TOPSHOT-UKRAINE-RUSSIA-WAR-CONFLICT TOPSHOT-UKRAINE-RUSSIA-WAR-CONFLICT  (AFP or licensors)

ಪೋಪ್ ಫ್ರಾನ್ಸಿಸ್: ಯುದ್ಧದ ಸಮಯದಲ್ಲಿ ಜಗತ್ತಿಗೆ ಶಾಂತಿಯ ಅವಶ್ಯಕತೆ ಇದೆ

ಯುದ್ಧಕಾಲದಲ್ಲಿರುವ ಜಗತ್ತಿಗೆ ಶಾಂತಿಗಾಗಿ ಪ್ರಾರ್ಥಿಸಬೇಕು ಎಂದು ಎಲ್ಲರಿಗೂ ಕರೆ ನೀಡಿರುವ ಪೋಪ್ ಫ್ರಾನ್ಸಿಸ್, ಯುದ್ಧದಿಂದ ನರಳುತ್ತಿರುವ ಇಸ್ರೇಲ್, ಪ್ಯಾಲೆಸ್ತೀನ್, ಮ್ಯಾನ್ಮಾರ್ ಹಾಗೂ ಉಕ್ರೇನ್ ದೇಶಕ್ಕಾಗಿ ಪ್ರಾರ್ಥಿಸುವಂತೆ ಉತ್ತೇಜಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ಇಂದು ನಾವು ಯಾವುದೋ ಎರಡು ದೇಶಗಳ ಯುದ್ಧವನ್ನು ನೋಡುತ್ತಿಲ್ಲ. ಬದಲಿಗೆ ವಿಶ್ವಯುದ್ಧವನ್ನು ವೀಕ್ಷಿಸುತ್ತಿದ್ದೇವೆ." ಈ ಮಾತುಗಳನ್ನು ಪೋಪ್ ಫ್ರಾನ್ಸಿಸ್ ಬುಧವಾರದ ತಮ್ಮ ಸಾರ್ವಜನಿಕ ದರ್ಶನದಲ್ಲಿ ಸಾವಿರಾರು ಭಕ್ತಾಧಿಗಳನ್ನು ಉದ್ದೇಶಿಸಿ, ಮಾತನಾಡಿದರು.

ತಾವು ಮಾತನಾಡಬೇಕೆಂದು ಕೊಂಡಿದ್ದರಿಂದ ಕೊಂಚ ದೂರ ಸರಿದು ಯುದ್ಧಗ್ರಸ್ಥ ದೇಶಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ಮ್ಯಾನ್ಮಾರ್, ಉಕ್ರೇನ್ ಹಾಗೂ ಪ್ಯಾಲೆಸ್ತೇನ್ ದೇಶಗಳನ್ನು ನೆನಪಿಸಿಕೊಂಡು ಅಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸುವಂತೆ ಕರೆ ನೀಡಿದರು.

"ಈ ಸಂದರ್ಭದಲ್ಲಿ ಉಕ್ರೇನ್, ಮ್ಯಾನ್ಮಾರ್, ಹಾಗೂ ಪ್ಯಾಲೆಸ್ತೇನ್ ದೇಶಗಳನ್ನು ನೆನಪಿಸಿಕೊಳ್ಳೋಣ. ಅಲ್ಲಿ ಶಾಂತಿ ನೆಲೆಸುವಂತೆ ಹಾಗೂ ಆ ಮೂಲಕ ಯಾತನೆ ಕೊನೆಯಾಗುವಂತೆ ಆಶಿಸೋಣ" ಎಂದು ಪೋಪ್ ಫ್ರಾನ್ಸಿಸ್ ಮನವಿ ಮಾಡಿದ್ದಾರೆ.

ಶಾಂತಿ ಎಂಬುದು ಎಲ್ಲರೂ ಪ್ರಯತ್ನಿಸಬೇಕಾದ ಅಂಶ ಎಂದ ಪೋಪ್ ಫ್ರಾನ್ಸಿಸ್, ಮಕ್ಕಳೂ ಸಹ ತಮ್ಮದೇ ವಿಧದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಬೇಕು ಎಂದರು. ಪೋಲಿಷ್ ಯಾತ್ರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಪ್ರಥಮ ಪರಮ ಪ್ರಸಾದವನ್ನು ಸ್ವೀಕರಿಸಿರುವ ಸಂದರ್ಭಧಲ್ಲಿ ಶಾಂತಿಗಾಗಿ ಪ್ರಾರ್ಥಿಸಬೇಕೆಂದು ಪ್ರೋತ್ಸಾಹವನ್ನು ನೀಡಿದರು.

22 May 2024, 17:20