ಹುಡುಕಿ

ವಿಶ್ವಗುರು ಫ್ರಾನ್ಸಿಸ್: ಪವಿತ್ರ ನಾಡು, ಉಕ್ರೇನ್, ಮ್ಯಾನ್ಮಾರ್ ದೇಶಗಳಲ್ಲಿನ ಯುದ್ಧಗಳಲ್ಲಿ ಮಕ್ಕಳು ನೋವನ್ನು ಅನುಭವಿಸುತ್ತಿದ್ದಾರೆ

ಯುದ್ಧದ ಕ್ರೌರ್ಯದಿಂದ ಸುಟ್ಟ ಗಾಯಗಳನ್ನು ಹೊಂದಿರುವ ಹಾಗೂ ಕೈಕಾಲುಗಳನ್ನು ಕಳೆದುಕೊಂಡಿರುವ ಉಕ್ರೇನ್ ದೇಶದ ಮಕ್ಕಳನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್, ಯಾವುದೇ ಯುದ್ಧಗಳಲ್ಲಿ ಮಕ್ಕಳೇ ಸಂತ್ರಸ್ತರು ಹಾಗೂ ಬಲಿಪಶುಗಳು ಎಂದು ಅವರು ಮತ್ತೆ ಪುನರುಚ್ಚರಿಸಿದ್ದಾರೆ.

ವರದಿ: ದೇಬೋರ ಕ್ಯಾಸ್ತಲೀನೋ ಲುಬೋವ್, ಅಜಯ್ ಕುಮಾರ್

"ಮಕ್ಕಳು ನೋವನ್ನು ಅನುಭವಿಸುತ್ತಾರೆ... ಮಕ್ಕಳು ಯುದ್ಧದ ಕಾರಣ ನೋವನ್ನು ಅನುಭವಿಸುತ್ತಾರೆ..." ಹೀಗೆ ನೋವಿನಿಂದ ನುಡಿದವರು ವಿಶ್ವಗುರು ಫ್ರಾನ್ಸಿಸ್.

ಯುದ್ಧದ ಕ್ರೌರ್ಯದಿಂದ ಸುಟ್ಟ ಗಾಯಗಳನ್ನು ಹೊಂದಿರುವ ಹಾಗೂ ಕೈಕಾಲುಗಳನ್ನು ಕಳೆದುಕೊಂಡಿರುವ ಉಕ್ರೇನ್ ದೇಶದ ಮಕ್ಕಳನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್, ಯಾವುದೇ ಯುದ್ಧಗಳಲ್ಲಿ ಮಕ್ಕಳೇ ಸಂತ್ರಸ್ತರು ಹಾಗೂ ಬಲಿಪಶುಗಳು ಎಂದು ಅವರು ಮತ್ತೆ ಪುನರುಚ್ಚರಿಸಿದ್ದಾರೆ.

ಬುಧವಾರ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

"ಮೊನ್ನೆಯಷ್ಟೇ ನಾನು ಯುದ್ಧದ ಕಾರಣದಿಂದ ಸುಟ್ಟ ಗಾಯಗಳನ್ನು ಹೊಂದಿ, ಕೈಕಾಲುಗಳನ್ನು ಕಳೆದುಕೊಂಡಿರುವ ಪುಟ್ಟ ಮಕ್ಕಳನ್ನು ಭೇಟಿ ಮಾಡಿದೆ. ಅವರು ಮೊದಲಿನಂತೆ ಆಗಲು ಸಾಧ್ಯವೇ ಇಲ್ಲ. ಕೃತಕ ಕೈ ಕಾಲುಗಳನ್ನು ಹಾಕಿಕೊಳ್ಳುವ ಮೂಲಕ ಅವರು ಜೀವನವನ್ನು ನಡೆಸಬೇಕಿದೆ. ಯುದ್ಧದಿಂದ ಅವರು ಅವರ ತಂದೆ ತಾಯಿಯರನ್ನು ಸಹ ಕಳೆದು ಕೊಂಡಿದ್ದಾರೆ." ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಪ್ಯಾಲೆಸ್ತೀನ್, ಮ್ಯಾನ್ಮಾರ್ ಹಾಗೂ ಮುಂತಾದ ಯುದ್ಧಗ್ರಸ್ಥ ದೇಶಗಳಲ್ಲಿ ಅಪಾರ ಸಾವು ನೋವುಗಳನ್ನು ಅನುಭವಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.

29 May 2024, 18:36