Rohingya Refugees Rohingya Refugees  (AFP or licensors)

ರೋಹಿಂಗ್ಯ ನಿರಾಶ್ರಿತರ ದುಸ್ಥಿತಿಗೆ ಮರುಗಿದ ಪೋಪ್; ಯುದ್ಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿಗಾಗಿ ಕರೆ

ಪೋಪ್ ಫ್ರಾನ್ಸಿಸ್ ಅವರು ರೋಹಿಂಗ್ಯ ನಿರಾಶ್ರಿತರ ದುಸ್ಥಿತಿಗೆ ಮರುಗಿ, ಅವರ ಅವಸ್ಥೆಯನ್ನು ಜಗತ್ತು ನೋಡಬೇಕೆಂದು ಕರೆ ನೀಡಿದ್ದಾರೆ ಹಾಗೂ ಯುದ್ಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಲು ಕರೆ ನೀಡಿದ್ದಾರೆ.

ವರದಿ: ಡೆಬೋರ ಕ್ಯಾಸ್ಟೆಲ್ಲಾನೋ ಲುಬೋವ್, ಅಜಯ್ ಕುಮಾರ್

2017 ರಲ್ಲಿ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ಪೋಪ್ ಫ್ರಾನ್ಸಿಸ್ ಅವರು ರೋಹಿಂಗ್ಯ ನಿರಾಶ್ರಿತರ ದುಸ್ಥಿತಿಯ ಕುರಿತು ದನಿಯೆತ್ತಿದ್ದಾರೆ.

1982 ರಿಂದ ರೋಹಿಂಗ್ಯ ನಿರಾಶ್ರಿತರಿಗೆ ನಾಗರೀಕತ್ವವನ್ನು ನೀಡಲು ಅಲ್ಲಿನ ಸರ್ಕಾರ ನಿರಾಕರಿಸಿದೆ. ಈ ಕಾರಣ ಅವರು ದೇಶವಿಲ್ಲದೆ ನಿರಾಶ್ರಿತರಾಗಿದ್ದಾರೆ. ಇಡೀ ಜಗತ್ತಿನಲ್ಲೇ ಅತೀ ಹಿಂಸೆಯನ್ನು ಅನುಭವಿಸುತ್ತಿರುವ ಅಲ್ಪಸಂಖ್ಯಾತರು ಎಂದು ರೋಹಿಂಗ್ಯ ನಿರಾಶ್ರಿತರನ್ನು ಗುರುತಿಸಲಾಗಿದೆ. ಅನೇಕ ದಶಕಗಳ ಕಾಲ ಇವರಲ್ಲಿ ಬಹುತೇಕರು ಪಕ್ಕದ ದೇಶಗಳಿಗೆ ರಸ್ತೆ ಮಾರ್ಗ ಅಥವಾ ಜಲ ಮಾರ್ಗದ ಮೂಲಕ ಪರಾರಿಯಾಗಿದ್ದಾರೆ. 2021 ರಲ್ಲಿ ಮ್ಯಾನ್ಮಾರ್ ದೇಶದಲ್ಲಿ ಸಂಭವಿಸಿದ ಮಿಲಿಟರಿ ದಂಗೆಯು ರೋಹಿಂಗ್ಯ ಸಮುದಾಯದ ಸ್ಥಿತಿಯನ್ನು ಮತ್ತಷ್ಟು ಶೋಚನೀಯವಾಗಿಸಿದೆ.

ಜನವರಿಯಲ್ಲಿನ ದೇವದೂತನ ಸಂದೇಶದ ಪ್ರಾರ್ಥನೆಯ ಸಮಯದಲ್ಲಿ ಪೋಪ್ ಫ್ರಾನ್ಸಿಸರು ಮ್ಯಾನ್ಮಾರ್ ದೇಶದ ಕುರಿತು ತಮ್ಮ ಗಮನವನ್ನು ಹರಿಸುತ್ತಾ, ಮಾನವೀಯ ನೆರವು ಈ ಸಮುದಾಯಕ್ಕೆ ದೊರೆಯುವಂತೆ ಹಾಗೂ ಸಂವಾದದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಕರೆ ನೀಡಿರುತ್ತಾರೆ.

“ಮೂರು ವರ್ಷಗಳಿಂದ ಮ್ಯಾನ್ಮಾರ್ ದೇಶದ ಜನರ ಮುಖದಲ್ಲಿನ ನಗುವನ್ನು ನೋವಿನ ಆಕ್ರಂದನ ಹಾಗೂ ಶಸ್ತ್ರಾಸ್ತ್ರಗಳ ಕೇಕೆ ಕಸಿದುಕೊಂಡಿದೆ” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಶಾಂತಿ ಎಂಬುದು ಒಂದು ಪಯಣವಾಗಿದೆ ಎಂದು ಅಭಿಪ್ರಾಯಪಟ್ಟ ಪೋಪ್ ಫ್ರಾನ್ಸಿಸ್, ಎಲ್ಲರೂ ಎಂಥದ್ದೇ ಸಮಸ್ಯೆಯನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಲಬೇಕು. ಮ್ಯಾನ್ಮಾರ್ ದೇಶವು ಸಂಧಾನದ ಸೋದರತ್ವದಲ್ಲಿ ಒಂದಾಗುವಂತೆ ಪ್ರಾರ್ಥಿಸಬೇಕೆಂದು ಪ್ರಾರ್ಥಿಸಬೇಕು” ಎಂದು ಹೇಳಿದರು.
 

10 February 2024, 19:16