ಜೆಸುಯಿಟ್ ಶಿಕ್ಷಣತಜ್ಞರಿಗೆ ಪೋಪ್: ವ್ಯಕ್ತಿಗಳಿಗೆ ಪ್ರಾಮುಖ್ಯತೆ ಕೊಡಿ
ವರದಿ: ಫ್ರಾಂಚೆಸ್ಕ ಮೆರ್ಲೊ, ಅಜಯ್ ಕುಮಾರ್
ಶುಕ್ರವಾರ ವಿಶ್ವಗುರು ಫ್ರಾನ್ಸಿಸ್ ಜೆಸುಯಿಟ್ ಧಾರ್ಮಿಕ ಸಭೆಯ ಅಂತರಾಷ್ಟ್ರೀಯ ಶಿಕ್ಷಣ ಸೇವಾ ಸಮಿತಿಯ ಸದಸ್ಯರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿ ತಮ್ಮ ಶಾಲೆಗಳ ಮೂಲಕ ಶಿಕ್ಷಣ ಸೇವೆಯನ್ನು ನೀಡುತ್ತಿರುವ ಅವರಿಗೆ ಧನ್ಯವಾದಗಳು ತಿಳಿಸಿದರು.
ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವುದು
ಜೆಸುಯಿಟ್ ಸಭೆಯ ಸ್ಥಾಪಕರಾದ ಸಂತ ಇಗ್ನೇಶಿಯಸ್ ಅವರ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಆರಂಭದಲ್ಲಿ ಸ್ವಂತ ಇಗ್ನೇಶಿಯಸ್ ಶಿಕ್ಷಣವನ್ನು ಸೇವೆಯನ್ನಾಗಿ ನೀಡಲು ಹಿಂಜರಿದಿದ್ದರು. ಈ ರೀತಿಯ ಸೇವೆಯ ಕುರಿತು ಅವರಿಗೆ ಗೊಂದಲಗಳಿದ್ದವು. ಆದರೆ ಅದನ್ನು ಆರಂಭಿಸಿದ ನಂತರ ಅದು ಎಂತಹ ಮಹಾಸೇವೆ ಆಗಿದೆ ಎಂಬುದನ್ನು ಅವರು ಕಂಡುಕೊಂಡರು. ಆ ಮೂಲಕ ಜಗತ್ತಿನ ಮಕ್ಕಳಿಗೆ ವಿಶೇಷವಾಗಿ ಬಡವರಿಗೆ ಹಾಗೂ ಶೋಷಿತರಿಗೆ ಅತ್ಯುತ್ತಮ ಶಿಕ್ಷಣ ಸೇವೆಯನ್ನು ನೀಡುವಲ್ಲಿ ಗಮನಹರಿಸಿದರು.
ಈ ವಾಸ್ತವಿಕ ಅರಿವನ್ನು ಅರ್ಥ ಮಾಡಿಕೊಂಡ ಜೆಸುಯಿಟ್ ಸಭೆಯ ಗುರುಗಳು ಶಿಕ್ಷಣದ ಮೂಲಕ ಶುಭ ಸಂದೇಶದ ಸಾರವನ್ನು ಮುಂದಿನ ಪೀಳಿಗೆಗೂ ಸಹ ನೀಡುತ್ತಾ ಬರುತ್ತಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.
ಯೇಸುವನ್ನು ನಿಮ್ಮ ಸೇವ ಕಾರ್ಯದ ಹೃದಯದಲ್ಲಿರಿಸಿ
ಮುಂದುವರೆದ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಯೇಸು ಸಭೆಯ ಎಲ್ಲಾ ಗುರುಗಳು ತಮ್ಮ ಎಲ್ಲಾ ಸೇವಾ ಕಾರ್ಯದಲ್ಲಿ ವಿಶೇಷವಾಗಿ ಶಿಕ್ಷಣ ಸೇವೆಯಲ್ಲಿ ಯೇಸುವನ್ನು ಕೇಂದ್ರಬಿಂದುವನ್ನಾಗಿಸಿ, ಅವರ ಪ್ರತಿಕ್ರಿಯೆಗಳಲ್ಲೂ ಅವರನ್ನು ಹೃದಯದಲ್ಲಿರಿಸಬೇಕೆಂದು ಹೇಳಿದರು. ಶಿಕ್ಷಣದ ಪ್ರತಿ ಹಂತದಲ್ಲೂ ಯುವ ಸಮೂಹವು ಯೇಸುವನ್ನು ಕಂಡುಕೊಳ್ಳುವ ಅವಕಾಶವನ್ನು ಹಾಗೂ ಅವರನ್ನು ಅನ್ವೇಷಿಸುವ ಸದಾವಕಾಶವನ್ನು ನೀಡುವಂತೆ ಯೇಸು ಸಭೆಯ ಗುರುಗಳಿಗೆ ವಿಶ್ವಗುರು ಫ್ರಾನ್ಸಿಸ್ ಮನವಿ ಮಾಡಿದರು.
ಮಾದರಿಯಿಂದ ಮುನ್ನಡೆಸಿರಿ
ವಿದ್ಯಾರ್ಥಿಗಳನ್ನು ಮುನ್ನಡೆಸುವ ಪ್ರೀತಿಯ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ನಾವು ವಿದ್ಯಾರ್ಥಿಗಳಿಗೆ ಯಾವ ಮೌಲ್ಯಗಳನ್ನು ನೀಡಬೇಕು ಎಂದು ಬಯಸುತ್ತೇವೆಯೋ, ಅದೇ ಮೌಲ್ಯಗಳನ್ನು ಮೊದಲು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆ ಅಳವಡಿಸಿಕೊಳ್ಳುವುದರ ಮೂಲಕ ಹಾಗೂ ಅವುಗಳ ಪ್ರಕಾರ ಜೀವಿಸುವ ಮೂಲಕವೇ, ನಾವು ಅದನ್ನು ಮಕ್ಕಳಿಗೆ ನೀಡಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಯೇಸು ಸಭೆಯ ಶಿಕ್ಷಣ ತಜ್ಞರಿಗೆ ಹೇಳಿದ್ದಾರೆ.
ಸಕಾರಾತ್ಮಕ ಭವಿಷ್ಯ
ಶಿಕ್ಷಣವು ದೀರ್ಘಾವಧಿಯ ಪ್ರಕ್ರಿಯೆ ಎಂದ ವಿಶ್ವಗುರು ಫ್ರಾನ್ಸಿಸ್, ಅದರ ಫಲಗಳನ್ನು ಸವಿಯಲು ತಾಳ್ಮೆ ಅವಶ್ಯಕವಾಗಿದೆ. ಏಸುಕ್ರಿಸ್ತರು ಅವರ ಶಿಷ್ಯರಿಂದ ಆರಂಭದಲ್ಲಿ ಸರಿಯಾದ ಸಹಯೋಗ ಪಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿ ಶಿಕ್ಷಣದ ಫಲಿತಾಂಶಗಳನ್ನು ಕೂಡಲೇ ನಾವು ಮೌಲ್ಯಮಾಪನಗೊಳಿಸಲಾಗುವುದಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಈ ದಿಸೆಯಲ್ಲಿ ತಾಳ್ಮೆಯಿಂದ ಮುಂದುವರೆಯಿರಿ ಎಂದು ವಿಶ್ವಗುರು ಫ್ರಾನ್ಸಿಸ್ ಏಸು ಸಭೆಯ ಶಿಕ್ಷಣ ತಜ್ಞರಿಗೆ ಕಿವಿ ಮಾತನ್ನು ಹೇಳಿದರು.