ಹುಡುಕಿ

ವಿಶ್ವಗುರು ಫ್ರಾನ್ಸಿಸ್: ಅನುಗ್ರಹದ ಜೊತೆ ನಿರಂತರ ಸ್ಥೈರ್ಯವಿದ್ದಲ್ಲಿ ನಮಗದು ಪ್ರತಿದಿನ ಸಹಾಯವಾಗುತ್ತದೆ

ಬುಧವಾರ ತಮ್ಮ ಸಾರ್ವಜನಿಕ ಭೇಟಿಯ ಸಮಯದಲ್ಲಿ ವಿಶ್ವಗುರು ಫ್ರಾನ್ಸಿಸ್’ರವರು ಸದ್ಗುಣ ಹಾಗೂ ದುರ್ಗುಣಗಳ ಬಗ್ಗೆ ಧರ್ಮೋಪದೇಶ ಸರಮಾಲೆಯ ಬೋಧನೆಯಲ್ಲಿ ಈ ವಾರ ಪ್ರಮುಖ ಸದ್ಗುಣವಾದ ಸ್ಥೈರ್ಯದ ಬಗ್ಗೆ ಮಾತನಾಡುತ್ತಾ ಹೀಗೆಂದರು: "ದೇವರ ಅನುಗ್ರಹದ ಜೊತೆ ನಿರಂತರವಾದ ಆತ್ಮಸ್ಥೈರ್ಯ ದೈನಂದಿನ ಬದುಕಿಗೆ ಕಿಚ್ಚು ಹಚ್ಚುವಂತದ್ದಾಗಿದೆ. ಇದರಿಂದ ನಾವು ದೇವರಿಗೆ ಇನ್ನೂ ಹತ್ತಿರವಾಗುತ್ತೇವೆ” ಎಂದು ತಿಳಿಸಿದರು.

ವರದಿ: ದೆಬೋರ ಕ್ಯಾಸ್ತಲೆನೊ ಲುಬೋವ್, ಸ್ವಾಮಿ ವಿನಯ್ ಕುಮಾರ್

ಪ್ರಭು ಯೇಸು ಕ್ರಿಸ್ತನ ಹಾಗೂ ಸಂತರುಗಳ ಆದರ್ಶ ನಮ್ಮನ್ನು ಹುರಿದುಂಬಿಸಿ, ಆತ್ಮಸ್ಥೈರ್ಯವನ್ನು ಮತ್ತೆ ಕಂಡುಕೊಳ್ಳಲು ಸಹಾಯವಾಗಲಿ. ಇದರಿಂದ ಜೊತೆಗೆ ನಮ್ಮ ಬದುಕಿನ ಪ್ರತಿಯೊಂದು ಶ್ರಮದಲ್ಲಿ ಧೈರ್ಯ ಸಹಾಯಕವಾಗಲಿದೆ.

ವಿಶ್ವಗುರು ಫ್ರಾನ್ಸಿಸ್ ರವರು ಈ ಉತ್ತೇಜನವನ್ನು ವಾರದ ಸಾರ್ವಜನಿಕ ಭೇಟಿಯ ಸಮಯದಲ್ಲಿ ಬುಧವಾರದಂದು ಸಂತ ಪೇತ್ರದ ಚೌಕದಲ್ಲಿ ನೀಡಿದರು.

ಈ ವಾರ ವಿಶ್ವಗುರು ಫ್ರಾನ್ಸಿಸ್ ರವರು ಸದ್ಗುಣ ಹಾಗೂ ದುರ್ಗಣಗಳ ಬೋಧನೆಯನ್ನ ಮುಂದುವರಿಸಿದರು. ಹಲವು ತಿಂಗಳುಗಳು ದುರ್ಗುಣಗಳ ಬಗ್ಗೆ ಬೋಧಿಸಿದ ನಂತರ ಇದೀಗ ಸದ್ಗುಣಗಳ ಬಗ್ಗೆ ವಿವೇಕ ,ತಾಳ್ಮೆ ನ್ಯಾಯ. ಈ ವಾರದಲ್ಲಿ ಧೈರ್ಯದ  ಬಗ್ಗೆ ಅವರು ಮಾತನಾಡುತ್ತಿದ್ದಾರೆ.

ಧರ್ಮೋಪದೇಶ ಪ್ರಮುಖ ಸದ್ಗುಣವಾದ ಧೈರ್ಯವೂ ನೈತಿಕವಾದ ಸದ್ಗುಣವಾಗಿದೆ."ಇದು ಕಷ್ಟದ ಸಂದರ್ಭದಲ್ಲಿ ದೃಢತೆಯನ್ನು ಖಚಿತಗೊಳಿಸುತ್ತದೆ ಹಾಗೂ ನಿರಂತರವಾಗಿ ಒಳ್ಳೆಯದನ್ನು ಮಾಡಲು ಉತ್ತೇಜಿಸುತ್ತದೆ.

