ಬಾಲ್ಟಿಕ್ ರಾಜ್ಯಗಳಿಗೆ ಆರ್ಚ್'ಬಿಷಪ್ ಗಾನ್ಸ್ವೈನ್ ಅವರನ್ನು ಪ್ರೇಷಿತ ರಾಯಬಾರಿಯನ್ನಾಗಿ ನೇಮಿಸಿದ ಪೋಪ್
ಬಾಲ್ಟಿಕ್ ರಾಜ್ಯಗಳಿಗೆ ಆರ್ಚ್'ಬಿಷಪ್ ಜಾರ್ಜ್ ಗಾನ್ಸ್ವೈನ್ ಅವರನ್ನು ಪ್ರೇಷಿತ ರಾಯಬಾರಿಯನ್ನಾಗಿ ಪೋಪ್ ಫ್ರಾನ್ಸಿಸರು ನೇಮಿಸಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ವ್ಯಾಟಿಕನ್ ಮಾಧ್ಯಮ ಕಚೇರಿಯು ಪ್ರಕಟಿಸಿರುವ ವರದಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಆರ್ಚ್'ಬಿಷಪ್ ಜಾರ್ಜ್ ಗಾನ್'ಸ್ವೈನ್ ಅವರನ್ನು ಲಿಥುವೇನಿಯಾ, ಲಾಟ್ವಿಯಾ ಹಾಗೂ ಈಸ್ತೋನಿಯಾ ಸೇರಿ ಬಾಲ್ಟಿಕ್ ರಾಜ್ಯಗಳಿಗೆ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.
ಉರ್ಬಿಸ್ಗಾಲಿಯಾದ ಟೈಟ್ಯುಲರ್ ಆರ್ಚ್'ಬಿಷಪ್ ಹಾಗೂ ಪೇಪಲ್ ಅರಮನೆಯ ಪ್ರೆಫೆಕ್ಟ್ ಎಮಿರಿಟಸ್ ಆಗಿರುವ ಆರ್ಚ್'ಬಿಷಪ್ ಜಾರ್ಜ್ ಗಾನ್'ಸ್ವೈನ್ ಅವರು ಪೋಪ್ ಹದಿನಾರನೇ ಬೆನೆಡಿಕ್ಟ್ ಅವರ ಪೋಪಾಧಿಕಾರದ ಅವಧಿಯುದ್ದಕ್ಕೂ ಹಾಗೂ ಅವರ ನಿವೃತ್ತಿಯ ನಂತರವೂ ಸಹ ಅವರಿಗೆ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಜನವರಿ ೨೦೧೩ ರಲ್ಲಿ ಇವರನ್ನು ಮಹಾಧರ್ಮಾಧ್ಯಕ್ಷರನ್ನಾಗಿ ಅಭ್ಯಂಗಿಸಲಾಗಿತ್ತು. ಪೋಪ್ ಹದಿನಾರನೇ ಬೆನೆಡಿಕ್ಟ್ ಅವರು ಇವರನ್ನು ಪ್ರಿಫೆಕ್ಟ್ ಆಫ್ ಪೇಪಲ್ ಹೌಸ್'ಹೋಲ್ಡ್ ಎಂಬುದಾಗಿ ನೇಮಕ ಮಾಡಿದ್ದರು.
24 June 2024, 18:14