ನಿಮ್ಮ ಸ್ನೇಹಿತ ಯೇಸುವಿನೊಂದಿಗೆ ಅಲೆಯ ವಿರುದ್ದ ಈಜಿರಿ: ವೆರೋನಾದ ಮಕ್ಕಳಿಗೆ ಪೋಪ್ ಕಿವಿಮಾತು
ವರದಿ: ಡಿಬೋರಾ ಕ್ಯಾಸ್ಟಲಿನೊ ಲೂಬೊವ್, ಅಜಯ್ ಕುಮಾರ್
"ಯೇಸುವಿನ ಪ್ರೀತಿ ಹಾಗೂ ವಿಶ್ವಾಸದೊಂದಿಗೆ ನೀವೆಲ್ಲರೂ ಶಾಂತಿಗಾಗಿ ಶ್ರಮಿಸುವವರಾಗಬಹುದು" ಈ ಮಾತುಗಳನ್ನು ಹೇಳುವ ಮೂಲಕ ವಿಶ್ವಗುರು ಫ್ರಾನ್ಸಿಸ್ ಶನಿವಾರ ಇಟಲಿಯ ವೇರೋನಾ ನಗರದಲ್ಲಿನ ಮಕ್ಕಳನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ ಅವರು ಪ್ರಾರ್ಥಿಸಿದರು.
ಯೇಸುವಿನ ಧ್ವನಿಯನ್ನು ಕೇಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವಗುರು ಫ್ರಾನ್ಸಿಸ್, ನೀವು ಒಳ್ಳೆಯದನ್ನು ಮಾಡಿದ್ದಾಗ ಯಾವ ರೀತಿಯ ಅನುಭವವನ್ನು ಅನುಭವಿಸುತ್ತೀರಿ? ಅದೇ ರೀತಿ, ಕೆಟ್ಟ ಕಾರ್ಯವನ್ನು ಮಾಡುವಾಗ ಯಾವ ರೀತಿಯ ಅನುಭವ ಅನುಭವಿಸುತ್ತೀರಿ? ಎಂದು ಪ್ರಶ್ನಿಸಿದರು. ಅವರಿಗೆ ಪ್ರಶ್ನೆಗೆ ಮಕ್ಕಳು ಉತ್ತರಿಸಿದ ನಂತರ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ನೀವು ಒಳ್ಳೆಯದನ್ನು ಮಾಡಿದಾಗ ನಿಮಗೆ ಹೇಗೆ ಒಳ್ಳೆಯ ಭಾವನೆ ಮೂಡುತ್ತದೆ ಅಂತೆಯೇ ಪ್ರಭು ಯೇಸು ಕ್ರಿಸ್ತರು ನಿಮ್ಮೊಡನೆ ಮಾತನಾಡಿದಾಗ ಒಳ್ಳೆಯ ಭಾವನೆ ಉಂಟಾಗುತ್ತದೆ ಎಂದು ಹೇಳಿದರು.
ವಿಶ್ವಗುರು ಫ್ರಾನ್ಸಿಸ್ ಅವರಿಗೆ ಮಕ್ಕಳು ಕೇಳಿದ ಎರಡನೆಯ ಪ್ರಶ್ನೆ ಶಾಂತಿಗಾಗಿ ಶ್ರಮಿಸುವವರಾಗುವುದು ಹೇಗೆ? ಇದಕ್ಕೆ ಉತ್ತರಿಸಿದ ವಿಶ್ವಗುರು ಫ್ರಾನ್ಸಿಸ್, ನೀವೆಲ್ಲರೂ ಶಾಂತಿಯ ಸಂಕೇತಗಳಾಗಬೇಕು. ಪರಸ್ಪರ ಬೆರೆತು ಒಂದಾಗಬೇಕು ಯಾವುದೇ ಜಗಳವಿಲ್ಲದೆ ಆಟವಾಡಬೇಕು. ಆಗ ನೀವೆಲ್ಲರೂ ಶಾಂತಿಯ ಸಂಕೇತಗಳಾಗಿರಲು ಸಾಧ್ಯ ಎಂದು ಹೇಳಿದರು.
ಕಷ್ಟದ ಸಂದರ್ಭದಲ್ಲಿಯೂ ವಿಶ್ವಾಸವನ್ನು ಮುಂದುವರಿಸುವುದು ಹೇಗೆ ಎಂಬುದು ಮೂರನೆಯ ಪ್ರಶ್ನೆ ಯಾಗಿತ್ತು.
ಯೇಸು ನಮ್ಮನ್ನು ಸಂತೈಸಿ ನಮಗೆ ಶಕ್ತಿಯನ್ನು ತುಂಬುತ್ತಾರೆ.
ಮುಂದುವರೆದ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ನಮ್ಮ ಬದುಕಿನಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳು ಬರುತ್ತವೆ. ನಮ್ಮ ಪ್ರೀತಿ ಪಾತ್ರರ ಅಗಲಿಕೆ, ಅಪಘಾತ, ನಾವು ಅಂದುಕೊಂಡಿದ್ದು ಆಗದಿರುವುದು, ಹೀಗೆ ಅನೇಕ ಕಷ್ಟದ ಪರಿಸ್ಥಿತಿಗಳು ನಮಗೆ ಎದುರಾಗುತ್ತವೆ. ಇವೆಲ್ಲವೂ ಕೂಡ ಮಧ್ಯೆ ಯೇಸುಕ್ರಿಸ್ತರು ನಮ್ಮನ್ನು ಸಂತೈಸುತ್ತಾರೆ ಹಾಗೂ ನಮಗೆ ಶಕ್ತಿಯನ್ನು ತುಂಬುತ್ತಾರೆ.
ಯೇಸುಕ್ರಿಸ್ತರು ನಮ್ಮೊಂದಿಗೆ ಇರುವಾಗ ನಾವು ನಿಜವಾಗಿಯೂ ಶಾಂತಿಯ ಪರಿಚಾರಕರಾಗುತ್ತೇವೆ. ಯೇಸುವಿನೊಂದಿಗೆ ವಿಶ್ವಾಸ ಹಾಗೂ ಪ್ರೀತಿಯನ್ನು ಹೊಂದುವ ಮೂಲಕ ಅಲೆಯ ವಿರುದ್ಧ ಈಜುವಂತೆ ವಿಶ್ವಗುರು ಫ್ರಾನ್ಸಿಸ್ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಿದರು.
" ನೀವು ಒಳ್ಳೆಯದನ್ನು ಮಾಡಲು ಬಯಸಿದರೆ ಅಲೆಯ ವಿರುದ್ಧ ಈಜಲು ಭಯಪಡಬೇಡಿ!" ಎಂದು ವಿಶ್ವಗುರು ಫ್ರಾನ್ಸಿಸ್ ಮಕ್ಕಳಿಗೆ ಧೈರ್ಯವನ್ನು ತುಂಬಿದರು.