2024.04.24 S.E. il SIgnor Alhaji Mahamudu Bawumia, Vice Presidente della Repubblica del Ghana 2024.04.24 S.E. il SIgnor Alhaji Mahamudu Bawumia, Vice Presidente della Repubblica del Ghana  (Vatican Media)

ಘಾನಾ ದೇಶದ ಉಪಾಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಘಾನ ದೇಶದ ಉಪಾಧ್ಯಕ್ಷ ಮಹಮಡು ಬವುಮಿಯ ಅವರನ್ನು ಸ್ವಾಗತಿಸಿ ಮಾತುಕತೆ ನಡೆಸಿದ್ದಾರೆ.

ವರದಿ: ಡೆಬೋರ ಕ್ಯಾಸ್ಟಲಿನೊ ಲೂಬೋವ್, ಅಜಯ್ ಕುಮಾರ್

ಪವಿತ್ರ ಪೀಠದ ಮಾಧ್ಯಮ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಬುಧವಾರ ತಮ್ಮ ಸಾರ್ವಜನಿಕ ಭೇಟಿಗೂ ಮುಂಚಿತವಾಗಿ ಪೋಪ್ ಆರನೇ ಪೌಡರ್ ಸಭಾಂಗಣದಲ್ಲಿ ಘಾನಾ ದೇಶದ ಉಪಾಧ್ಯಕ್ಷ ಡಾ. ಮಹಮಡು ಬವುಮಿಯ ಅವರನ್ನು ಬರಮಾಡಿಕೊಂಡರು.

ಡಾ. ಮಹಮಡು ಬವುಮಿಯ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರನ್ನು ಭೇಟಿ ಮಾಡಿದರು.

ಮೂಲಗಳ ಪ್ರಕಾರ ಈ ಮಾತುಕತೆಗಳು ಫಲಪ್ರದವಾಗಿದ್ದು ವ್ಯಾಟಿಕನ್ ಹಾಗೂ ಘನ ದೇಶದ ನಡುವಿನ ಉತ್ತಮ ಸಂಬಂಧಕ್ಕೆ ಹಾಗೂ ಬಾಂಧವ್ಯಕ್ಕೆ ಇನ್ನೂ ಹೆಚ್ಚಿನ ಅವಕಾಶಗಳನ್ನು ರೂಪಿಸಿವೆ.

ಈ ಮಾತುಕತೆಯಲ್ಲಿ ಪ್ರಸ್ತುತ ಅಂತರಾಷ್ಟ್ರೀಯ ವಿದ್ಯಮಾನಗಳ ಕುರಿತು ಹಾಗೂ ಪಶ್ಚಿಮ ಆಫ್ರಿಕಾ ದೇಶಗಳು ಎದುರಿಸುತ್ತಿರುವ ರಕ್ಷಣಾ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

24 April 2024, 16:56