ಹುಡುಕಿ

A A  (ANSA)

ಪೋಪ್: ಹಿರಿಯರು ಹಾಗೂ ಯುವ ಸಮೂಹದೊಂದಿಗೆ ಹಂಚಿಕೊಳ್ಳುವ ಪ್ರೀತಿಯು ಸಮಾಜವನ್ನು ಸುಜ್ಞಾನದಿಂದ ತುಂಬುತ್ತದೆ

ಗ್ರೇಟ್ ಏಜ್ ಫೌಂಡೇಶನ್ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಫೋಪ್ ಫ್ರಾನ್ಸಿಸ್, ಅಂತರ್-ತಲೆಮಾರಿನ ಪ್ರೀತಿಗೆ ಸಮಾಜವನ್ನು ಪರಿವರ್ತಿಸುವ ಹಾಗೂ ಅದನ್ನು ಸುಜ್ಞಾನದಿಂದ ತುಂಬುವ ಶಕ್ತಿ ಇದೆ ಎಂದು ಹೇಳಿದರು.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಶನಿವಾರ ಆರನೇ ಪೌಲರ ಸಭಾಂಗಣದಲ್ಲಿ ಗ್ರೇಟ್ ಏಜ್ ಫೌಂಡೇಶನ್ ಪ್ರತಿಷ್ಠಾನವು ಸುಮಾರು 6000 ಅಜ್ಜ-ಅಜ್ಜಿಯರನ್ನು ಹಾಗೂ ಅವರ ಮೊಮ್ಮಕ್ಕಳನ್ನು ಒಗ್ಗೂಡಿಸಿ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಿರಿಯರ ಹಕ್ಕುಗಳು ಹಾಗೂ ಅವರಿಗಾಗಿ ಸಮಾಜದ ಕರ್ತವ್ಯಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಫೋಪ್ ಫ್ರಾನ್ಸಿಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ವ್ಯಾಟಿಕನ್ನಿನ ಅಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಅಧ್ಯಕ್ಷರಾಗಿರುವ ಆರ್ಚ್'ಬಿಷಪ್ ವಿನ್ಸೆನ್ಸೋ ಪಾಲಿಯ ಅವರಿಗೆ ಧನ್ಯವಾದವನ್ನು ತಿಳಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಹಿರಿಯರು ಹಾಗೂ ಕಿರಿಯರು ಒಟ್ಟಾಗಿ ಸಮಯ ಕಳೆಯುವುದರ ಪ್ರಾಮುಖ್ಯತೆಯ ಕುರಿತು ಮಾತನಾಡಿ, ಅವರು ಹಂಚಿಕೊಳ್ಳುವ ಪ್ರೀತಿ ಜಗತ್ತನ್ನು ಉತ್ತಮವಾಗಿಸುತ್ತದೆ ಮಾತ್ರವಲ್ಲದೆ, ಶ್ರೀಮಂತ ಹಾಗೂ ಸುಜ್ಞಾನವಾಸುತ್ತದೆ ಎಂದು ಹೇಳಿದರು.

ಅಂತರ್ ತಲೆಮಾರಿನ ಪ್ರೀತಿಯೆಂಬುದು ಹೇಗೆ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂಬುದರ ಕುರಿತು ಮಾತನಾಡಿ ಪೋಪ್ ಫ್ರಾನ್ಸಿಸ್ ತಮ್ಮ ಬಾಲ್ಯದಲ್ಲಿ ತಮ್ಮ ಅಜ್ಜಿ ಹೇಳಿದ ಕಥೆಯನ್ನು ನೆನಪಿಸಿಕೊಂಡರು. ಆ ಕಥೆಯ ಮೂಲಕ ಅವರು ಯಾರನ್ನು ಸಹ ಒಳಗೊಳ್ಳದೆ ಇರಬಾರದು ಅಥವಾ ಬೇರೆಯಾಗಿ ನೋಡಬಾರದು ಎಂಬುದನ್ನು ಕಲಿತುಕೊಂಡೆ ಎಂದು ಹೇಳಿದರು.

ಪ್ರೀತಿಯಿಂದ ಎಲ್ಲರನ್ನು ಒಳಗೊಳ್ಳುವ ಮೂಲಕವೇ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ತೀರ ವೈಯಕ್ತಿಕವಾಗುತ್ತಿರುವ ಇಂದಿನ ಸಮಾಜದಲ್ಲಿ ಹಿರಿಯರು ಹಾಗೂ ಹಿರಿಯರ ನಡುವೆ ಹಂಚಿಕೊಳ್ಳುವ ಪ್ರೀತಿಯು ಸಮಾಜವನ್ನು ಉತ್ತಮ ಸಮಾಜವನ್ನಾಗಿ ಮಾಡುತ್ತದೆ ಮಾತ್ರವಲ್ಲದೇ ನಮ್ಮನ್ನು ಸಹ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದು ಹೇಳಿದರು. ನಮಗೆ ಇರುವುದು ಒಂದೇ ಜಗತ್ತು. ಈ ಜಗತ್ತು ಹಲವಾರು ತಲೆಮಾರುಗಳಿಂದ ಆವೃತ್ತವಾಗಿದೆ ಎಂದು ಹೇಳಿದರು.

ಅತ್ಯುತ್ತಮ ವಜ್ರದಂತೆ ಎರಡು ತಲಮಾರುಗಳು ಅಂದರೆ ಹಿರಿಯರು ಹಾಗೂ ಕಿರಿಯರು ಒಂದಾಗಿ ಪರಸ್ಪರ ಪ್ರೀತಿಯಿಂದ ಇದ್ದರೆ ಈ ಜಗತ್ತನ್ನು ಅತ್ಯುತ್ತಮ ಸ್ಥಳವನ್ನಾಗಿ ಪರಿವರ್ತಿಸಬಹುದು ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ಅಜ್ಜ ಅಜ್ಜಿಯರು ಮೊಮ್ಮಕ್ಕಳಿಗೆ ಯುದ್ಧದ ಭೀಕರತೆಯ ಕುರಿತು ಹೇಳಿ, ಶಾಂತಿಯ ಪ್ರಾಮುಖ್ಯತೆಯ ಕುರಿತು ಮನದಟ್ಟು ಮಾಡಿಸಬಹುದು ಎಂದು ಪೋಪ್ ಫ್ರಾನ್ಸಿಸ್ ನುಡಿದರು.

27 April 2024, 16:59