ತಮ್ಮ ಧ್ಯೇಯವಾಕ್ಯವನ್ನು ರಕ್ಷಿಸಿಕೊಳ್ಳುವಂತೆ "ನ್ಯೂ ಹಾರೈಝನ್ಸ್" ಗೆ ಪೋಪ್ ಫ್ರಾನ್ಸಿಸ್ ಕಿವಿಮಾತು

ನ್ಯೂ ಹಾರೈಝನ್ಸ್ ಚಳುವಳಿಯು ತನ್ನ ಮುವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಿಯಾರಾ ಅಮಿರಾಂತೆ ಅವರಿಗೆ ವಿಡಿಯೋ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್, ಅದರ ಸದಸ್ಯರಿಗೆ ಅವರ ಧ್ಯೇಯವಾಕ್ಯವನ್ನು ರಕ್ಷಿಸಿಕೊಳ್ಳುವಂತೆ ಹಾಗೂ ಆ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವಂತೆ ಕಿವಿಮಾತು ಹೇಳಿದ್ದಾರೆ.

ವರದಿ: ಸಿಸ್ಟರ್ ಫ್ರಾನ್ಸೀನ್-ಮರೀ ಕೂಪರ್, ಐಎಸ್ಎಸ್ಎಂ, ಅಜಯ್ ಕುಮಾರ್

ನ್ಯೂ ಹಾರೈಝನ್ಸ್ ಚಳುವಳಿಯು ತನ್ನ ಮೂವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಕಿಯಾರಾ ಅಮಿರಾಂತೆ ಅವರಿಗೆ ಪೋಪ್ ಫ್ರಾನ್ಸಿಸ್ ವಿಡಿಯೋ ಸಂದೇಶದ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. 

"ಮೊದಲಿಗೆ ಇದನ್ನು ಮೂವತ್ತು ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದಿರುವ ಕಿಯಾರ ಅವರಿಗೆ ನಾವು ಅಭಿನಂದನೆಗಳನ್ನು ತಿಳಿಸುತ್ತೇನೆ. ತಮ್ಮ ಚಳುವಳಿಯ ಮೂಲಕ ಅವರು ಸಾವಿರಾರು ಜನರೊಳಗೆ ಪವಿತ್ರಾತ್ಮರ ಉಸಿರನ್ನು ಹಾಗೂ ಪ್ರೇರಪಣೆಯನ್ನು ನೀಡಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿರುವ ಅವರು "ನೀವು ನಿಮ್ಮ ಧ್ಯೇಯವಾಕ್ಯವನ್ನು ರಕ್ಷಿಸಿಕೊಳ್ಳಬೇಕು. ಏಕೆಂದರೆ ಯಾವುದೇ ಒಂದು ಚಳುವಳಿ ಆರಂಭವಾದಾಗ, ಅದನ್ನು ಮುನ್ನಡೆಸುವ ಹಿನ್ನೆಲೆಯಲ್ಲಿ ನಾವು ಹಲವಾರು ಬಾರಿ ನಮ್ಮ ಮೂಲ ಉದ್ದೇಶವನ್ನೇ ಮರೆಯುತ್ತೇವೆ. ಅದು ಹಾಗಾಗಬಾರದು. ಆದುದರಿಂದ ನೀವು ನಿಮ್ಮ ಧ್ಯೇಯವಾಕ್ಯವನ್ನು ಮರೆಯಬಾರದು" ಎಂದು ಹೇಳಿದ್ದಾರೆ.     

"ಪ್ರಾರ್ಥನೆ ಹಾಗೂ ಧೈರ್ಯದ ಮೂಲಕ ನಾವು ನಮ್ಮ ಧ್ಯೇಯ ವಾಕ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ" ಎಂದು ಹೇಳಿದರು.

ನ್ಯೂ ಹಾರೈಝನ್ಸ್ ನ ಧ್ಯೇಯವಾಕ್ಯದ ಕುರಿತು ನನಗೆ ಮೊದಲೇ ತಿಳಿದಿತ್ತು. ಆದರೆ, ನಿಮ್ಮ ಸಮುದಾಯಕ್ಕೆ ಭೇಟಿ ನೀಡಿದ ನಂತರವಷ್ಟೇ ನನಗೆ ಇದರ ನಿಜವಾದ ಅರಿವು ಮೂಡಿತು ಎಂದು ಪೋಪ್ ಫ್ರಾನ್ಸಿಸ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

   

19 May 2024, 17:19