ನಿರ್ಧಾರಗಳನ್ನು ಬಲಪಡಿಸುತ್ತದೆ, ಅಡೆತಡೆಯನ್ನು ಸೋಲಿಸುತ್ತದೆ.

ಈ ಸದ್ಗುಣದ ಬಗ್ಗೆ ತಿಳಿಸುವಾಗ ವಿಶ್ವಗುರು ಫ್ರಾನ್ಸಿಸ್’ರವರು ಇದು ಹೇಗೆ ಶೋಧನೆಗಳನ್ನು ಜಯಿಸಲು ನಿರ್ಧಾರಗಳನ್ನು ಬಲಪಡಿಸುತ್ತದೆ ಹಾಗೆಯೇ ನಮ್ಮ ನೈತಿಕ ಜೀವನದಲ್ಲಿ ಅಡೆತಡೆಗಳನ್ನು ಸೋಲಿಸುತ್ತದೆ ಹಾಗೂ ನಮ್ಮಲ್ಲಿರುವ ಭಯವನ್ನ ಜಯಿಸುತ್ತದೆ; ಅದರಲ್ಲೂ ಮರಣದ ಭಯವನ್ನ ಹೋಗಲಾಡಿಸುತ್ತದೆ. ಧೈರ್ಯವು ಪ್ರಲೋಭನೆ ಹಾಗೂ ಕಿರುಕುಳವನ್ನು ಸಹ ಎದುರಿಸಲು ಸಹಾಯ ಮಾಡುತ್ತದೆ.


ಸ್ಥೈರ್ಯವೂ ಅತ್ಯಂತ ಹೋರಾಡುವ ಸದ್ಗುಣವಾಗಿದೆ.


ವಿಶ್ವಗುರು ಫ್ರಾನ್ಸಿಸ್ ರವರು ಇದನ್ನು ಹೇಳುತ್ತಾ ಅವರು ಸ್ಮರಿಸಿದರು ವಿವೇಕ ಮನುಷ್ಯನ ಮೂಲಭೂತ ವಾದಂತಹ ತರ್ಕಕ್ಕೆ ಸೇರಿರುವಂತದ್ದು, ನ್ಯಾಯ ಮನುಷ್ಯನ ಇಚ್ಛೆಯಲ್ಲಿ  ನೆಲೆಸಿರುವಂಥದ್ದು ಹಾಗೆ ಮೂರನೇ ಸದ್ಗುಣವಾದ ಧೈರ್ಯವೂ. ವಿಶ್ವಗುರು ತಿಳಿಸಿದಂತೆ ಸ್ಕೊಲಾಸ್ಟಿಕ್ ಬರಹಗಾರರ ಬರವಣಿಗೆಗೆ ತಾಳೆ ಹಾಕುವಂಥದ್ದು ಇದು "ಸಿಡುಕಿನ ಹಸಿವಾಗಿದೆ".

ಪ್ರಾಚೀನ ವಿಚಾರದಂತೆ ಫ್ರಾನ್ಸಿಸ್ ರವರು ಹೇಳಿದರು ಒಬ್ಬ  ಬಾವೊದ್ರೆಕಗಳಿಲ್ಲದ ಮನುಷ್ಯ ಕಲ್ಲು ಇದ್ದಂತೆ ಎಂದು ರೋಧಿಸಿದರು.

ಬಾವೊದ್ರೆಕೆಗಳು ಮನುಷ್ಯನನ್ನ ಪಾಪಕ್ಕೆ ಈಡು ಮಾಡುತ್ತದೆ ಎಂಬುದು ಸರಿಯಾದುದಲ್ಲ. ಬದಲಾಗಿ ವಿಶ್ವಗುರು ಫ್ರಾನ್ಸಿಸ್ ರವರು ಹೇಳಿದಂತೆ ಈ ಬಾವೊದ್ರೆಕಗಳನ್ನು ನೀರಿನ ದೀಕ್ಷಾಸ್ನಾನ ಅಥವಾ ಪವಿತ್ರಾತ್ಮರ ಬೆಂಕಿಯ ಮೂಲಕ ಶಿಕ್ಷಣವಿತ್ತು, ಸರಿಯಾಗಿ ಉಪಯೋಗಿಸಲು ಹಾಗೂ ಅದನ್ನು ಶುದ್ಧೀಕರಿಸಲು ಸಹಾಯಕವಾಗಿದೆ ಎಂದು ತಿಳಿಸಿದರು.

