ಹುಡುಕಿ

ನಿಜವಾದ ಸೌಂದರ್ಯ ದೇವರ ರೂಪವನ್ನು ಸೂಚಿಸುತ್ತದೆ: ಪ್ಲಾಸ್ಟಿಕ್ ಸರ್ಜನ್'ಗಳಿಗೆ ಕಿವಿಮಾತು ಹೇಳಿದ ಪೋಪ್ ಫ್ರಾನ್ಸಿಸ್

ಪ್ಲಾಸ್ಟಿಕ್ ಸರ್ಜನ್'ಗಳ ಗುಂಪನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ದೇವರ ಸೌಂದರ್ಯದ ಕುರಿತು ಚಿಂತನೆಯನ್ನು ನಡೆಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಗುರುವಾರ ಪ್ಲಾಸ್ಟಿಕ್ ಸರ್ಜನ್'ಗಳ ಗುಂಪನ್ನು ಭೇಟಿ ಮಾಡಿ, ಮಾನವೀಯತೆಗೆ, ವಿಶೇಷವಾಗಿ ಖಾಯಿಲೆಯಿಂದ ನರಳುತ್ತಿರುವ ಮಕ್ಕಳಿಗೆ ಅವರು ನೀಡುತ್ತಿರುವ ಸೇವೆಗೆ ಅವರನ್ನು ಶ್ಲಾಘಿಸಿದರು.

"ವಿಜ್ಞಾನ ಸೌಂದರ್ಯವನ್ನು ಸಂಧಿಸಿದಾಗ" ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಎಇಎಕ್ಸ್'ಪಿಐ ಸಭೆಯಲ್ಲಿ ಭಾಗವಹಿಸಲು ಪ್ಲಾಸ್ಟಿಕ್ ಸರ್ಜನ್'ಗಳು ರೋಮ್ ನಗರಕ್ಕೆ ಆಗಮಿಸಿದ್ದರು.

"ಪುರುಷರಾಗಿ, ವೈದ್ಯರಾಗಿ ಹಾಗೂ ಕ್ರೈಸ್ತರಾಗಿ ದೈಹಿಕ ಅಗತ್ಯತೆಗಳಿಗಿಂತ ಹೆಚ್ಚನ್ನು ನಿರ್ವಹಿಸಲು ಕರೆ ಹೊಂದಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಮುಂದುವರೆದು ಮಾತನಾಡಿರುವ ಅವರು ನಿಜವಾದ ಸೌಂದರ್ಯ ಯಾರ ನೋಟಕ್ಕೂ ನಿಲುಕುವುದಿಲ್ಲ ಎಂದು ಹೇಳಿದ್ದಾರೆ.

ಸಂತ ಪೌಲರ ಮಾತುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, "ನಮ್ಮ ಮುಖಗಳು ದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಕರೆಯನ್ನು ಹೊಂದಿವೆ. ಈ ಸತ್ಯವನ್ನು ಅರಿತುಕೊಂಡು ಪ್ಲಾಸ್ಟಿಕ್ ಸರ್ಜನ್'ಗಳು ಮುಂದುವರೆಯಬೇಕೆಂದು ಹೇಳಿದ ಪೋಪ್, ಕೇವಲ ದೈಹಿಕ ನ್ಯೂನ್ಯತೆಗಳನ್ನು ಸರಿಪಡಿಸುವುದು ಮಾತ್ರವಲ್ಲ; ಅದರಾಚೆಗೂ ನಿಜವಾದ ದೇವರ ಸೌಂದರ್ಯವನ್ನು ಎತ್ತಿ ಹಿಡಿಯಲು ಹೇಳಿದ್ದಾರೆ.   

23 May 2024, 15:51