ಪವಿತ್ರ ನಾಡಿನಲ್ಲಿ ಶಾಂತಿಗಾಗಿ 2014 ರಲ್ಲಿ ಮಾಡಿದ ಮನವಿಯನ್ನು ನವೀಕರಿಸಲಿರುವ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
2014 ರಲ್ಲಿ ಅಂದರೆ ಹತ್ತು ವರ್ಷಗಳ ಹಿಂದೆ ಪೋಪ್ ಫ್ರಾನ್ಸಿಸ್ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಆಫ್ ಕಾನ್ಸ್ಟಾಂಟಿನೋಪಲ್ ಹಾಗೂ ಇತರರೊಡನೆ ಸೇರಿ ಪವಿತ್ರ ನಾಡಿನಲ್ಲಿ ಶಾಂತಿ ಸ್ಥಾಪನೆಗಾಗಿ ಮನವಿಯನ್ನು ಮಾಡಿದ್ದು. ಇದೀಗ, ಹತ್ತು ವರ್ಷಗಳ ನಂತರ ಪವಿತ್ರ ನಾಡಿನಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧವು ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಶಾಂತಿಗಾಗಿ ತಮ್ಮ ಮನವಿಯನ್ನು ನವೀಕರಿಸಲಿದ್ದಾರೆ.
ಪ್ರಸ್ತುತ ಶಾಂತಿಗಾಗಿ ಮನವಿಯ ನವೀಕರಣವು ಅದೇ ದಿನಾಂಕದಂದು ಅದೇ ಸ್ಥಳದಲ್ಲಿ ನಡೆಯಲಿದೆ ಆದರೆ ಅದು ಸಂಪೂರ್ಣವಾಗಿ ನಾಶವಾದ ಹಾಗೂ ವ್ಯತಿರಿಕ್ತ ಸಂಧರ್ಭದಲ್ಲಿ ಆಗಲಿದೆ ಎಂದು ವ್ಯಾಟಿಕನ್ ಮಾಧ್ಯಮ ಸೇವೆಯ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ಇಸ್ರೇಲ್ ದೇಶದ ಅಂದಿನ ಪ್ರಧಾನಿ ಶಿಮೋನ್ ಪೆರೆಸ್, ಪ್ಯಾಲೆಸ್ತೇನಿನ ಅಂದಿನ ಪ್ರಧಾನಿ ಮಹಮ್ಮದ್ ಅಬ್ಬಾಸ್ ಹಾಗೂ ಕಾನ್ಸ್ಟಾಂಟಿನೋಪಲಿನ ಪೇಟ್ರಿಯಾರ್ಕ್ ಮೊದಲನೇ ಬರ್ತಲೋಮಿಯೋ ಅವರೊಂದಿಗೆ ಸೇರಿ ಪವಿತ್ರ ನಾಡಿನಲ್ಲಿ ಶಾಂತಿ ಸ್ಥಾಪನೆಗಾಗಿ ಒಲಿವ್ ಸಸಿಯನ್ನು ನೆಟ್ಟಿದ್ದರು.
ಇಂದು ಪೋಪ್ ಫ್ರಾನ್ಸಿಸ್ ಹಿಂದೆಂದಿಗಿಂತ ಹೆಚ್ಚಾಗಿ ಪವಿತ್ರ ನಾಡಿನಲ್ಲಿ ಶಾಂತಿಗಾಗಿ ಮನವಿಯನ್ನು ಮಾಡುತ್ತಿದ್ದಾರೆ.