ವಿಶ್ವಗುರು ಫ್ರಾನ್ಸಿಸ್ ರವರು ಒಬ್ಬ ಕ್ರೈಸ್ತ ವಿಶ್ವಾಸಿ ತನ್ನ ಸ್ವಂತ ಶಕ್ತಿಯನ್ನು ಒಳ್ಳೆಯದಕ್ಕೆ ಬಳಸದೆ, ಇನ್ನೊಬ್ಬರ  ಬಗ್ಗೆ ಚಿಂತಿಸದವನು ಉಪಯೋಗಕ್ಕೆ ಬಾರದ ಕ್ರೈಸ್ತ ವಿಶ್ವಾಸಿ ಎಂದು ತಿಳಿಸಿದರು. 


ವಿಶ್ವಗುರುಗಳು ಗ್ರೀಕ್ ತತ್ವಶಾಸ್ತ್ರಜ್ಞರು ಹಾಗೂ ಕ್ರೈಸ್ತ ದೈವ ಶಾಸ್ತ್ರಜ್ಞರು ಹೇಗೆ ಎರಡು ರೀತಿಯಾದಂತಹ ಬೆಳವಣಿಗೆಯನ್ನು ಧೈರ್ಯವೆಂಬ ಸದ್ಗುಣದ ಮೇಲೆ ಕಟ್ಟಿಕೊಂಡರು ಎಂಬುದನ್ನ ಅವರು ಗಮನಿಸಿದರು.  ಒಂದು ಜಡ ಹಾಗೂ ಇನ್ನೊಂದು ಸಕ್ರಿಯವಾದಂತಹ ಸ್ಥೈರ್ಯವಾಗಿದೆ.

ನಮ್ಮೊಳಗೆ ಇರುವಂಥದ್ದು.

ಬಹುವಾದ ಜಡವಾದ ಸ್ಥೈರ್ಯದ ಬಗ್ಗೆ ಮಾತನಾಡುತ್ತಿರುವಾಗ ವಿಶ್ವಗುರುಗಳು ಸ್ಥೈರ್ಯ ನಮ್ಮೊಳಗೆ ಇರುವಂಥದ್ದು ಎಂಬುದನ್ನ ಸೂಚಿಸಿದರು.

ಧೈರ್ಯಕ್ಕೆ ಆಂತರಿಕ ಶತ್ರುಗಳಿದ್ದಾರೆ ನಾವು ಅವನ್ನು ಜಯಿಸಬೇಕಾಗಿದೆ ಅವುಗಳು ಯಾವುವೆಂದರೆ ಭಯ, ಆತಂಕ ಹಾಗೂ ಅಪರಾಧಿತ್ವ ವಾಗಿದೆ. ವಿಶ್ವಗುರು ಫ್ರಾನ್ಸಿಸ್ ರವರು ಇವುಗಳ ಶಕ್ತಿಯು ನಮ್ಮನ್ನು ಕದಡಿ ಬಿಡುತ್ತದೆ ಹಾಗೂ ಕೆಲವೊಂದು ಕ್ಷಣಗಳಲ್ಲಿ ನಮ್ಮನ್ನ ನಿಷ್ಕ್ರಿಯೆ ಗೊಳಿಸುತ್ತದೆ ಎಂಬುದನ್ನು ತಿಳಿಸಿದರು.

ಎಷ್ಟೋ ಹೋರಾಟಗಾರರು ಸವಾಲುಗಳನ್ನು ಎದುರಿಸುವ ಮೊದಲೇ ಶರಣಾಗಿ ಬಿಟ್ಟಿದ್ದಾರೆ. ಧೈರ್ಯ ಮೊದಲ ಹಾಗೂ ಮೂಲಭೂತವಾದಂತಹ  ಸದ್ಗುಣವಾಗಿದೆ ಇದು ನಮ್ಮನ್ನೇ ನಾವು  ಜಯಿಸಲು ಸಹಾಯಕವಾಗಿದೆ.

ಅವರ ಪ್ರಕಾರ ಬಹಳಷ್ಟು ಆತಂಕ ಹಾಗೂ ಭಯ ನಮ್ಮೊಳಗೆ ಹುಟ್ಟಿಬರುವಂತದ್ದು ಅನೈಜವಾದದ್ದು, ಇದು ಯಾವುದನ್ನು ಸಹ ಕಾರ್ಯನಿರ್ವಹಿಸದೆ ಮಾಡುವಂತದ್ದಾಗಿದೆ. ಅದರ ಬದಲು ಒಂದೊಂದು ಸವಾಲನ್ನು ಒಂದು  ಸಮಯದಲ್ಲಿ ಎದುರಿಸಬೇಕು ಏಕಾಂಗಿಯಾಗಿಯಲ್ಲ,  ಪವಿತ್ರಾತ್ಮರ ಸ್ಮರಣೆಯನ್ನ ಮಾಡುತ್ತಾ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು.

