ತಜಕಿಸ್ತಾನ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಶುಕ್ರವಾರ ಬೆಳಗ್ಗೆ ಪೋಪ್ ಫ್ರಾನ್ಸಿಸ್ ಅವರು ತಟಕಿ ಸ್ಥಾನ ದೇಶದ ಅಧ್ಯಕ್ಷರಾದ ಇಮೋಮಲಿ ರಹಮಾನ್ ಅವರನ್ನು ವ್ಯಾಟಿಕನ್ ನಗರಕ್ಕೆ ಸ್ವಾಗತಿಸಿದರು.
ತದನಂತರ ತಜಕಿಸ್ಥಾನ್ ಅಧ್ಯಕ್ಷರಾದ ಈ ಇಮೊಮಲಿ ರಹಮಾನ್ ಅವರು ವ್ಯಾಟಿಕಲಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇಟ್ರೋ ಪರೋಲಿನ್ ಹಾಗೂ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾದ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿದರು.
ಈ ಮಾತುಕತೆಯಲ್ಲಿ ಉಭಯ ಪಕ್ಷಗಳು ವ್ಯಾಟಿಕನ್ ಹಾಗೂ ಕಜಕಿಸ್ತಾನ್ ದೇಶದ ನಡುವೆ ಇರುವ ಸಂಬಂಧ ಹಾಗೂ ಬಾಂಧವ್ಯದ ಕುರಿತು ಚರ್ಚಿಸಿದರು ಮಾತ್ರವಲ್ಲದೆ ತಜಕಿಸ್ತಾನ್ ದೇಶದಲ್ಲಿನ ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳ ಕುರಿತು ಸಹ ಚರ್ಚೆ ನಡೆಸಿದರು. ಸಂವಾದದ ಪ್ರಾಮುಖ್ಯತೆ ಹಾಗೂ ಜಾಗತಿಕ ಶಾಂತಿಯನ್ನು ಉತ್ತೇಜಿಸಲು ಜನರು ಮತ್ತು ಸಂಸ್ಕೃತಿಗಳ ನಡುವೆ ಹೊಂದಾಣಿಕೆ ಅತಿ ಮುಖ್ಯವಾಗಿದೆ ಎಂಬುದರ ಕುರಿತು ಈ ಮಾತುಕತೆಯಲ್ಲಿ ಚರ್ಚೆ ನಡೆಯಿತು.
ಈ ಮಾತುಕತೆಗಳ ಕೊನೆಯಲ್ಲಿ ತಜಕಿಸ್ತಾನದ ಅಧ್ಯಕ್ಷರು ಫ್ರಾನ್ಸಿಸ್ ಅವರಿಗೆ ಇರಾನ್ ದೇಶದಲ್ಲಿ ಮಾತ್ರ ಸಿಗುವ ಸೊಸಾರಿಯನ್ ಕಲ್ಲಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಅಂತೆಯೇ ಪೋಪ್ ಫ್ರಾನ್ಸಿಸ್ ಅವರು ಸಹ ಗಜಕಿಸ್ತಾನದ ಅಧ್ಯಕ್ಷರಿಗೆ "ಡೆಲಿಕೇಟ್ ಫ್ಲವರ್" ಎಂಬ ಸುಂದರ ಪ್ರತಿಮೆಯನ್ನು ನೆನಪಿನ ಕಾಣಿಕೆಯನ್ನಾಗಿ ನೀಡಿದರು.