ಕೃತಕ ಬುದ್ಧಿ ಆಧಾರಿತ G7 ಸಮಾವೇಶದಲ್ಲಿ ಪೋಪ್ ಪ್ರಾನ್ಸಿಸ್ ರವರು ಭಾಗವಹಿಸಲಿದ್ದಾರೆ
ವ್ಯಾಟಿಕನ್ ಸುದ್ದಿ/ ಸ್ವಾಮಿ ಸಿರಿಲ್ ವಿಕ್ಟರ್
ಇದೇ ಶುಕ್ರವಾರದಂದು ಪವಿತ್ರ ನಾಡಿನ ಪತ್ರಿಕಾ ಕಾರ್ಯಾಲಯವು ಕೃತಕ ಬುದ್ಧಿಯನ್ನು ಕುರಿತ ಸಮಾವೇಶವು ಇಟಲಿ ದೇಶದ ದಕ್ಷಿಣ ಭಾಗದಲ್ಲಿರುವ ಪುಳಿಯ ಪ್ರಾಂತ್ಯದಲ್ಲಿ ನಡೆಯಲಿದ್ದು ವಿಶ್ವಗುರುಗಳು ಇದರಲ್ಲಿ ಭಾಗವಹಿಸಲಿದ್ದಾರೆ
ಈ ಪ್ರಕಟಣೆಯನ್ನು ಇಟಲಿ ದೇಶದ ಪ್ರಧಾನ ಮಂತ್ರಿಗಳಾದ ಜಾರ್ಜಿಯ ಮೆಲೋನಿಯವರು ಪೋಪ್ ಫ್ರಾನ್ಸಿಸ್ ರವರ ಭಾಗವಹಿಸುವಿಕೆ ಬಹುತೇಕ ದೃಢಪಟ್ಟಿದ್ದು ಜೂನ್ 13 ರಿಂದ 15 ರವರೆಗೆ ಪುಳಿಯ ಪ್ರಾಂತ್ಯದಲ್ಲಿರುವ ಬೊರ್ಗೊ ಇಗ್ನಾಸಿಯಾ ಎನ್ನುವ ಸ್ಥಳದಲ್ಲಿ ನಡೆಯಲಿದೆ
ಇದೇ ಪ್ರಪ್ರಥಮ ಬಾರಿಗೆ ಕಥೋಲಿಕ ವಿಶ್ವಗುರುಗಳು ಬಾರಿ ಯಾಂತ್ರಿಕೃತ ಕೈಗೊಂಡ ಏಳು ರಾಷ್ಟ್ರಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮೆಲೋನಿಯವರು ತಿಳಿಸಿದ್ದಾರೆ ಮತ್ತು ವಿಶ್ವಗುರುಗಳು ಈ ಸಮಾವೇಶಕ್ಕೆ ಬರುವ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಸಮಾವೇಶದಲ್ಲಿ ಇಟಲಿಯೊಂದಿಗೆ, ಅಮೆರಿಕ, ಫ್ರಾನ್ಸ್, ಯುನೈಟೆಡ್ ಕಿಂಗ್ಡಂ, ಜರ್ಮನಿ ಮತ್ತು ಜಪಾನ್ ಭಾಗವಹಿಸಲಿವೆ.
