ವಿಕಲಾಂಗ ವ್ಯಕ್ತಿಗಳ ಘನತೆ ಮತ್ತು ಒಳಗೊಳ್ಳವಿಕೆಗಾಗಿ ಪೋಪ್ ಫ್ರಾನ್ಸಿಸ್ ಪ್ರತಿಪಾದನೆ
ವರದಿ: ಫ್ರಾನ್ಚೆಸ್ಕ ಮರ್ಲೋ, ಅಜಯ್ ಕುಮಾರ್
ಪೂರ್ವಭಾವಿ ಸಭೆ ಹಾಗೂ ತನ್ನ ಸ್ಥಾಪನೆಯ ಮೂವತ್ತು ವರ್ಷಗಳ ಸುದಿನದಂದು, ಸಾಮಾಜಿಕ ವಿಜ್ಞಾನಗಳ ಪೊಂಟಿಫಿಕಲ್ ಅಕಾಡೆಮಿಯ ಸದಸ್ಯರು "ವೈಕಲ್ಯಯಹಾಗೂ ಮಾನವ ಸನ್ನಿವೇಷ: ವೈಕಲ್ಯದ ಕುರಿತು ಸಾಮಾಜಿಕ ನಿರ್ಣಾಯಕಗಳ ಬದಲಾವಣೆ ಮತ್ತು ಒಳಗೊಳ್ಳುವ ಹೊಸ ಸಂಸ್ಕೃತಿಯ ನಿರ್ಮಾಣ" ಎಂಬ ಶೀರ್ಷಿಕೆಯ ಕುರಿತು ಚಿಂತನ-ಮಂಥನ ನಡೆಸಿದರು.
"ಈ ಶೀರ್ಷಿಕೆಯನ್ನು ಆರಿಸಿಕೊಂಡಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ." ಗುರುವಾರ ಪೋಪ್ ಫ್ರಾನ್ಸಿಸ್ ಸಾಮಾಜಿಕ ವಿಜ್ಞಾನಗಳ ಪೊಂಟಿಫಿಕಲ್ ಅಕಾಡೆಮಿಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
"ಇತ್ತೀಚಿನ ವರ್ಷಗಳಲ್ಲಿ ಅಂತರಾಷ್ಟ್ರೀಯ ಸಮುದಾಯವು ವಿಕಲಾಂಗ ವ್ಯಕ್ತಿಗಳ ಹಕ್ಕುಗಳನ್ನು ಗುರುತಿಸುವಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಿದೆ" ಎಂದು ಪೋಪ್ ಫ‌್ರಾನ್ಸಿಸ್ ಹೇಳಿದರು. ಅದಾಗ್ಯೂ, ಅನೇಕ ದೇಶಗಳು ಈ ಹಾದಿಯಲ್ಲಿ ನಡೆಯುತ್ತಿದ್ದರೂ ಸಹ, ಇನ್ನೂ ಅನೇಕ ದೇಶಗಳಲ್ಲಿ ಇದು ಅರ್ಧದಷ್ಟೇ ಇದೆ ಅಥವಾ ಇನ್ನೂ ಹೆಚ್ಚಿನ ಪ್ರಗತಿಯು ಆಗಿರುವುದಿಲ್ಲ." ಎಂದು ಹೇಳಿದರು. ಎಲ್ಲೆಲ್ಲಿ ಈ ಪ್ರಗತಿಯಾಗಿದೆಯೋ ಅಲ್ಲಲ್ಲಿ ಹೇಗೆ ಬೀಜಗಳನ್ನು ಬಿತ್ತಿ ಅವುಗಳು ನ್ಯಾಯಯುತ ಹಾಗೂ ಐಕ್ಯತೆಯ ಸಮಾಜವನ್ನು ಪ್ರತಿಫಲಿಸುತ್ತದೆ." ಎಂಬುದನ್ನು ಕಾಣಬಹುದಾಗಿದೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ "ಬಲಹೀನತೆ ಹಾಗೂ ವೈಕಲ್ಯ ಎಂಬುದು ಮಾನವ ಬದುಕಿನ ಒಂದು ಭಾಗ. ವಿಕಲಾಂಗ ವ್ಯಕ್ತಿಗಳು ಬೇರೆ ಅಲ್ಲ, ಅವರೂ ನಮ್ಮವರೇ." ಎಂದು ನುಡಿಯುತ್ತಾರೆ.
"ಆದರೆ, ವೈಕಲ್ಯದ ಕಾರಣ ವ್ಯಕ್ತಿಗಳನ್ನು ಹಾಗೂ ವಿಕಲಾಂಗ ವ್ಯಕ್ತಿಗಳ ಕುಟುಂಬಗಳನ್ನು ಇಂದಿಗೂ ಸಹ ಸಮಾಜದಲ್ಲಿ ಬಹುತೇಕರೂ ಒಂಟಿಯಾಗಿಸುತ್ತಿದ್ದಾರೆ. ಇದು ಬಡ ದೇಶಗಳಲ್ಲಿ ಮಾತ್ರವಲ್ಲ; ಶ್ರೀಮಂತ ಹಾಗೂ ಮುಂದುವರೆದ ದೇಶಗಳಲ್ಲಿಯೂ ಸಹ ಈ ಪರಿಸ್ಥಿತಿ ಇದೆ." ಎಂದು ಪೋಪ್ ಫ್ರಾನ್ಸಿಸ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಬಳಸಿ ಬಿಸಾಕುವ ಸಂಸ್ಕೃತಿಯ ವಿರುದ್ಧ ಮಾತನಾಡಿದ ಪೋಪ್ ಫ್ರಾನ್ಸಿಸ್ ಅದು ಮಾನವ ಘನತೆಗೆ ವಿರುದ್ಧವಾಗಿದೆ ಎಂದು ಹೇಳಿದರು. ಈ ಸಂಸ್ಕೃತಿಯು ನಿಧಾನವಾಗಿ ಮರಣದ ಸಂಸ್ಕೃತಿಯಾಗಿ ಮಾರ್ಪಡಲಿದೆ." ಎಂದು ಪೋಪ್ ಫ್ರಾನ್ಸಿಸ್ ಎಚ್ಚರಿಸಿದ್ದಾರೆ.
ಕೊನೆಯದಾಗಿ, ಎಲ್ಲರನ್ನೂ ಒಳಗೊಳ್ಳುವ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಸಮಗ್ರವಾಗಿ ಎಲ್ಲರನ್ನೂ ವಿಶೇಷವಾಗಿ ವಿಕಲಾಂಗ ವ್ಯಕ್ತಿಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಒಳಗೊಳ್ಳುವ ಅವಶ್ಯಕತೆ ಇದೆ ಎಂದು ಪೋಪ್ ಫ್ರಾನ್ಸಿಸ್ ಸಾಮಾಜಿಕ ವಿಜ್ಞಾನಗಳ ಪೊಂಟಿಫಿಕಲ್ ಅಕಾಡೆಮಿಯ ಸದಸ್ಯರಿಗೆ ಹೇಳಿದರು.