ನಾವು ನಂಬಿಕೆ ಇಟ್ಟು ಪ್ರಾಮಾಣಿಕವಾಗಿ ಒಳ್ಳೆಯದನ್ನು ಬಯಸಿದರೆ ದೇವರು ನಮ್ಮೊಂದಿಗೆ ಇರುತ್ತಾರೆ. ವಿಶ್ವಗುರು ಫ್ರಾನ್ಸಿಸ್ ರವರು ಇದನ್ನ ಪುನಹ ತಿಳಿಸಿದರು ಪ್ರತಿಯೊಂದು ಪರಿಸ್ಥಿತಿಯಲ್ಲಿ ನಾವು ದೇವರ ಸಹಾಯವನ್ನು ಬೇಡಿದರೆ ದೇವರು ನಮ್ಮನ್ನು ಪೋಷಿಸಿ ರಕ್ಷಣಾ ಕವಚದಿಂದ ನಮ್ಮನ್ನು ಕಾಪಾಡುತ್ತಾರೆ.

ಸಕ್ರಿಯವಾದ ಅಂಶ

ವಿಶ್ವಗುರುಗಳು ತದನಂತರ ಧೈರ್ಯದ ಸ್ವಭಾವದ ಬಗ್ಗೆ ಹೆಚ್ಚು ಸಕ್ರಿಯವಾದ ಅಂಶದ ಬಗ್ಗೆ ಸೂಚಿಸಿದರು.

ಆಂತರಿಕ ಶತ್ರುಗಳ ಜೊತೆಗೆ ವಿಶ್ವಗುರು ಫ್ರಾನ್ಸಿಸ್ ರವರು ಬಾಹ್ಯ ಶತ್ರುಗಳ ಬಗ್ಗೆ ತಿಳಿಸುತ್ತಾ,  ಅದರಲ್ಲೂ ಜೀವಕ್ಕೆ ಸವಾಲುಗಳನ್ನು ಒಡ್ಡುವ ಸಮಸ್ಯೆಗಳು, ಆತಂಕಗಳು ಹಾಗೂ ಕಿರುಕುಳಗಳನ್ನು  ನಾವು ಎದುರು ನೋಡುವುದಿಲ್ಲ ಬದಲಾಗಿ ಅವು ಆಶ್ಚರ್ಯಕರವಾಗಿ ಬಂದುದುಗುತ್ತವೆ.

ಅವರು ಮುಂದುವರಿಸುತ್ತಾ ನಾವು ನಮ್ಮ ಜೀವನದಲ್ಲಿ ನಮಗೆ ಏನಾಗಬಹುದು ಎಂಬುದನ್ನು ಊಹಿಸಬಹುದು, ಬಹುತೇಕ ಏನು ಯೋಚನೆ ಮಾಡುವುದಿಲ್ಲವೋ ಆ ಸನ್ನಿವೇಶಗಳೇ ಹೆಚ್ಚು ಸಂಭವಿಸುತ್ತದೆ. ಬದುಕೆಂಬ ಕಡಲಲ್ಲಿ ನಮ್ಮ ದೋಣಿಗೆ ಅಲೆಗಳು ಬಂದು ಅಪ್ಪಳಿಸುತ್ತವೆ ನಾವು ಬಾಳ ಸಂಯಮ ಹಾಗೂ ಸ್ತೈರ್ಯದಿಂದ ನಮ್ಮ ದೋಣಿಯನ್ನ ಒಳ್ಳೆಯ ನಾವಿಕನಂತೆ ಸಾಗಿಸಬೇಕು. ಅದರಲ್ಲೂ ವಿಶೇಷವಾಗಿ ಧೈರ್ಯದಿಂದ ಮುನ್ನುಗ್ಗುವ ನಾವಿಕನಂತೆ ಜೀವಿಸಬೇಕು. 

ಧೈರ್ಯವೂ ಮೂಲಭೂತ ವಾದಂತಹ ಸದ್ಗುಣವಾಗಿದೆ. ಕಾರಣ ಪ್ರಪಂಚದ ಎಲ್ಲ ಕೆಟ್ಟವುಗಳಿಗೆ ಇದು ಸವಾಲನ್ನು ಎಸಗುತ್ತದೆ.

