Pope Francis receives participants in the Plenary Assembly of the Pontifical Biblical Commission Pope Francis receives participants in the Plenary Assembly of the Pontifical Biblical Commission  (ANSA)

ಪೋಪ್ ಫ್ರಾನ್ಸಿಸ್: ಬೈಬಲ್ ಶ್ರೀಗ್ರಂಥವು ಮಾನವಕುಲಕ್ಕೆ ಯೇಸುವಿನ ಸಾಮಿಪ್ಯವನ್ನು ತೋರಿಸುತ್ತದೆ.

ಪೊಂಟಿಫಿಕಲ್ ಬಿಬ್ಲಿಕಲ್ ಆಯೋಗದ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಯೇಸುವಿನ ಕಾರುಣ್ಯದ ಮಾದರಿಯನ್ನು ಹಾಗೂ ಇತರರ ಯಾತನೆಗೆ ಒಳಗೊಳ್ಳುವ ಗುಣವನ್ನು ಆಳವಡಿಸಿಕೊಳ್ಳಬೇಕೆಂದು ಬೈಬಲ್ ತಜ್ಞರಿಗೆ ಪ್ರೋತ್ಸಾಹವನ್ನು ನೀಡಿದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಗುರುವಾರ ರೋಮ್ ನಗರದಲ್ಲಿ ಪೊಂಟಿಫಿಕಲ್ ಬಿಬ್ಲಿಕಲ್ (ಬೈಬಲ್) ಆಯೋಗವು ತನ್ನ ವಾರ್ಷಿಕ ಪೂರ್ವಭಾವಿ ಸಭೆಯನ್ನು ಕೊನೆಗೊಳಿಸಿತು. ಈ ವಾರ್ಷಿಕ ಪೂರ್ವಭಾವಿ ಸಭೆಯು ಬೈಬಲ್ ಶ್ರೀಗ್ರಂಥದಲ್ಲಿ ಖಾಯಿಲೆ ಮತ್ತು ಯಾತನೆ ಎಂಬ ಶೀರ್ಷಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು.

ಪ್ರತಿ ಮಾನವ ಜೀವನದ ಮೇಲೆ ಪರಿಣಾಮವನ್ನು ಬೀರುವ ಹಾಗೂ “ಆಳವಾಗಿ ಬೇರೂರಿರುವ ಈ ಶೀರ್ಷಿಕೆಯ ಕುರಿತು ಜಿಜ್ಞಾಸೆಯನ್ನು ನಡೆಸಿದ್ದಕ್ಕಾಗಿ” ಅವರನ್ನು ಅಭಿನಂದಿಸಲು ಪೋಪ್ ಫ್ರಾನ್ಸಿಸ್ ಅವರು ಆಯೋಗದ ಸದಸ್ಯರನ್ನು ಭೇಟಿ ಮಾಡಿದರು.

“ಗಾಯಗೊಂಡಿರುವ ನಮ್ಮ ಸ್ವಭಾವ ತನ್ನೊಳಗೆ ಇತಿಮಿತಿಗಳನ್ನು ಹಾಗೂ ಅಂತಿಮತೆಯ ವಾಸ್ತವವನ್ನು ಇಟ್ಟುಕೊಂಡಿದೆ ಮಾತ್ರವಲ್ಲದೆ ಕೆಡುಕಿನ ಹಾಗೂ ನೋವಿನ ವೈರುಧ್ಯಗಳನ್ನು ಅನುಭವಿಸುತ್ತದೆ.” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಯಾತನೆಯ ಜರಡಿ’ಯನ್ನು ರೂಪಾಂತರಗೊಳಿಸುವುದು

“ಮಾನವ ಯಾತನೆ ಹಾಗೂ ಖಾಯಿಲೆ ಎಂಬುದು ನನ್ನ ಹೃದಯಕ್ಕೆ ಹತ್ತಿರವಾದ ವಿಷಯಗಳು” ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಇವು ಪ್ರತಿಯೊಬ್ಬ ಕ್ರೈಸ್ತನೂ ಮಾನವೀಯ ನೆಲೆಗಟ್ಟಿನಲ್ಲಿ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ ಎಂದು ಹೇಳಿದರು.

“ಯಾತನೆ ಎಂಬ ವಿಷಯವನ್ನು ನಿರ್ಲಕ್ಷಿಸುವ ಬದಲು ನಾವು ಇತರರೊಂದಿಗೆ ಸುಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ಅದನ್ನು ಎದುರಿಸಬೇಕಿದೆ. ಹೀಗೆ, “ಯಾತನೆಯ ಜರಡಿಯನ್ನು” ವಿಶ್ವಾಸದಲ್ಲಿ ಬೆಳೆಯಲು ಇರುವ ಸದವಕಾಶವನ್ನಾಗಿ ಮಾರ್ಪಡಿಸುವಂತೆ ದೇವರಿಗೆ ನಾವು ಒಂದು ಅವಕಾಶವನ್ನು ನೀಡಬೇಕಿದೆ” ಎಂದು ಹೇಳಿದರು.

