ಪೋಪ್ ಫ್ರಾನ್ಸಿಸ್: ಪೋಪರ ಪರಮಾಧಿಕಾರದ ಕುರಿತು ತಾಳ್ಮೆಯ ಸಂವಾದದ ಅಗತ್ಯವಿದೆ
ವರದಿ: ಜೋಸೆಫ್ ತಲ್ಲೊಚ್, ಅಜಯ್ ಕುಮಾರ್
ಅಂಗ್ಲಿಕನ್ ಪಂಗಡದ ಪರಮಾತ್ಮ ಆಧ್ಯಾತ್ಮಿಕ ನಾಯಕರು ಈ ವಾರ ವ್ಯಾಟಿಕನ್ ನಗರದಲ್ಲಿ ಹಲವು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರೋಮ್ ನಗರದಲ್ಲಿ ನಡೆಯುತ್ತಿದೆ.
ಗುರುವಾರ ಕ್ಯಾಂಟರ್ಬರಿ ಮಹಾಧರ್ಮಾಧ್ಯಕ್ಷ ಜಸ್ಟಿನ್ ವೆಲ್ಬಿ ಸೇರಿದಂತೆ ಹಲವು ಆಂಗ್ಲಿಕನ್ ಗುರುಗಳು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು. "ನಾನು ರೋಮ್ ಧರ್ಮಕ್ಷೇತ್ರದ ಧರ್ಮಧ್ಯಕ್ಷನಾಗಿ ಅಧಿಕಾರವನ್ನು ವಹಿಸಿಕೊಂಡ ಸಮಯದಲ್ಲೇ,
ತಮ್ಮ ಮಾತುಗಳನ್ನು ಆರಂಭಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಕ್ಯಾಂಟರ್ಬರಿ ಮಹಾಧರ್ಮಾಧ್ಯಕ್ಷ ಜಸ್ಟಿನ್ ವೆಲ್ಬಿ ಅವರ ಉಪಸ್ಥಿತಿಗೆ ಧನ್ಯವಾದಗಳು ತಿಳಿಸಿದರು. "ನಾನು ರೋಮ್ ಧರ್ಮಕ್ಷೇತ್ರದ ಧರ್ಮಧ್ಯಕ್ಷನಾಗಿ ಅಧಿಕಾರವನ್ನು ವಹಿಸಿಕೊಂಡ ಸಮಯದಲ್ಲೇ, ಜಸ್ಟಿನ್ ವೆಲ್ಬಿ ಅವರು ಕ್ಯಾಂಟರ್ಬರಿ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು." ಎಂದು ಹೇಳಿದರು. ಅಲ್ಲಿಂದ ಈವರೆಗೂ ನಾವು ಅನೇಕ ಬಾರಿ ಭೇಟಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಪೋಪರ ಪರಮಾಧಿಕಾರದ ಕುರಿತು ಮಾತು
ಪೋಪರ ಪರಮಾಧಿಕಾರದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಪೋಪರ ಅಧಿಕಾರ ಎಂಬುದು ಇಂದಿಗೂ ಸಹ ವಿವಾದಾತ್ಮಕ ವಿಷಯವಾಗಿದೆ ಎಂದು ಹೇಳಿದರು. ಈ ವಿಷಯ ಈಗಲೂ ಸಹ ಕ್ರೈಸ್ತರ ನಡುವೆ ಚರ್ಚೆಗೆ ಆಸ್ಪದವಾಗಿದೆ.
ಪೋಪ್ ಗ್ರೆಗರಿ ಅವರು ರೋಮ್ ಧರ್ಮಾಧ್ಯಕ್ಷರ ಪದವಿಯ ಕುರಿತು ಹೇಳಿದ್ದ ಮಾತು "ದೇವರ ಸೇವಕರ ಸೇವಕ" ಎಂಬುದನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸ್, ಕೋಪರಾಧಿಕಾರವನ್ನು ಇದು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತದೆ ಎಂದು ಹೇಳಿದರು ಹಾಗೆಯೇ ಪೋಪರ ಅಧಿಕಾರವು ಕ್ರೈಸ್ತರ ಸೇವೆಯಿಂದ ಹೊರತಾಗಿಲ್ಲ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಪೋಪರ ಪರಿಮಾಧಿಕಾರದ ಕುರಿತು ತಾಳ್ಮೆಯ ಸಂವಾದವನ್ನು ನಡೆಸಬೇಕು ಹಾಗೂ ವಿನಾಕಾರಣ ವಿವಾದಗಳನ್ನು ಅನವಶ್ಯಕ ಚರ್ಚೆಗಳನ್ನು ಬದುಕಿಸಿ ಸೋದರತ್ವದಿಂದ ಪರಸ್ಪರ ಸಹಕಾರಿಗಳಾಗಿ ಜೀವಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅಭಿಪ್ರಾಯಪಟ್ಟರು.