ಒಳಗೊಳ್ಳುವ ಜಗತ್ತಿಗಾಗಿ ಒಟ್ಟಾಗಿ ಕೆಲಸ ಮಾಡೋಣ: ಬೌದ್ಧರಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು
ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್
ಬದಲಾಗುತ್ತಿರುವ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವ ಸಲುವಾಗಿ ಧರ್ಮಸಭೆ ಹಾಗೂ ಬೌದ್ಧ ಧರ್ಮದ ಬಿಕ್ಕುಗಳು ಪರಸ್ಪರ ಸಂವಾದ ಹಾಗೂ ಸಹಯೋಗವನ್ನು ಮುಂದುವರಿಸಬೇಕೆಂದು ವಿಶ್ವಗುರು ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಬೌದ್ಧ ಬಿಕ್ಕುಗಳ ನಿಯೋಗವನ್ನು ಭೇಟಿ ಮಾಡುತ್ತಾ ಹೇಳಿದ್ದಾರೆ.
ಥಾಯ್ಲೆಂಡ್ ದೇಶದ ಪ್ರಮುಖ ಬೌದ್ಧ ದೇವಾಲಯಗಳಲ್ಲೊಂದಾದ ಬ್ಯಾಂಕಾಕ್ ನಗರದ ವಾಟ್ ಫ್ರ ಸೇಟುಫೋನ್ ಟೆಂಪಲ್ ನ ಬೌದ್ಧ ಭಿಕ್ಕುಗಳ ನಿಯೋಗವನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್, ಅವರ ನಿರಂತರ ಗೆಳೆತನಕ್ಕೆ ಹಾಗೂ ಮುಂದುವರೆದ ಸಂವಾದ ಹಾಗೂ ಸಹಯೋಗಕ್ಕಾಗಿ ಧನ್ಯವಾದಗಳು ತಿಳಿಸುತ್ತಾ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಗಾಯಗೊಂಡಿರುವ ಮನುಷ್ಯ ಕುಲಕ್ಕೆ ಅವರು ಸೇವೆ ನೀಡಲು ಮುಂದಾಗಿರುವುದನ್ನು ವಂದಿಸಿದರು.
ಅವರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್, ಅವರು ಥೈಲ್ಯಾಂಡ್ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಭೌದ್ದ ಬಿಕ್ಕುಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬಗೆಯನ್ನು ವಿವರಿಸಿದರು. ಇದು ಮಾತ್ರವಲ್ಲತೆ ಇತ್ತೀಚಿಗೆ ಬ್ಯಾಂಕಾಕ್ ನಗರದಲ್ಲಿ ನಡೆದ ಬೌದ್ಧ ಸಮ್ಮೇಳನದಲ್ಲಿಯೂ ಸಹ ಅವರನ್ನು ಬರಮಾಡಿಕೊಂಡ ಬಗೆಯನ್ನು ಶ್ಲಾಘಿಸಿದರು.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಬ್ಬರೇ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಸಮಾನ ಮನಸ್ಥಿತಿಯನ್ನು ಹೊಂದಿರುವ ಎಲ್ಲರೂ ಸಹ ಒಂದಾಗಿ ಕೈಜೋಡಿಸಿ, ಮುಂದುವರಿಯಬೇಕು ಎಂದು ಹೇಳಿದರು. ನಮ್ಮ ಸಾಮಾನ್ಯ ತಾಯಿಯಾದ ಪ್ರಕೃತಿಯ ಕುರಿತು ಮಾತನಾಡಿದವರು ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಅಂತಿಮವಾಗಿ ಬೌದ್ಧ ಬಿಕ್ಕುಗಳು ಮಾನವೀಯತೆ ಮಾಡುತ್ತಿರುವ ಸೇವೆಯನ್ನು ಮುಂದುವರಿಸುವಂತೆ ಕಿವಿ ಮಾತನ್ನು ಹೇಳಿ ತಮ್ಮ ಮಾತನ್ನು ಮುಗಿಸಿದರು.