ಕೃತಕ ಬುದ್ಧಿಯ ರೂಪರೇಷೆಗಳಿಗೆ ಮಹತ್ವದ ನೈತಿಕ ಕೊಡುಗೆ
"ನಾನು ವಿಶ್ವಗುರುಗಳನ್ನು ಅತ್ಯಂತ ಆತ್ಮೀಯವಾಗಿ ಇಟಲಿ ದೇಶದ ಆಹ್ವಾನವನ್ನು ಒಪ್ಪಿಕೊಂಡಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮತ್ತು ವಿಶ್ವಗುರುಗಳ ಪ್ರಸನ್ನತೆ ನಮ್ಮ ದೇಶದ ಘನತೆಯನ್ನು ಮತ್ತು G7 ದೇಶಗಳಿಗೆ ಕೂಡ ಈ ನಿಟ್ಟಿನಲ್ಲಿ ಇಟಲಿ ದೇಶದ ಸರ್ಕಾರವು ಕೃತಕ ಬುದ್ಧಿಯ ಸಮಸ್ಯೆಗಳಿಗೆ ವ್ಯಾಟಿಕನ್ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಒತ್ತಿ ಹೇಳುತ್ತಾ ವಿವರಿಸಿದರು
ವಿಶೇಷವಾಗಿ 2020 ನೇ ವರ್ಷದ ಕೃತಕ ಬುದ್ಧಿಯ ನೈತಿಕತೆಗೆ ರೋಮ್ ನ ಕರೆಯನ್ನು ನೀಡಿದ್ದ ಪೌಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ತನ್ನ ಈ ಕಾರ್ಯ ಪ್ರವೃತ್ತಿಯಲ್ಲಿ ಅಲ್ಗಾರಿತಮ್ ಗಳಿಗೆ ನೈತಿಕತೆ ಎನ್ನುವುದನ್ನು ಉದ್ದೇಶಿಸುತ್ತದೆ.
ವಿಶ್ವಗುರುಗಳ ಪ್ರಸನ್ನತೆಯು ಕೃತಕ ಬುದ್ಧಿಯ ನೈತಿಕ, ಸಾಂಸ್ಕೃತಿಕ ರೂಪರೇಷೆಗಳಿಗೆ ಅತ್ಯಂತ ನಿಖರವಾದ ಕೊಡುಗೆಯನ್ನು ನೀಡುತ್ತದೆ ಎಂದು ನಾನು ಖಾತ್ರಿ ಆಗಿದ್ದೇನೆ ಅಷ್ಟು ಮಾತ್ರವಲ್ಲದೆ ತಂತ್ರಜ್ಞಾನದ ಪ್ರಸ್ತುತ ಮತ್ತು ಭವಿಷ್ಯವನ್ನು ಕೂಡ ಅಳೆಯುವ ಈ ಪ್ರಯತ್ನವನ್ನು ಮತ್ತು ಅಂತರಾಷ್ಟ್ರೀಯ ಸಮುದಾಯದ ಶಕ್ತಿಯನ್ನು ಅಂದಿನ ಜಗದ್ಗುರುಗಳಾದ ಸಂತ ದ್ವಿತೀಯ ಜಾನ್ಪಾಲರು ವಿಶ್ವಸಂಸ್ಥೆಗೆ ನೀಡಿದ ತಮ್ಮ ಹೆಸರಾಂತ ಭಾಷಣವ ಮೇಲೋನಿಯವರು ಹೆಸರಿಸುತ್ತಾ "ರಾಜಕೀಯ ಪ್ರಕ್ರಿಯೆಯು, ಅದು ರಾಷ್ಟ್ರೀಯವಾಗಿರಲಿ ಅಥವಾ ಅಂತರರಾಷ್ಟ್ರೀಯವಾಗಿರಲಿ, ಅದು ಬರುವುದು ಮನುಷ್ಯನಿಂದ, ಮನುಷ್ಯನಿಂದಲೇ ಕೈಗೊಳ್ಳುವುದು ಮತ್ತು ಮನುಷ್ಯನಿಗಾಗಿ" ಎಂದರು.
ಈ ಸಂದರ್ಭದಲ್ಲಿ ಜನವರಿ 1 2024ರ ಪೋಪ್ ಪ್ರಾನ್ಸಿಸ್ ರವರ 57ನೇ ವಿಶ್ವ ಶಾಂತಿಯ ದಿನಕ್ಕಾಗಿ ನೀಡಿದ ಸಂದೇಶದಲ್ಲಿ ಮನುಷ್ಯ ಕುಲವು ಕೃತಕ ಬುದ್ಧಿಯ ಎಲ್ಲಾ ತಂತ್ರಗಳನ್ನು ಸಂಪೂರ್ಣ ಮಾನವೀಯ ಸಂವಹಣೆ ಸಂವಹನೆಯ ಸೇವೆಗಾಗಿ ಸಹಾಯ ಮಾಡಬೇಕು ಎನ್ನುವುದನ್ನು ಸ್ಮರಿಸಬಹುದು.