ಪೋಪ್: ಕ್ರೀಡೆ ಸಾಮಾಜಿಕ ಗೆಳೆತನವನ್ನು ಮತ್ತು ಸೋದರತೆಯನ್ನು ಪೋಷಿಸಬೇಕು
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಸಂತ ಪೇತ್ರರ ಮಹಾದೇವಾಲಯದ ಚೌಕದಲ್ಲಿ ನೆರೆದಿದ್ದ ಸುಮಾರು 15,000 ಜನರನ್ನು ಹಾಗೂ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸುತ್ತಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ, ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಅಭಿವೃದ್ದಿ ಮತ್ತು ಶಾಂತಿಗಾಗಿ ಅಂತರಾಷ್ಟ್ರೀಯ ಕ್ರೀಡಾ ದಿನವನ್ನು ಸ್ಮರಿಸಿಕೊಂಡರು. ಇದನ್ನು ಪ್ರತಿ ವರ್ಷ ಏಪ್ರಿಲ್ 6 ರಂದು ಆಚರಿಸಲಾಗುತ್ತದೆ.
ವಿಶ್ವದಾದ್ಯಂತ ಸಮುದಾಯಗಳಲ್ಲಿ ಹಾಗೂ ಜನತೆಯ ಬದುಕಿನಲ್ಲಿ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳು ಸಕಾರಾತ್ಮಕ ಮನೋಭಾವವನ್ನು ಗುರುತಿಸಲು ವಿಶ್ವಸಂಸ್ಥೆಯು ಈ ದಿನವನ್ನು ಆರಂಭಿಸಿದೆ.
ಅಭಿವೃದ್ದಿ ಮತ್ತು ಶಾಂತಿಗಾಗಿ ಅಂತರಾಷ್ಟ್ರೀಯ ಕ್ರೀಡಾ ದಿನ 2024 ನೇ ವರ್ಷದ ಶೀರ್ಷಿಕೆ "ಶಾಂತಿಯುತ ಹಾಗೂ ಒಳಗೊಳ್ಳುವ ಸಮಾಜದ ಉತ್ತೇಜನಕ್ಕಾಗಿ ಕ್ರೀಡೆ" ಎಂಬುದಾಗಿದೆ.
"ಹೇಗೆ ಕ್ರೀಡೆಯನ್ನು ಆಚರಿಸುವುದು ಮುಕ್ತ, ಪೂರ್ವಾಗ್ರಹ ಸಮಾಜವನ್ನು ಉಂಟುಮಾಡಬಲ್ಲದು" ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಕ್ರೀಡೆಯ ಮೌಲ್ಯಗಳನ್ನು ಎತ್ತಿ ಹಿಡಿದರು.
"ಅದಕ್ಕಾಗಿ, ಕ್ರೀಡಾಪಟುಗಳು ಹಾಗೂ ತರಭೇತುದಾರರುಗಳಾದ ನಾವು ಇದನ್ನು ಕೇವಲ ಗೆಲ್ಲುವುದಕ್ಕೆ ಅಥವಾ ಹಣ ಸಂಪಾದಿಸುವುದಕ್ಕೆ ಮಾತ್ರ ಬಳಸಿಕೊಳ್ಳಬಾರದು; ಬದಲಿಗೆ ಸಾಮಾಜಿಕ ಗೆಳೆತನವನ್ನು ಹಾಗೂ ಸೋದರತೆಯನ್ನು ಉತ್ತೇಜಿಸಲು ಉಪಯೋಗಿಸಬೇಕು" ಎಂದು ಪೋಪ್ ಫ್ರಾನ್ಸಿಸರು ಹೇಳಿದರು.
ಕೊನೆಯದಾಗಿ, ದಕ್ಷಿಣ ಆಫ್ರಿಕಾ ದೇಶದಲ್ಲಿ ಬಸ್ ಅಪಘಾತದಲ್ಲಿ ಮರಣ ಹೊಂದಿದ ಮುಗ್ಧಜನರನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸಿದರು.