ಪಪುವಾ ನ್ಯೂಗಿನಿ ಭೂಕುಸಿತದಿಂದ ಮೃತ ಹೊಂದಿದವರ ಕುಟುಂಬದವರಿಗೆ ಸಂತಾಪ ಸಂದೇಶ ಕಳುಹಿಸಿದ ಪೋಪ್ ಫ್ರಾನ್ಸಿಸ್

ಪಪುವಾ ನ್ಯೂಗಿನಿ ದೇಶದಲ್ಲಿ ಉಂಟಾದ ಬೃಹತ್ ಭೂಕುಸಿತದಿಂದ ಸಾವಿರಾರು ಜನರು ಮೃತ ಹೊಂದಿದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಮೃತರ ಕುಟುಂಬಗಳಿಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೊ, ಅಜಯ್ ಕುಮಾರ್

ಪಪುವಾ ನ್ಯೂಗಿನಿ ದೇಶದಲ್ಲಿ ಉಂಟಾದ ಭೀಕರ ಭೂಕುಸಿತದ ಪರಿಣಾಮ ಸಾವಿರಾರು ಜನರು ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ವಿಶ್ವಗುರು ಪೋಪ್ ಫ್ರಾನ್ಸಿಸ್ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ. 

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ವಿಶ್ವಗುರು ಪೋಪ್ ಫ್ರಾನ್ಸಿಸರ ಪರವಾಗಿ ಸಂತಾಪ ಸಂದೇಶವನ್ನು ಮೃತರ ಕುಟುಂಬಗಳಿಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ.

ತಮ್ಮ ಸಂತಾಪ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಮೃತರ ಕುಟುಂಬಗಳೊಂದಿಗೆ ಐಕ್ಯತೆಯನ್ನು ಹಾಗೂ ಆಧ್ಯಾತ್ಮಿಕ ಸಾಮಿಪ್ಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮೃತ ಹೊಂದಿದವರನ್ನು ದೇವರು ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲಿ ಹಾಗೂ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. 

ಟೆಲಿಗ್ರಾಂ ಮೂಲಕ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್, ಎಲ್ಲರ ಮೇಲೂ ದೇವರ ಕೃಪಾಶೀರ್ವಾದಗಳನ್ನು ಕೋರಿದ್ದಾರೆ.

  

27 May 2024, 18:24