ಹುಡುಕಿ

Pope Francis leads Regina Caeli prayer at the Vatican Pope Francis leads Regina Caeli prayer at the Vatican  (VATICAN MEDIA Divisione Foto)

ರೆಜಿನಾ ಚೇಲಿ ಪ್ರಾರ್ಥನೆಯಲ್ಲಿ ಪೋಪ್: ಪುನರುತ್ಥಾನರಾದ ಕ್ರಿಸ್ತರಲ್ಲಿ ವಿಶ್ವಾಸವಿಡಿ

ಪಾಸ್ಖ ಕಾಲದ ಎರಡನೇ ಭಾನುವಾರದಂದು ಪುನರುತ್ಥಾನರಾದ ಪ್ರಭು ಯೇಸುಕ್ರಿಸ್ತರಲ್ಲಿನ ವಿಶ್ವಾಸದ ಪರಿವರ್ತಕ ಶಕ್ತಿಯ ಕುರಿತು ಮಾತನಾಡಿದರು. ಪ್ರಾರ್ಥನೆ, ಪ್ರೀತಿಯ ಮೂಲಕ ಪಾಸ್ಕ ಸಂತೋಷವನ್ನು ಪಸರಿಸುವಂತೆ ಭಕ್ತಾದಿಗಳಿಗೆ ಪ್ರೋತ್ಸಾಹವನ್ನಿತ್ತರು.

ವರದಿ: ಫ್ರಾನ್ಚೆಸ್ಕ ಮರ್ಲೋ, ಅಜಯ್ ಕುಮಾರ್

ಪೋಪ್ ಸಂತ ದ್ವಿತೀಯ ಜಾನ್ ಪೌಲರು ಪಾಸ್ಖಖಕಾಲದ ಎರಡನೇ ಭಾನುವಾರವನ್ನು ದೈವಿಕ ಕರುಣೆಯ ಭಾನುವಾರ ಎಂದು ಆಚರಿಸಲು ಕರೆ ನೀಡಿದ್ದರು ಎಂಬ ಕುರಿತು ಮಾತನಾಡುತ್ತಾ, ಭಾನುವಾರ ಏಪ್ರಿಲ್ 07 ರಂದು ತಮ್ಮ ರೆಜಿನಾ ಚೇಲಿ ಪ್ರಾರ್ಥನೆಯನ್ನು ಆರಂಭಿಸಿದರು.

"ಶುಭಸಂದೇಶಗಳು ನಮಗೆ ಹೇಳುವಂತೆ, ನಾವು ದೇವರ ಪುತ್ರ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವನ್ನಿಟ್ಟರೆ ಆತನ ನಾಮದಲ್ಲಿ ನಾವು ಜೀವೋದ್ಧಾರವನ್ನು ಹೊಂದುತ್ತೇವೆ." ಜೀವವನ್ನು ಹೊಂದುವುದು? ಹಾಗೆಂದರೇನು? ಎಂದು ಪೋಪ್ ಪ್ರಶ್ನಿಸಿದರು.

ಜೀವವನ್ನು ಹೊಂದುವುದೆಂದರೆ...!

ಪ್ರತಿಯೊಬ್ಬರಿಗೂ ಜೀವವನ್ನು ಹೊಂದಬೇಕು ಎಂಬ ಆಸೆ ಇದೆ. ಆದರೆ, ಅದನ್ನು ಹೊಂದುವುದಕ್ಕೆ ಹಲವು ವಿಧಾನಗಳಿವೆ ಎಂಬುದನ್ನು ಪೋಪ್ ಫ್ರಾನ್ಸಿಸ್ ಹೇಳಿದರು.

"ಬದುಕುವುದನ್ನು ಕೆಲವರು ಕನಿಷ್ಟ ಮಟ್ಟಕ್ಕಿಳಿಸಿ, ಹಲವಾರು ವಸ್ತುಗಳನ್ನು ಹೊಂದುವುದಕ್ಕೆ ಅಪೇಕ್ಷಿಸುತ್ತಾರೆ. ಇದು ಮೊದಲಿಗೆ ಹಿತಕರವೆನಿಸಬಹುದು ಆದರೆ ಅದು ಹೃದಯದ ತೃಪ್ತಿಯನ್ನು ನೀಡುವುದಿಲ್ಲ" ಎಂದರು. ಇದು ನಿತ್ಯ ಸಂತೋಷಕ್ಕೆ ನಮ್ಮನ್ನು ಒಯ್ಯದ ಕಾರಣ, ಜೀವವನ್ನು ಹೊಂದಲು ಇದು ಸರಿಯಾದ ದಾರಿಯಲ್ಲ ಎಂದು ಪೋಪ್ ಫ್ರಾನ್ಸಿಸ್ ನುಡಿದರು.

