ಪೋಪ್ ಫ್ರಾನ್ಸಿಸ್: ಚೀನಿ ಕಥೋಲಿಕರು ಕರುಣೆ ಹಾಗೂ ದಾನಶೀಲತೆಯಿಂದ ವಿಶ್ವಾಸಕ್ಕೆ ಸಾಕ್ಷಿಗಳಾಗಿದ್ದಾರೆ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಮಂಗಳವಾರ ರೋಮ್ ನಗರದಲ್ಲಿ ಪೊಲಿಟಿಕಲ್ ಅರ್ಬನ್ ವಿಶ್ವವಿದ್ಯಾನಿಲಯವು 1924ರಲ್ಲಿ ಚೀನಾದ ಶಾಂಗೈನಲ್ಲಿ ನಡೆದ ಚೈನೀಸ್ ಕೌನ್ಸಿಲ್ ಕಥೋಲಿಕ ಸಮಾವೇಶದ ನೂರನೇ ವರ್ಷಾಚರಣೆಯನ್ನು ಆಚರಿಸಿತು.
ಇದರಲ್ಲಿ ಭಾಗವಹಿಸಿದ ವ್ಯಕ್ತಿಗಳಿಗೆ ವಿಡಿಯೋ ಸಂದೇಶವನ್ನು ಕಳುಹಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಇದು ಅಪೂರ್ವ ಆಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಈ ಚೈನಿಸ್ ಕೌನ್ಸಲ್ ಧರ್ಮಸಭೆಯ ಕುರಿತು ಹಾಗೂ ಅದರ ಹಿನ್ನೆಲೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿತು ಎಂದು ಹೇಳಿದ್ದಾರೆ. ಪವಿತ್ರಾತ್ಮರು ಅಂದು ಈ ಸಭೆಯಲ್ಲಿ ಭಾಗವಹಿಸಿದ ಹಾಗೂ ಇದನ್ನು ನಡೆಸಿದ ಎಲ್ಲರನ್ನು ಪ್ರೇರೇಪಿಸಿ ಅವರನ್ನು ಒಂದುಗೂಡಿಸಿ ಸಂವಾದ ಹಾಗೂ ಸಹಯೋಗದಲ್ಲಿ ಚರ್ಚಿಸುವಂತೆ ಹಾಗೂ ಆ ಮೂಲಕ ಪರಿಹಾರಗಳನ್ನು ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ವರದಾನವನ್ನು ನೀಡಿದರು.
ಆ ಕಾಲಘಟ್ಟದಲ್ಲಿ ಈ ಸಮಾವೇಶಕ್ಕೆ ವಿವಿಧ ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಈ ವೇಳೆ ಅವರು ಚೀನಾದಲ್ಲಿ ಹುಟ್ಟಿದ ಗುರುಗಳು ಹಾಗೂ ಧರ್ಮಧ್ಯಕ್ಷರುಗಳು ಧರ್ಮಕ್ಷೇತ್ರವನ್ನು ಮುನ್ನಡೆಸುವುದನ್ನು ವಿರೋಧಿಸಿದರು. ತದನಂತರ ಈ ಸಮಾವೇಶದಲ್ಲಿ ಚೀನಾ ಧರ್ಮಸಭೆಯನ್ನು ಮುನ್ನಡೆಸಲು ಚೀನಾ ದೇಶದ ಪ್ರಜೆಗಳೇ ಉತ್ತಮ ಎಂದು ನಿರ್ಧರಿಸಲಾಗಿ, ಅದು ಅಸ್ತಿತ್ವಕ್ಕೆ ಬಂದಿತ್ತು. ತಮ್ಮ ಮಾತೃಭಾಷೆಯಲ್ಲಿ ಶುಭ ಸಂದೇಶವನ್ನು ಸಾರಿದರೆ ಅದಕ್ಕೆ ಹೆಚ್ಚು ಮಹತ್ವವಿದೆ ಎಂದು ಅರಿತುಕೊಳ್ಳಲಾಯಿತು.
ಇದು ವೇಳೆ ವಿಶ್ವಗುರು ಫ್ರಾನ್ಸಿಸ್ ಆರ್ಚ್ ಬಿಷಪ್ ಸೆಲ್ಸೋ ಕೋಸ್ಟಾಂಟಿನಿ ಅವರನ್ನು ಹಾಗೂ ಚೈನಾ ಹಾಗೂ ಜಾಗತಿಕ ಧರ್ಮಸಭೆಯ ನಡುವೆ ಸಂವಾದವನ್ನು ಏರ್ಪಡಿಸಲು ಅವರು ಕೈಗೊಂಡ ಪರಿಶ್ರಮವನ್ನು ನೆನಪಿಸಿಕೊಂಡು, ಅವರ ಪ್ರಯತ್ನವನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, ಶೇಷಾನಿನ ಮಾತೆ ಮರಿಯಮ್ಮನವರ ಕುರಿತು ಚೀನಿಯವರು ಹೊಂದಿರುವ ಭಕ್ತಿಗೆ ಮೆಚ್ಚುಗೆಯನ್ನು ತೋರ್ಪಡಿಸಿದರು.