ಲಾಟ್ವಿಯ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ಸಿ. ಫ್ರಾನ್ಸೀನ್-ಮರೀ ಕೂಪರ್, ಐಎಸ್ಎಸ್ಎಂ, ಅಜಯ್ ಕುಮಾರ್
ಲಾಟ್ವಿಯ ಗಣರಾಜ್ಯದ ಅಧ್ಯಕ್ಷ ಎಡ್ಗರ್ಸ್ ರಿಂಕೇವಿಕ್ಸ್ ಅವರನ್ನು ಪೋಪ್ ಫ್ರಾನ್ಸಿಸ್ ಗುರುವಾರ ವ್ಯಾಟಿಕನ್ ನಗರದ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ಅಧ್ಯಕ್ಷ ಎಡ್ಗರ್ಸ್ ರಿಂಕೇವಿಕ್ಸ್ ಅವರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದರು.
ವ್ಯಾಟಿಕನ್ನಿನ ಮಾಧ್ಯಮ ಪ್ರಕಟಣೆಯ ಪ್ರಕಾರ ಉಭಯ ನಾಯಕರ ಮಾತುಕತೆ ಸೌಹಾರ್ಧಯುತವಾಗಿದ್ದು, ಎರಡೂ ದೇಶಗಳು ಉತ್ತಮ ಭಾಂದವ್ಯವನ್ನು ಹೊಂದಿರುವುದಕ್ಕೆ ಪರಸ್ಪರರು ಸಂತೋಷ ವ್ಯಕ್ತಪಡಿಸಿದ್ದಾರೆ ಹಾಗೂ ಲಾಟ್ವಿಯ ದೇಶದಲ್ಲಿ ಕ್ರೈಸ್ತ ವಿಶ್ವಾಸದ ಪ್ರಾಮುಖ್ಯತೆಯ ಕುರಿತು ಚಿಂತನೆಯನ್ನು ನಡೆಸಿದ್ದಾರೆ.
೧೯೯೧ ರವರೆಗೂ ಲಾಟ್ವಿಯಾ ದೇಶವು ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಯುದ್ಧ ಸನ್ನಿವೇಷದ ಕುರಿತೂ ಸಹ ಮಾತುಕತೆ ನಡೆಯಿತು.
ಹೊಸ ಹೊಸ ತಂತ್ರಜ್ಞಾನಗಳು ಹಾಗೂ ಕೃತಕ ಬುದ್ಧಿಮತ್ತೆಯ ಕುರಿತು ಸಹ ಚರ್ಚೆ ನಡೆಯಿತು ಎಂದು ವ್ಯಾಟಿಕನ್ ಮಾಧ್ಯಮವು ಪ್ರಕಟನೆಯಲ್ಲಿ ತಿಳಿಸಿದೆ.