ಹುಡುಕಿ

ಕಾರ್ಡಿನಲ್ ಎಂಜೆಲೋ ದೆ ದೊನಾತಿಸ್ ಕಾರ್ಡಿನಲ್ ಎಂಜೆಲೋ ದೆ ದೊನಾತಿಸ್ 

ಕಾರ್ಡಿನಲ್ ದೆ ದೊನಾತಿಸ್ ಅವರನ್ನು ನೂತನ ಮೇಜರ್ ಪೆನಿಟೆನ್ಷಿಯರಿಯಾಗಿ ನೇಮಿಸಿದ ಪೋಪ್

ರೋಮ್ ಧರ್ಮಕ್ಷೇತ್ರದ ಶ್ರೇಷ್ಟಗುರುವಾಗಿರುವ ಕಾರ್ಡಿನಲ್ ಎಂಜೆಲೋ ದೆ ದೊನಾತಿಸ್ ಅವರು ಕಾರ್ಡಿನಲ್ ಮೌರೋ ಪಿಯಚೆನ್ಝಾ ಅವರ ನಂತರ ಅಪೊಸ್ಟೊಲಿಕ್ ಪೆನಿಟೆನ್ಷಿಯರಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಶನಿವಾರ ರೋಮ್ ಧರ್ಮಕ್ಷೇತ್ರದ ಶ್ರೇಷ್ಟಗುರು ಕಾರ್ಡಿನಲ್ ಎಂಜೆಲೋ ದೆ ದೊನಾತಿಸ್ ಅವರನ್ನು ಅಪೊಸ್ಟೊಲಿಕ್ ಪೆನಿಟೆನ್ಷಿಯರಿಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. 2013 ರಿಂದ ಈ ಹುದ್ದೆಯನ್ನು ಕಾರ್ಡಿನಲ್ ಮೌರೊ ಪಿಯಾಚೆನ್ಝ ಅವರು ಹೊಂದಿದ್ದರು. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರಿಗೆ 80 ವರ್ಷವಾಗಲಿದೆ. 

70 ವರ್ಷ ವಯೋಮಾನದ ಕಾರ್ಡಿನಲ್ ದೆ ದೊನಾತಿಸ್ ಅವರು 2017 ರಿಂದ ಈವರೆಗೆ ರೋಮ್ ಧರ್ಮಕ್ಷೇತ್ರದ ಆಡಳಿತಾತ್ಮಕ ಅವಶ್ಯಕತೆಗಳನ್ನು ನೋಡಿಕೊಂಡಿದ್ದಾರೆ. ಇವರು ಸಂತ ಜಾನ್ ಲ್ಯಾಟರನ್ ಮಹಾ ದೇವಾಲಯದ ಮುಖ್ಯ ಗುರುವಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 

ಈ ನೂತನ ಹುದ್ದೆಯ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವ ಮೂಲಕ, ಕಾರ್ಡಿನಲ್ ದೆ ದೊನಾತಿಸ್ ಅವರು ಗಂಭೀರವಾದ ಪಾಪಗಳು ಸೇರಿದಂತೆ ಕೇವಲ ಪೋಪರಿಗೆ ಮಾತ್ರ ಕ್ಷಮಿಸುವ ಅಧಿಕಾರ ಇರುವಂತಹ ಪಾಪಗಳ ಪ್ರಕರಣಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಶನಿವಾರ, ಪೋಪ್ ಫ‌್ರಾನ್ಸಿಸ್ ಅವರು ಜೆಸುಯಿಟ್ ಹಾಗೂ ರೋಮ್ ಧರ್ಮಕ್ಷೇತ್ರದ ಏಳು ಸಹಾಯಕ ಧರ್ಮಾಧ್ಯಕ್ಷರಲ್ಲೊಬ್ಬರಾದ ಧರ್ಮಾಧ್ಯಕ್ಷ ಡ್ಯಾನಿಯೇಲ್ ಬೆಲ್ಜಿಯೋರಿ ಅವರನ್ನು ಸಮರ್ಪಿತ ಜೀವನದ ಮೌಲ್ಯಮಾಪಕ (ಅಸೆಸರ್) ರನ್ನಾಗಿ ನೇಮಿಸಿದ್ದಾರೆ.   

06 April 2024, 17:54