ಯೇಸುವಿನಲ್ಲಿ ಪರಿಪೂರ್ಣತೆ ಇದೆ.

"ಇಂದಿನ ಶುಭಸಂದೇಶದಲ್ಲಿ ಹೇಳಿರುವ ಜೀವದ ಪರಿಪೂರ್ಣತೆಯನ್ನು ನಾವು ಯೇಸುಕ್ರಿಸ್ತರಲ್ಲಿ ಮಾತ್ರ ಕಾಣಬಹುದಾಗಿದೆ" ಎಂದು ಹೇಳಿದ ಪೋಪ್, "ಆದರೆ ಇದನ್ನು ಹೊಂದುವುದು ಅಥವಾ ಪಡೆಯವುದು ಹೇಗೆ?" ಎಂದು ಮತ್ತೊಮ್ಮೆ ಪ್ರಶ್ನಿಸಿದರು.

"ಶಿಲುಬೆಯಲ್ಲಿ ತೂಗಾಡುತ್ತಿರುವ ಕ್ರಿಸ್ತರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಹಾಗೂ ಪುನರುತ್ಥಾನರಾದ ಅವರಲ್ಲಿ ನಮ್ಮ ವಿಶ್ವಾಸವನ್ನಿಡುವುದು, ಸಂಸ್ಕಾರಗಳಲ್ಲಿ ಅವರನ್ನು ಭೇಟಿ ಮಾಡುವುದು, ಅವರಲ್ಲಿ ಭರವಸೆಯನ್ನಿಟ್ಟು, ಅವರ ವರದಾನದ ಸ್ಪರ್ಶವನ್ನು ಪಡೆಯವುದು ಹಾಗೂ ಅವರ ಮಾದರಿಯನ್ನು ಅನುಸರಿಸುವುದರ ಮೂಲಕ ನಾವು ಜೀವದ ಪರಿಪೂರ್ಣತೆಯನ್ನು ಹೊಂದಬಹುದಾಗಿದೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಯೇಸು ಕ್ರಿಸ್ತರು ನಾವು ಪರಿಪೂರ್ಣ ಜೀವನವನ್ನು ಹೊಂದಲು ಬಯಸುತ್ತಾರೆ ಎಂದು ಹೇಳಿದರು.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಭಕ್ತಾಧಿಗಳಿಗೆ "ನಾನು ಯೇಸುವಿನ ಪುನರುತ್ಥಾನದ ಶಕ್ತಿಯಲ್ಲಿ ವಿಶ್ವಾಸವಿಟ್ಟಿದ್ದೇನೆಯೇ? ಪಾಪದ ಹಾಗೂ ಮರಣದ ವಿರುದ್ಧ ಅವರು ಸಾಧಿಸಿದ ವಿಜಯದಲ್ಲಿ ನಂಬಿಕೆ ಇಟ್ಟಿದ್ದೇನೆಯೇ? ಅವರೊಂದಿಗೆ ಸತ್ಸಂಬಂಧವನ್ನು ಹೊಂದಲು ನಾನು ಕಾತುರನಾಗಿದ್ದೇನೆಯೇ? ನನ್ನ ಸಹೋದರ-ಸಹೋದರಿಯರನ್ನು ಪ್ರೀತಿಸಲು ಆತನ ಪ್ರೇರಣೆಯನ್ನು ಹೊಂದಲು ನಾನು ಸಿದ್ಧನಿದ್ದೇನೆಯೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಲು ಹೇಳಿದರು.

ಪುರುತ್ಥಾನರಾದ ಪ್ರಭುವಿನಲ್ಲಿ ಅಚಲ ವಿಶ್ವಾಸ ಹೊಂದುವ ವರದಾನಕ್ಕಾಗಿ ಪ್ರಾರ್ಥಿಸುವಂತೆ ಮಾತೆ ಮರಿಯಮ್ಮನವರ ಭಿನ್ನಹವನ್ನು ಬೇಡುವ ಮೂಲಕ ಪೋಪ್ ಫ್ರಾನ್ಸಿಸ್ ತಮ್ಮ ಪ್ರಾರ್ಥನೆಯನ್ನು ಮುಗಿಸಿದರು.

07 April 2024, 13:59