ಕೆಟ್ಟದರ ವಿರುದ್ಧ ಕೂಗಿ ಸಾರುತ್ತದೆ.

ಕೆಲವರು ತಮ್ಮ ಜೀವನದಲ್ಲಿ ಕೆಟ್ಟವುಗಳು ಇಲ್ಲವೇ ಇಲ್ಲ ಎಂದು ಜೀವಿಸುತ್ತಾರೆ ಎಂದು ಅವರು ದುಃಖಿಸಿದರು. ಮಾನವನ ಇಚ್ಚೆ ಕೆಲವು ಬಾರಿ ಅಂಧಕಾರದಿಂದ ಕೂಡಿರುವುದಿಲ್ಲ ಬದಲಾಗಿ ಅಂದಕಾರದ ಶಕ್ತಿ ಸಾವನ್ನು ಬರ ಮಾಡುತ್ತದೆ  ಹಾಗೆ ಅದು ಇತಿಹಾಸವನ್ನು ಬದಲಾಯಿಸುವುದಿಲ್ಲ.

ಆದರೆ ಇದು ಸಾಕು ಎಂದು ಹೇಳಿ ಅವರು ಇತಿಹಾಸ ಇತಿಹಾಸದ ಪುಸ್ತಕಗಳಲ್ಲಿ ಓದಿದರು ದುರಾದೃಷ್ಟವಶಾತ್ ಸುದ್ದಿ ಪತ್ರಿಕೆಗಳಲ್ಲೂ ನಾವು ನೀಚ ಕೃತ್ಯಗಳನ್ನು ನೋಡುತ್ತೇವೆ ಅದರ ಜೊತೆ ಬಾಗಶಃ ನಾವು ಬಲಿಪಶುಗಳಾಗುತ್ತೇವೆ ಹಾಗೂ ಭಾಗಶಹ ನಾವು ದೋಷಿಗಳಾಗುತ್ತೇವೆ. ಯುದ್ಧ ,ಕ್ರೌರ್ಯ,  ಜೀತಪದ್ಧತಿ ಹಾಗೂ ಶೋಷಣೆ ಇವೆಲ್ಲವೂ ವಾಸಿ ಮಾಡಲಾಗದ ಗಾಯಗಳಾಗಿ ಉಳಿದುಬಿಟ್ಟಿದೆ ಈಗಲೂ ಅದರಿಂದ ರಕ್ತ ಸುರಿಯುತ್ತಿದೆ.

ಸ್ಥೈರ್ಯವೆಂಬ ಸದ್ಗುಣ ಈ ಎಲ್ಲದರ ವಿರುದ್ಧ ಹೋರಾಡಿ ಗಟ್ಟಿಯಾಗಿ ಎಲ್ಲದಕ್ಕೂ ಇಲ್ಲ ಎಂದು ಒತ್ತಿ ಹೇಳುತ್ತದೆ.

ಅವರು ಗಮನಿಸಿದರು ಒಂದು ಅವಶ್ಯಕತೆ ಇದೆ ಯಾರಾದರೂ ಇಂತಹ ಮುಗ್ಧ ವ್ಯಕ್ತಿಗಳನ್ನ ಎಬ್ಬಿಸಿ ಮೃದುವಾದ ಸ್ಥಳದಿಂದ ಅವರನ್ನು ಎತ್ತಿ ಸುರಕ್ಷಿತಗೊಳಿಸಿ.  ಸದಾ ಕೆಟ್ಟದ್ದಕ್ಕೆ ಪುನರಾವರ್ತಿತವಾಗಿ ಇಲ್ಲ ಎಂದು ಹೇಳಿ ಭಿನ್ನತೆಗೆ ಕೊನೆ ಹಾಡುವುದಾಗಿದೆ.


ವಿಶ್ವಗುರು ಫ್ರಾನ್ಸಿಸ್ ರವರು ಕೊನೆಯದಾಗಿ ಪ್ರಾರ್ಥನೆಯ ಮೂಲಕ ಕೊನೆಗೊಳಿಸಿ ಹೀಗೆಂದು ಹೇಳಿದರು "ಆದ್ದರಿಂದ ನಾವೆಲ್ಲರೂ ಪ್ರಭು ಯೇಸುವಿನ ಸ್ಥೈರ್ಯದ ಶುಭಸಂದೇಶವನ್ನು ಕಂಡುಹಿಡಿಯಬೇಕು ಹಾಗೂ ಸಾಕ್ಷಿ ನೀಡುವ ಸಂತರುಗಳಾಗಬೇಕೆಂದು ತಿಳಿಸಿದರು.

11 April 2024, 16:29