ಹುಡುಕಿ

2024.05.20 Delegazione della Loyola University, di Chicago 2024.05.20 Delegazione della Loyola University, di Chicago  (Vatican Media)

ಪರಿಶ್ರಮಶೀಲ ಕನಸುಗಾರರಾಗಿರಿ: ಲಯೋಲ ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳಿಗೆ ಪೋಪ್ ಕಿವಿಮಾತು

ಚಿಕಾಗೋದ ಲಯೋಲ ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಅವರಿಗೆ "ಪರಿಶ್ರಮಶೀಲ ಕನಸುಗಾರರಾಗಿರಿ" ಎಂಬ ಕಿವಿಮಾತನ್ನು ಹೇಳಿದ್ದಾರೆ.

ವರದಿ: ಸ್ಟೆಫಾನ್ ವಾನ್ ಕೆಂಪಿಸ್, ಅಜಯ್ ಕುಮಾರ್

ಸೋಮವಾರ ಲಯೋಲ ವಿಶ್ವವಿದ್ಯಾನಿಲಯದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಜೀವನದಲ್ಲಿ ಮುನ್ನಡೆಯಲು ಕನಸನ್ನು ಕಾಣಬೇಕು ಎಂದು ಹೇಳಿದ್ದಾರೆ. "ಕನಸು ಕಾಣುವ ಅಭಿರುಚಿಯನ್ನು ಕಳೆದುಕೊಂಡಿರುವ ಮನುಷ್ಯ ಕ್ರೀಯಾಶಿಲತೆಯನ್ನು ಕಳೆದುಕೊಳ್ಳುತ್ತಾನೆ. ಕಾವ್ಯ ರಹಿತನಾಗುತ್ತಾನೆ. ಕಾವ್ಯವಿಲ್ಲದ ಜೀವನ ನಡೆಯವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಯೋಲ ವಿಶ್ವವಿದ್ಯಾನಿಲಯವು ಚಿಕಾಗೋ ನಗರದಲ್ಲಿದ್ದು ಇದನ್ನು ಜೆಸುಯಿಟ್ ಸಭೆಯ ಗುರುಗಳು ನಡೆಸುತ್ತಿದ್ದಾರೆ. ಪೋಪ್ ಫ್ರಾನ್ಸಿಸ್ ಅವರೂ ಸಹ ಇದೇ ಸಭೆಗೆ ಸೇರಿದವರಾಗಿದ್ದಾರೆ.

"ನೀವು ಬದುಕಿನಲ್ಲಿ ಮುನ್ನಡೆಯಬೇಕಾದರೆ ನಿಮ್ಮ ಬೇರುಗಳನ್ನು ನೀವು ಅರಿತುಕೊಳ್ಳಬೇಕು. ಬೇರುಗಳ ಹೊರತಾಗಿ ನೀವು ಮುಂದೆ ನಡೆಯಲು ಸಾಧ್ಯವಿಲ್ಲ. ಬೇರುಗಳಿಂದಲೇ ನೀವು ಶಕ್ತಿಯನ್ನು ಪಡೆಯಬೇಕಿದೆ. ಸಂತ ಇಗ್ನೇಷಿಯಸ್ ಎಂದಿಗೂ ತಮ್ಮ ಜೀವನದಲ್ಲಿ ದೇವರಿಗೆ ಮೊದಲ ಸ್ಥಾನವನ್ನು ನೀಡಿದರು. ಅವರಂತೆಯೇ ನಾವೂ ಸಹ ಬದುಕಿನಲ್ಲಿ ದೇವರಿಗೆ ಮೊದಲ ಸ್ಥಾನವನ್ನು ನೀಡಬೇಕು" ಎಂದು ಪೋಪ್ ಫ್ರಾನ್ಸಿಸ್ ನುಡಿದರು.

"ಮಹಾನ್ ಬುದ್ಧಿಜೀವಿಗಳನ್ನು ಸೃಷ್ಟಿಸುವುದು ಮಾತ್ರ ನಿಮ್ಮ ಕೆಲಸವಲ್ಲ. ಹೃದಯ ವೈಶಾಲ್ಯತೆ ಇರುವ, ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಗೌರವಿಸುವ ಪರಿಜ್ಞಾನವನ್ನು ಹೊಂದಿರುವವರನ್ನೂ ಸಹ ತಯಾರಿಸಬೇಕಿದೆ" ಎಂದು ಜೆಸುಯಿಟ್ ವಿಶ್ವವಿದ್ಯಾನಿಲಯದ ಸಿಬ್ಬಂಧಿಗೆ ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಶಿಕ್ಷಣ ಎಂದರೆ ಕೇವಲ ಜ್ಞಾನದ ವರ್ಗಾವಣೆಯಲ್ಲ; ಬದಲಿಗೆ ಸಂಧಾನ ಮತ್ತು ನ್ಯಾಯವನ್ನು ಗುರುತಿಸುವ ಮನೋಭಿಲಾಷೆ ಇರುವ ವ್ಯಕ್ತಿಗಳನ್ನು ರೂಪಿಸುವುದಾಗಿದೆ. ಇಂದು ನಾವು ವಿಷಮಕಾಲಘಟ್ಟದಲ್ಲಿದ್ದೇವೆ. ಭರವಸೆಯೇ ಈಗ ನಮಗೆ ಬೆಳಕು. ನಾವೆಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು" ಎಂದು ಪೋಪ್ ಫ್ರಾನ್ಸಿಸ್ ನುಡಿದರು.

20 May 2024, 14:58