ಪೋಪ್: ಇತರರ ನೋವಿಗೆ ಮರುಗಲು ನಾಚಿಕೆಪಡಬೇಡಿ
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಹೇಗೆ ದಶಕಗಳ ಹಿಂದೆ ಈ ಪ್ರತಿಷ್ಟಾನದ ಪಯಣ ಆರಂಭವಾಯಿತು ಎಂಬುದನ್ನು ನೆನಪಿಸಿಕೊಂಡ ಪೋಪ್ 1953 ರಲ್ಲಿ ಇನ್ನಾವುಸೋ ಕುಟುಂಬದಲ್ಲಿನ ಮಾತೆ ಮರಿಯಮ್ಮನವರ ಭಾವಚಿತ್ರವು ದುಃಖಿಸಿತು ಎಂಬುದನ್ನು ಮೆಲುಕುಹಾಕಿದ್ದಾರೆ. ಆ ಕಣ್ಣೀರು ಭೂಲೋಕದಲ್ಲಿ ಯಾತನೆಯನ್ನು ಅನುಭವಿಸುತ್ತಿರುವ ತನ್ನ ಮಕ್ಕಳ ಮೇಲಿನ ಕರುಣೆಯನ್ನು ಸೂಚಿಸುತ್ತದೆ ಎಂದು ಹೇಳಿದ ಪೋಪ್ ಫ್ರಾನ್ಸಿಸ್, “ಈ ಕಣ್ಣೀರು ದೇವರು ನಮ್ಮ ಮೇಲೆ ಇಟ್ಟಿರುವ ಕರುಣೆಯ ಕುರಿತು ಮಾತನಾಡುತ್ತದೆ” ಎಂದು ಹೇಳಿದರು.
ಇಂತಹ ಯಾತನೆಗಳ ಸಂಧರ್ಭದಲ್ಲಿ ಈ ಪ್ರತಿಷ್ಟಾನವು ಭರವಸೆಯ ಬೆಳಕಂತೆ ಬಂತು. ತನ್ನ ದೈನಂದಿನ ಕಾರ್ಯದ ನಡುವೆಯು ಈ ಪ್ರತಿಷ್ಟಾನವು ಮಾತೆ ಮರಿಯಮ್ಮನವರು ಸುರಿಸಿದ ಕಣ್ಣೀರನ್ನು ಕರುಣೆಯ ಕ್ರಿಯೆಗಳಾಗಿ ಮಾರ್ಪಡಿಸಿದೆ ಎಂದು ಪೋಪ್ ಫ್ರಾನ್ಸಿಸರು ಸಂತ ಎಂಜೆಲಾ ಮರ್ಸಿ ಪ್ರತಿಷ್ಟಾನದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಯಾತನೆಯನ್ನು ಅನುಭವಿಸುತ್ತಿರುವವರನ್ನು ಈ ಪ್ರತಿಷ್ಟಾನವು ತನ್ನ ಹೃದಯದಲ್ಲಿಟ್ಟುಕೊಳ್ಳುವ ಮೂಲಕ ಅವರ ಉನ್ನತಿಗಾಗಿ ಶ್ರಮಿಸಿದೆ. “ಸಹೋದರ-ಸಹೋದರಿಯರೇ, ನೀವು ಯಾತನೆಯನ್ನು ಅನುಭವಿಸುತ್ತಿರುವವರ ಕಣ್ಣೀರನ್ನು ಒರೆಸಲು ಬಯಸುತ್ತೀರಿ. ಅವರೊಂದಿಗೆ ಸದಾ ಪಯಣಿಸುತ್ತೀರಿ. ಸಮಾಜದಲ್ಲಿನ ದುರ್ಬಲರನ್ನು ಸಬಲಗೊಳಿಸಲು ಪ್ರಯತ್ನಿಸುತ್ತೀರಿ. ಅದನ್ನು ಮುಂದುವರೆಸಿ” ಎಂದು ಪೋಪ್ ಫ್ರಾನ್ಸಿಸ್ ಸಂತ ಎಂಜೆಲಾ ಮರ್ಸಿ ಪ್ರತಿಷ್ಟಾನದ ಸದಸ್ಯರಿಗೆ ಕಿವಿಮಾತನ್ನು ಹೇಳಿದರು.
“ಸದಾ ದೇವರ ಕರುಣೆಯ ನೆರಳಲ್ಲಿ ಮುಂದುವರೆಯುವಂತೆ” ತಿಳಿಸಿ, ಅವರಿಗಾಗಿ ಪ್ರಾರ್ಥಿಸಿದರು.