ಹುಡುಕಿ

ರೋಮ್ ಧರ್ಮಕ್ಷೇತ್ರಕ್ಕೆ ನೂತನ ಕಾರ್ಡಿನಲ್ ವಿಕಾರ್ ಅನ್ನು ನೇಮಿಸಲು ವಿವೇಚನೆ ನಡೆಸುತ್ತಿರುವ ಪೋಪ್

ರೋಮ್ ವಿಕಾರಿಯೆಟ್ (ಧರ್ಮಕ್ಷೇತ್ರ) ನ ಮಾಧ್ಯಮ ಕಚೇರಿಯ ಹೇಳಿಕೆಯ ಪ್ರಕಾರ ನೂತನ ಕಾರ್ಡಿನಲ್ ವಿಕಾರ್ ಅನ್ನು ನೇಮಿಸಲು ಪೋಪ್ ಫ್ರಾನ್ಸಿಸ್ ಅವರು "ಆರೋಗ್ಯಕರ ವಿವೇಚನೆ"ಯನ್ನು ಬಳಸುತ್ತಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಇಂದು ಸೋಮವಾರ ಬೆಳಿಗ್ಗೆ ವ್ಯಾಟಿಕನ್ ನಗರದ ಪ್ರೇಷಿತ ಅರಮನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ರೋಮ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮಂಡಳಿಯ ಸಭೆಯನ್ನು ನಡೆಸಿದರು.

ಕಾರ್ಡಿನಲ್ ವಿಕಾರ್ ಸ್ಥಾನವು ಅತ್ಯಂತ ಪ್ರಮುಖ ಸ್ಥಾನವಾಗಿರುವ ಕಾರಣ,ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆರಿಸಲು ಪೋಪ್ ಫ್ರಾನ್ಸಿಸ್ ಅವರು ಆರೋಗ್ಯಕರ ವಿವೇಚನೆಯನ್ನು ಬಳಸುತ್ತಿದ್ದಾರೆ. ಹಾಗಾಗಿ, ಈ ಕಾರ್ಯ ಆಗುವವರೆಗೂ ತಮ್ಮ ಪಾಲನಾ ಸೇವೆ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಮುಂದುವರೆಸಬೇಕೆಂದು ಪೋಪ್ ಫ್ರಾನ್ಸಿಸ್ ರೋಮ್ ಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಿಗೆ ಹೇಳಿದ್ದಾರೆ.

ಪ್ರೇಷಿತ ಸಂವಿಧಾನ "ಎಕ್ಲೀಸಿಯಾರುಂ ಕಮ್ಯುನಿಯೋನೆ" ಪರಿಚ್ಚೇಧ 14 (3) ಕಾರ್ಡಿನಲ್ ವಿಕಾರ್ ಹುದ್ದೆಯ ಕುರಿತು ಮಾಹಿತಿ ನೀಡುತ್ತದೆ. ಈ ಸ್ಥಾನವು ಖಾಲಿ ಇರುವ ಅವಧಿಯಲ್ಲಿ ಇದರ ಅಧಿಕಾರ ಹಾಗೂ ಕರ್ತವ್ಯಗಳನ್ನು ವೈಸ್ಜೆರೆಂಟ್ ಧರ್ಮಾಧ್ಯಕ್ಷ ಬಾಲ್ಡಸ್ಸೆರೆ ರೈನಾ ಅವರು ನಿರ್ವಹಿಸಲಿದ್ದಾರೆ.

08 April 2024, 19:00