ಪೋಪ್ ಫ್ರಾನ್ಸಿಸ್: ಪ್ರೀತಿಯನ್ನು ಜೀವಂತವಾಗಿರಿಸುವುದು ಒಬ್ಬ ಗುರುವಿನ ಪ್ರಾಥಮಿಕ ಕರ್ತವ್ಯ

ಪೊಂಟಿಫಿಕಲ್ ಲ್ಯಾಟಿನ್-ಅಮೇರಿಕನ್, ಬ್ರಸಿಲಿಯನ್, ಮೆಕ್ಸಿಕನ್ ಕಾಲೇಜುಗಳ ಸದಸ್ಯರೊಂದಿಗೆ ಮಾತನಾಡುತ್ತಾ, ಹಾಗೂ ಪ್ರೀತಿಯ ಕುರಿತು ಚಿಂತನೆಯನ್ನು ಮಾಡುತ್ತಾ “ಪ್ರೀತಿ ಗುರುಗಳ ಬದುಕಿನ ಕೇಂದ್ರಬಿಂದುವಾಗಿದೆ” ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್

ಗುರುವಾರ ಲ್ಯಾಟಿನ್-ಅಮೇರಿಕಾದ ಗುರು ತರಭೇತುದಾರರು ಹಾಗೂ ಗುರು ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ, “ಮೊದಲ ಪ್ರೀತಿಯನ್ನು ಪ್ರೀತಿಸುವುದು ನಮ್ಮೆಲ್ಲರನ್ನು ಇಲ್ಲಿಗೆ ಕರೆ ತಂದಿದೆ. ಅದನ್ನು ಜೀವಂತವಾಗಿಡುವುದು ನಮ್ಮ ಕರ್ತವ್ಯವಾಗಿದೆ.” ಎಂದು ಹೇಳಿದರು.

“ಪ್ರತಿ ದೈವಕರೆಯು ಪ್ರೀತಿಯಿಂದ ಉಗಮವಾಗಿದೆ. ದೇವರು ಇದನ್ನು ನಮಗೆ ವಿಶೇಷವಾಗಿ ನೀಡಿದ್ದಾರೆ. ಅದರ ಉದ್ದೇಶ ನಮ್ಮನ್ನೇ ಇತರರಿಗೆ ನೀಡುವುದಾಗಿದೆ.” ಎಂದು ಪೋಪ್ ಫ್ರಾನ್ಸಿಸ್ ಗುರು ತರಭೇತುದಾರರನ್ನು ಹಾಗೂ ಗುರು ವಿದ್ಯಾರ್ಥಿಗಳನ್ನು ಕುರಿತು ಹೇಳಿದರು.

“ಯೇಸು ಕ್ರಿಸ್ತರಲ್ಲಿ ಅವರಂತೆಯೇ ಆಗಲು ನಾವು ಮೊದಲು ಅವರ ಮಾದರಿಯನ್ನು ಅನುಸರಿಸಬೇಕಿದೆ. ದೀನತೆಯಿಂದ ಹಾಗೂ ಪ್ರಾರ್ಥನೆಯ ಮೂಲಕ ನಮ್ಮನ್ನೇ ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕಿದೆ.” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. “ಪ್ರಾರ್ಥನೆ ಎಂದರೆ ದೇವರ ಸನ್ನಿಧಾನಕ್ಕೆ ನಮ್ಮೆಲ್ಲಾ ಸ್ಥಿತಿಗತಿಗಳನ್ನು ಅರ್ಪಿಸುವುದಾಗಿದೆ.” ಎಂದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ “ದೇವರು ನಿಮ್ಮ ಹಾದಿಯಲ್ಲಿ ಕಳುಹಿಸಿರುವ ಭಕ್ತ ವಿಶ್ವಾಸಿಗಳ ಮಧ್ಯಸ್ಥಿಕೆ ಪ್ರಾರ್ಥನೆಗಳನ್ನು ಹಗುರವಾಗಿ ಪರಿಗಣಿಸಬೇಡಿ. ಏಕೆಂದರೆ, ದೇವರು ಅವರಿಗೂ ಸಹ ಸುಜ್ಞಾನವನ್ನು ನೀಡಿದ್ದಾರೆ ಮಾತ್ರವಲ್ಲದೆ ಅವರು ನಿಮಗಾಗಿ ಪ್ರಾರ್ಥಿಸುತ್ತಾರೆ. ನೀವೂ ಸಹ ನಿಮ್ಮ ಗುರುಗಳಿಗಾಗಿ ಹಾಗೂ ನನಗಾಗಿ ಪ್ರಾರ್ಥಿಸಿರಿ.” ಎಂದರು.

ಅಮೇರಿಕಾ ದೇಶಗಳ ಪಾಲಕಿಯಾಗಿರುವ ಗ್ವಾದಲುಪೆ ಮಾತೆಯ ಮಧ್ಯಸ್ಥಿಕೆಯನ್ನು ಬೇಡುವ ಮೂಲಕ, ಕೊನೆಯಲ್ಲಿ ನೆರೆದಿದ್ದ ಎಲ್ಲರ ಮೇಲೆ ಆಶೀರ್ವಾದವನ್ನು ಕೋರಿದರು.

 

04 April 2024, 13:45