕ್ಷರನ್ನು ಭೇಟಿ ಮಾಡಿದರು  (ANSA)

ತಾಂಜಾನಿಯಾದ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ತಾಂಜಾನಿಯಾದ ಅಧ್ಯಕ್ಷೆ ಸಮಿಯ ಸುಲುಹು ಹಸ್ಸನ್ ಅವರನ್ನು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುವ ಭಾಗವಾಗಿ ಭೇಟಿ ಮಾಡಿ, ಚರ್ಚಿಸಿದರು.

ವರದಿ: ಡೆಬೋರ ಕ್ಯಾಸ್ಟಿಲ್ಲಾನೊ ಲೊಬೊವ್, ಅಜಯ್ ಕುಮಾರ್

ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು ತಾಂಜಾನಿಯಾ ದೇಶದ ಅಧ್ಯಕ್ಷೆ ಸಮೀಯ ಸುಲುಹು ಹಸ್ಸನ್ ಅವರನ್ನು ಸೋಮವಾರ ಭೇಟಿ ಮಾಡಿದರು. 

ತಾಂಜಾನಿಯಾ ದೇಶದ ಅಧ್ಯಕ್ಷೆ ಸಮೀಯ ಸುಲುಹು ಹಸ್ಸನ್ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದರು. ಅಂತೆಯೇ, ವ್ಯಾಟಿಕನ್ ವಿದೇಶ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್  ಪೌಲ್ ರಿಚರ್ಡ್ ಗ್ಯಾಲ್ಹಗರ್ ಅವರನ್ನೂ ಸಹ ಭೇಟಿ ಮಾಡಿ ಮಾತುಕತೆ ನಡೆಸಿದರು. 

ವ್ಯಾಟಿಕನ್ ಪೀಠದ ಪತ್ರಿಕಾ ಹೇಳಿಕೆಯ ಪ್ರಕಾರ ವ್ಯಾಟಿಕನ್ ಹಾಗೂ ತಾಂಜಾನಿಯಾ ದೇಶದ ನಡುವೆ ಉತ್ತಮ ಭಾಂಧವ್ಯದ ಕುರಿತು ಮಾತುಕತೆ ನಡೆಯಿತು. 

ಅಂತಿಮವಾಗಿ, ಚರ್ಚೆಗಳು ಪ್ರಾದೇಶಿಕ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ಪ್ರಸ್ತುತ ವ್ಯವಹಾರಗಳ ಮೇಲೆ ಕೇಂದ್ರೀಕರಿಸಿದವು ಮತ್ತು ಎರಡೂ ಪಕ್ಷಗಳು "ಶಾಂತಿಯ ಪ್ರಚಾರಕ್ಕೆ ಎಂದಿಗೂ ಹೆಚ್ಚಿನ ಬದ್ಧತೆ" ಗಾಗಿ ತಮ್ಮ ಪರಸ್ಪರ ಆಶಯವನ್ನು ವ್ಯಕ್ತಪಡಿಸಿದವು.

14 February 2024, 13:15