ಉಕ್ರೇನ್ ಮತ್ತು ಪವಿತ್ರ ನಾಡಿನ ಕುರಿತು ಕಾಳಜಿ ವ್ಯಕ್ತಪಡಿಸಿದ ಪೋಪ್
ವರದಿ: ಡೆಬೋರ ಕ್ಯಾಸ್ಟೆಲ್ಲಾನೊ ಲುಬೊವ್, ಅಜಯ್ ಕುಮಾರ್
"ಇಂದು ತಪಸ್ಸುಕಾಲ ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ಪರಿವರ್ತನೆ ಮತ್ತು ಆಂತರಿಕ ನವೀಕರಣದ ಅವಕಾಶವಾಗಿ, ದೇವರ ವಾಕ್ಯವನ್ನು ಕೇಳುವಲ್ಲಿ, ನಮ್ಮ ಅಗತ್ಯವಿರುವ ಸಹೋದರ ಸಹೋದರಿಯರಿಗೆ ಆತ್ಮಿಕವಾಗಿ ಕಾಳಜಿ ವಹಿಸಲು ನಾವು ಸಿದ್ಧರಾಗೋಣ."
ಈ ಆಲೋಚನೆಯೊಂದಿಗೆ, ಪೋಪ್ ಫ್ರಾನ್ಸಿಸ್ ಅವರು ಬುಧವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ತಮ್ಮ ಸಾರ್ವಜನಿಕ ದರ್ಶನವನ್ನು ಮುಕ್ತಾಯಗೊಳಿಸಿದಾಗ, ಯುದ್ಧಗಳಿಂದ ಬಳಲುತ್ತಿರುವ ಎಲ್ಲರಿಗೂ ಆತ್ಮಿಕವಾಗಿ ಹತ್ತಿರವಾಗಲು ಹಾಗೂ ಪ್ರಾರ್ಥಿಸಲು ಮನವಿಯನ್ನು ಮಾಡಿದರು.
"ಇಲ್ಲಿ, ಹಿಂಸೆ ಅನುಭವಿಸುತ್ತಿರುವ ಉಕ್ರೇನ್, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ಅನ್ನು ನಾವು ಎಂದಿಗೂ ಮರೆಯಬಾರದು. ಯುದ್ಧದಿಂದ ಬಳಲುತ್ತಿರುವ ಈ ಸಹೋದರ ಸಹೋದರಿಯರಿಗಾಗಿ ನಾವು ಪ್ರಾರ್ಥಿಸೋಣ." ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದರು.
"ಈ ಪರಿವರ್ತನೆ ಪ್ರಕ್ರಿಯೆಯಲ್ಲಿ ಮುಂದುವರಿಯಿರಿ" ಎಂದು ಹೇಳುತ್ತಾ "ದೇವರ ವಾಕ್ಯವನ್ನು ಕೇಳುವುದರಲ್ಲಿ" ಮತ್ತು "ನಮ್ಮ ಅಗತ್ಯವಿರುವ ಸಹೋದರ ಸಹೋದರಿಯರನ್ನು ನೋಡಿಕೊಳ್ಳುವಲ್ಲಿ" ಸದಾ ಮುಂದಾಗಬೇಕೆಂದು ವಿಶ್ವಗುರುಗಳು ಹೇಳಿದರು.
“ನಮ್ಮ ಸಹಾಯವನ್ನು ಮುಂದುವರೆಸೋಣ ಮತ್ತು ಪ್ರಾರ್ಥನೆಯನ್ನು ತೀವ್ರಗೊಳಿಸೋಣ, ವಿಶೇಷವಾಗಿ ಜಗತ್ತಿನಲ್ಲಿ ಶಾಂತಿಯ ವರದಾನವನ್ನು ಪಡೆದುಕೊಳ್ಳಲು ನಾವೆಲ್ಲರೂ ಶ್ರಮಿಸೋಣ” ಎಂದು ಹೇಳಿದರು.