ಹುಡುಕಿ

ಪೋಪರ ಮೇ ತಿಂಗಳ ಪ್ರಾರ್ಥನಾ ಉದ್ದೇಶ: ಧಾರ್ಮಿಕ ಸ್ತ್ರೀ ಪುರುಷರ ತರಭೇತಿಗಾಗಿ ಪ್ರಾರ್ಥನೆ.

ಪೋಪ್ ಫ್ರಾನ್ಸಿಸ್ ಮೇ ತಿಂಗಳ ತಮ್ಮ ಪ್ರಾರ್ಥನಾ ಉದ್ದೇಶವನ್ನು ಬಿಡುಗಡೆ ಮಾಡಿದ್ದಾರೆ. ಮೇ ತಿಂಗಳಲ್ಲಿ ಧಾರ್ಮಿಕ ಸ್ತ್ರೀ ಪುರುಷರ ತರಬೇತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ. ತಮ್ಮ ವಿಡಿಯೋ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಧಾರ್ಮಿಕ ಗುರುಗಳಾಗಲು, ಕನ್ಯಾಸ್ತ್ರಿಯರಾಗಲು ಹಾಗೂ ಸಹೋದರ ಸಹೋದರಿಯರಾಗಲು ತರಬೇತಿಯನ್ನು ಪಡೆಯುತ್ತಿರುವವರು ದೇವರ ಅನುಗ್ರಹದಿಂದ ಉತ್ತಮ ತರಬೇತಿಯನ್ನು ಪಡೆಯುವಂತಾಗಲಿ ಎಂದು ಪ್ರಾರ್ಥಿಸುವಂತೆ ವಿಶ್ವಕ್ಕೆ ಕರೆ ನೀಡಿದ್ದಾರೆ.

ವರದಿ: ಫ್ರಾನ್ಸಿಸ್ಕ ಮರ್ಲೋ, ಅಜಯ್ ಕುಮಾರ್

ಮೇ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಧಾರ್ಮಿಕ ಸ್ತ್ರೀ ಪುರುಷರ ತರಬೇತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

ತಮ್ಮ ವಿಡಿಯೋ ಸಂದೇಶದಲ್ಲಿ ಪ್ರತಿ ದೈವ ಕರೆಯು ಈಗಷ್ಟೇ ದೊರಕಿರುವ ಒರಟಾದ ವಜ್ರವಾಗಿದ್ದು, ಅದನ್ನು ಕಾಲಕ್ಕೆ ತಕ್ಕಂತೆ ಉಜ್ಜಿ, ಸರಿಪಡಿಸಿ ನುಣುಪಾಗಿಸಬೇಕೆಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, ಯಾವುದೇ ಒಬ್ಬ ಗುರುವಾಗಲಿ, ಕನ್ಯಾಸ್ತ್ರಿಯಾಗಲಿ, ಕಾರ್ಮಿಕ ಸಹೋದರ ಸಹೋದರಿ ಅಥವಾ ಸಾಮಾನ್ಯ ಸ್ತ್ರೀ ಪುರುಷರಾಗಲಿ, ಉತ್ತಮ ವ್ಯಕ್ತಿಗಳಾಗಲು ದೇವರ ಅನುಗ್ರಹದಿಂದ ತರಬೇತಿಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಧಾರ್ಮಿಕ ಬದುಕಿಗೆ ತರಬೇತಿಯನ್ನು ಪಡೆಯುತ್ತಿರುವವರು ಜನರ ಬದುಕಿನ ಕುರಿತು ನೇರ ಸಂಪರ್ಕವನ್ನು ಹೊಂದಿರಬೇಕು. ಉತ್ತಮ ಧಾರ್ಮಿಕ ವ್ಯಕ್ತಿಗಳಾಗಲು ಇದು ಅತ್ಯಂತ ಅವಶ್ಯಕ ಎಂದು ಹೇಳಿದ್ದಾರೆ. ಅದೇ ರೀತಿ, ಸಮುದಾಯ ಜೀವನವನ್ನು ನಡೆಸಲು ಇಚ್ಛೆಯನ್ನು ಹೊಂದಿರಬೇಕು ಮಾತ್ರವಲ್ಲದೆ ಸಮುದಾಯ ಜೀವನದ ಉನ್ನತಿಗಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.

ಕೊನೆಗೆ ಪೋಪ್ ಫ್ರಾನ್ಸಿಸ್ ಅವರು ಧಾರ್ಮಿಕ ಜೀವನವನ್ನು ಅರಸುತ್ತಿರುವ ಅಭ್ಯರ್ಥಿಗಳೆಲ್ಲರೂ ಶುಭ ಸಂದೇಶದ ಸಾಕ್ಷಿಗಳಾಗಿ ದೇವರ ಅನುಗ್ರಹದಿಂದ ಉತ್ತಮ ಗುರು ಅಥವಾ ಕನ್ಯಾ ಸ್ತ್ರೀ ಅಥವಾ ಧಾರ್ಮಿಕ ಸಹೋದರ ಸಹೋದರಿಗಳಾಗಲಿ ಎಂದು ಪ್ರಾರ್ಥಿಸೋಣ ಎಂದು ಕರೆ ನೀಡಿದ್ದಾರೆ.

01 May 2024, 16:34