“ಪ್ರಭು ಕ್ರಿಸ್ತರು ಖಾಯಿಲೆಯನ್ನು ಸೋಲಿಸುವ ಸಲುವಾಗಿ ಧೈರ್ಯದಿಂದ ನಾವು ಖಾಯಿಲೆ ಹೊಂದಿರುವ ಹಾಗೂ ರೋಗಗ್ರಸ್ಥ ಪರಿಸ್ಥಿತಿಯಲ್ಲಿ ಜೀವಿಸುತ್ತಿರುವವರ ಆರೈಕೆಯನ್ನು ಮಾಡಬೇಕಿದೆ” ಎಂದು ಹೇಳಿದ ಪೋಪ್ ಫ್ರಾನ್ಸಿಸ್, “ಅವರು ನಮ್ಮೆಲ್ಲಾ ಯಾತನೆಯನ್ನು, ಬೀಜಗಳು ಫಲ ನೀಡುವಂತೆ, ಅವರ ರಕ್ಷಣಾ ಕಾರ್ಯಕ್ಕೆ ಅರ್ಪಿಸಬೇಕೆಂದು ತಿಳಿಸುತ್ತಾರೆ” ಎಂದು ನುಡಿದರು.

ಯಾತನೆ ಅನುಭವಿಸುತ್ತಿರುವವರನ್ನು ಸ್ಪರ್ಶಿಸಬೇಕೆ ವಿನ: ಕೇವಲ ಹಳಸಲು ಪದಗಳನ್ನು ಬಳಸಬಾರದು

ಕಾರುಣ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪೋಪ್ ಫ್ರಾನ್ಸಿಸ್ “ಬೈಬಲ್ ಶ್ರೀಗ್ರಂಥದಲ್ಲಿ ಯೇಸು ಕ್ರಿಸ್ತರು ಜನರನ್ನು ಸಂಧಿಸುವುದೇ ಅವರು ಯಾತನೆಯನ್ನು ಅನುಭವಿಸುತ್ತಿರುವಾಗ, ಉದಾಹರಣೆಗೆ ಅವರ ಪ್ರಭೋದನೆಯನ್ನು ಆಲಿಸಲು ಬಂದ ಜನತೆ ಹಸಿವಿನಿಂದ ನರಳುವಾಗ ಅವರಿಗೆ ಆಹಾರ ನೀಡುತ್ತಾರೆ, ಕುರುಡರು ಅವರನ್ನು ಬೇಡಿಕೊಳ್ಳುವಾಗ, ಹಾಗೂ ಅನೇಕ ಖಾಯಿಲೆ ಮನುಷ್ಯರನ್ನು ಅವರು ಗುಣಪಡಿಸುವ ಮೂಲಕ ತಾನು ಯಾತನೆಯನ್ನು ಅನುಭವಿಸುತ್ತಿರುವವರ ಪರ ಎಂದು ಸಾಭೀತುಪಡಿಸಿದ್ದಾರೆ.” ಎಂದು ಹೇಳಿದರು.

“ಯೇಸು ಕ್ರಿಸ್ತರು ಯಾತನೆಯನ್ನು ವಿವರಿಸುವುದಿಲ್ಲ ಬದಲಿಗೆ ಯಾತನೆ ಹೊಂದಿರುವವರನ್ನು ಗುಣ ಪಡಿಸಲು ಮುಂದೆ ಬಾಗುತ್ತಾರೆ” ಎಂದು ಪೋಪ್ ಫ್ರಾನ್ಸಿಸ್ ಹೇಳುತ್ತಾರೆ. ಮುಂದುವರೆದು ಹೇಳುವ ಪೋಪ್ “ಯೇಸು ಕ್ರಿಸ್ತರು ಯಾತನೆಯ ಕುರಿತು ಒಣ ಮಾತುಗಳನ್ನೋ ಅಥವಾ ನಕಲಿ ಸಮಾಧಾನವನ್ನೋ ನೀಡುವುದಿಲ್ಲ; ಬದಲಿಗೆ ಅದನ್ನು ಅನುಭಾವತೆಯಲ್ಲಿ ಆತುಕೊಳ್ಳುತ್ತಾರೆ.” ಎಂದು ಹೇಳಿದರು.

ಸಂಕಷ್ಟದಲ್ಲಿ ಸ್ವ-ನಿರ್ಲಿಪ್ತತೆಗೆ ಪ್ರತಿವಿಷ

“ಪ್ರಭು ಕ್ರಿಸ್ತರು ಎಂದಿಗೂ ಯಾರನ್ನೂ ದೇವರ ಸಾಮ್ರಾಜ್ಯದಿಂದ ಹೊರಗಿಡುವುದಿಲ್ಲ; ಬದಲಿಗೆ ಎಲ್ಲರನ್ನೂ ಸ್ವಾಗತಿಸಿ, ಎಲ್ಲರಿಗೂ ಅರ್ಪಿಸುತ್ತಾರೆ.” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಕೊನೆಯದಾಗಿ, ಪೋಪ್ ಫ್ರಾನ್ಸಿಸ್ “ವಿಮರ್ಶೆಯ ತೀವ್ರತೆ ಮತ್ತು ಸೋದರತೆಯ ಸ್ಪೂರ್ತಿಯಿಂದ ಕಾರುಣ್ಯ ಮತ್ತು ಒಳಗೊಳ್ಳುವಿಕೆ ಎಂಬ ವಿಷಯಗಳ ಕುರಿತು ಸಂವಾದಿಸುವಂತೆ” ಪೋಪ್ ಫ್ರಾನ್ಸಿಸ್ ಪೊಂಟಿಫಿಕಲ್ ಬೈಬಲ್ ಆಯೋಗದ ಸದಸ್ಯರಿಗೆ ಕರೆ ನೀಡಿದರು.

11 April 2024, 15:21