ನಿಮ್ಮ ದೈವ ಕರೆಯನ್ನು ಪೋಷಿಸಿರಿ: ಬ್ರೆಜಿಲ್ ದೇಶದ ಧಾರ್ಮಿಕ ಪುರುಷ ಹಾಗೂ ಸ್ತ್ರೀಯರಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು

ಬ್ರೆಜಿಲ್ ದೇಶದ ಧಾರ್ಮಿಕ ಪುರುಷ ಹಾಗೂ ಸ್ತ್ರೀಯರು ತಮ್ಮ ಸಮಾವೇಶವನ್ನು ಹಮ್ಮಿಕೊಂಡ ಹಿನ್ನೆಲೆ, ಅವರಿಗೆ ಶುಭಾಶಯಗಳು ತಿಳಿಸುತ್ತಾ ವಿಶ್ವಗುರು ಫ್ರಾನ್ಸಿಸ್ ಅವರಿಗೆ ದೈವಕರಿಯನ್ನು ಪೋಷಿಸುವಂತೆ ಕಿಬಿ ಮಾತನ್ನು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪ್ರಸಂಗ ದೇಶದ ಧಾರ್ಮಿಕ ಗುರುಗಳು ಕನ್ಯಾಸ್ತ್ರಿಯರು ಹಾಗೂ ಸಹೋದರ ಸಹೋದರಿಯರು ತಮ್ಮ 70ನೇ ಧಾರ್ಮಿಕ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ವಿವಿಧ ಶೀರ್ಷಿಕೆಗಳ ಕುರಿತು ಅವರು ಚರ್ಚೆಯನ್ನು ನಡೆಸಲಿದ್ದು, 70 ವರ್ಷಗಳ ತಮ್ಮ ಇತಿಹಾಸವನ್ನು ಮೆಲುಕು ಹಾಕಲಿದ್ದಾರೆ.

ವಿಶ್ವಗುರು ಫ್ರಾನ್ಸಿಸ್ ಬುಧವಾರ ಈ ಸಮಾವೇಶದಲ್ಲಿ ಭಾಗವಹಿಸಿರುವ ಧಾರ್ಮಿಕ ಸಹೋದರ ಸಹೋದರಿಯರಿಗೆ ಸಂದೇಶವನ್ನು ಕಳುಹಿಸಿದ್ದು, ಲ್ಯಾಟಿನ್ ಅಮೆರಿಕಾ ದೇಶಗಳಿಗೆ ಅವರು ತಮ್ಮ ದೈವ ಕರೆಯ ಮೂಲಕ ನೀಡುತ್ತಿರುವ ಸೇವೆಗೆ ಅಭಿನಂದಿಸಿದರು.

ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲರ ಜೀವನದಲ್ಲಿ ದೇವರ ವರಪ್ರಸಾದ ಇಳಿದು ಬರಲಿ ಹಾಗೂ ಪ್ರತಿಯೊಂದು ಧಾರ್ಮಿಕ ಸಮುದಾಯಗಳಲ್ಲಿ ಅವರು ಸದಾ ನೆಲೆಸಲಿ ಎಂದು ಪ್ರಾರ್ಥಿಸಿದರು.

ಧಾರ್ಮಿಕ ಗುರುಗಳು ಹಾಗೂ ಸಹೋದರ ಸಹೋದರಿಯರಿಗಾಗಿ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ದೇವರಿಂದ ಪಡೆದ ವಿವಿಧ ಜ್ಞಾನ ಫಲಗಳ ಮೂಲಕ ಧರ್ಮಸಭೆಯನ್ನು ಹಾಗೂ ಧರ್ಮಸಭೆಯ ಭಕ್ತಾದಿಗಳನ್ನು ವರದಾನಗಳ ಮೂಲಕ ಶ್ರೀಮಂತಗೊಳಿಸುತ್ತಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

ಅಂತಿಮವಾಗಿ ವಿಶ್ವಗುರು ಫ್ರಾನ್ಸಿಸ್ ಬ್ರೆಜಿಲ್ ದೇಶದ ಧಾರ್ಮಿಕ ಸಹೋದರ ಸಹೋದರಿಯರಿಗಾಗಿ ಅವರು ದೇವರಿಂದ ಪಡೆದುಕೊಂಡ ವಿವಿಧ ಫಲಗಳಿಂದ ಧರ್ಮಸಭೆಯನ್ನು ಮತ್ತಷ್ಟು ಫಲಪ್ರದವಾಗಿಸುವಂತೆ ಹಾಗೂ ಆ ಮೂಲಕ ದೈವ ಜನರಿಗೆ ಪ್ರಭುವಿನ ಸಾಕ್ಷಿಗಳಾಗುವಂತೆ ಕರೆ ನೀಡಿದರು.

30 May 2024, 17:39