ಸೆಪ್ಟೆಂಬರ್ ತಿಂಗಳಲ್ಲಿ ಲುಕ್ಸೆಂಬರ್ಗ್ ಮತ್ತು ಬೆಲ್ಜಿಯಂ ದೇಶಗಳಿಗೆ ಭೇಟಿ ನೀಡಲಿರುವ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ಮೇ ೨೦ ರಂದು ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಲುಕ್ಸೆಂಬರ್ಗ್ ಮತ್ತು ಬೆಲ್ಜಿಯಂ ದೇಶಕ್ಕೆ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಿಸಿದೆ.
ಈ ಎರಡೂ ದೇಶಗಳ ರಾಷ್ಟ್ರೀಯ ನಾಯಕರು ಹಾಗೂ ಧಾರ್ಮಿಕ ನಾಯಕರು ಆಹ್ವಾನವನ್ನು ನೀಡಿದ ಹಿನ್ನೆಲೆ, ಅವರ ಆಹ್ವಾನವನ್ನು ಮನ್ನಿಸಿರುವ ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ೨೬ ರಂದು ಈ ದೇಶಗಳಿಗೆ ಭೇಟಿಯನ್ನು ನೀಡಲಿದ್ದಾರೆ.
ಮೊದಲು ಬೆಲ್ಜಿಯಂ ದೇಶಕ್ಕೆ ತೆರಳಲಿರುವ ಪೋಪ್ ಫ್ರಾನ್ಸಿಸ್ ಸೆಪ್ಟೆಂಬರ್ ೨೯ ರವರೆಗೆ ಅಲ್ಲೇ ಉಳಿದುಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬ್ರಸೆಲ್ಸ್ ನಗರ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಲಿದ್ದಾರೆ. ಪೋಪರ ಭೇಟಿಯ ಪೂರ್ಣ ಪ್ರಮಾಣದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಇಂಡೋನೇಷಿಯಾ, ಸಿಂಗಪೋರ್, ಪಪುವ ನ್ಯೂಗಿನಿ ಹಾಗೂ ಟಿಮೊರ್ ಲೆಸ್ಟೇ ದೇಶಗಳಿಗೆ ಭೇಟಿ ನೀಡಲಿದ್ದಾರೆ.