ಹುಡುಕಿ

2024.06.01  Kelvin Edward Félix, cardinale arcivescovo emerito 2024.06.01 Kelvin Edward Félix, cardinale arcivescovo emerito  

ದಿವಂಗತ ಕಾರ್ಡಿನಲ್ ಫೆಲಿಕ್ಸ್ ಅವರ ಬದ್ಧತೆಗೆ ಧನ್ಯವಾದವನ್ನು ಅರ್ಪಿಸಿದ ಪೋಪ್ ಫ್ರಾನ್ಸಿಸ್

ತಮ್ಮ ತೊಂಬತ್ತೊಂದನೇ ವಯಸ್ಸಿನಲ್ಲಿ ಮೃತ ಹೊಂದಿರುವ ವೆಸ್ಟ್ ಇಂಡೀಸ್ ದೇಶದ ಕಾರ್ಡಿನಲ್ ಕೆಲ್ವಿನ್ ಎಡ್ವರ್ಡ್ ಫೆಲಿಕ್ಸ್ ಅವರಿಗೆ ಸಂತಾಪವನ್ನು ಸೂಚಿಸಿದ ಪೋಪ್ ಫ್ರಾನ್ಸಿಸ್, ತಮ್ಮ ಐಕ್ಯತೆಯನ್ನು ವೆಸ್ಟ್ ಇಂಡೀಸ್ ಜನತೆಗೆ ತಿಳಿಸಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಕಾಸ್ಟ್ರೀಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿದ್ದ ಕಾರ್ಡಿನಲ್ ಕೆಲ್ವಿನ್ ಎಡ್ವರ್ಡ್ ಫೆಲಿಕ್ಸ್ ಅವರು ಗುರುವಾರ ಮೇ ೩೦ ರಂದು ತಮ್ಮ ತೊಂಬತ್ತೊಂದನೇ ವಯಸ್ಸಿನಲ್ಲಿ ಮೃತ ಹೊಂದಿದ್ದಾರೆ.

ಇವರು ೧೯೮೧ ರಿಂದ ೨೦೦೮ ರವರೆಗೂ ಇವರು ವೆಸ್ಟ್ ಇಂಡೀಸ್ ನ ಸೇಂಟ್ ಲೂಶಿಯಾದ ಮಹಾಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪೋಪ್ ಫ್ರಾನ್ಸಿಸ್ ಇವರನ್ನು ೨೦೧೪ ರಲ್ಲಿ ಕಾರ್ಡಿನಲ್ ಪದವಿಗೇರಿಸಿದರು.

ಟೆಲಿಗ್ರಾಂ ಸಂದೇಶದ ಮೂಲಕ ಪೋಪ್ ಫ್ರಾನ್ಸಿಸ್ ಕಾರ್ಡಿನಲ್ ಫೆಲಿಕ್ಸ್ ಅವರ ನಿಧನಕ್ಕೆ ಕಂಬನಿಯನ್ನು ಮಿಡಿದಿದ್ದಾರೆ.

ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಸುಧೀರ್ಘ ಅವಧಿಗೆ ಕಾರ್ಡಿನಲ್ ಫೆಲಿಕ್ಸ್ ಅವರು ಸೇಂಟ್ ಲೂಶಿಯಾ ಧರ್ಮಸಭೆಗೆ ನೀಡಿದ ಸೇವೆಯನ್ನು ಶ್ಲಾಘಿಸಿದರು. ಇಲ್ಲಿನ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಎಲ್ಲಾ ಜನರಿಗೆ ವಿವಿಧ ರೀತಿಯಲ್ಲಿ ತಮ್ಮ ಸೇವಾಕಾರ್ಯಗಳ ಮೂಲಕ ನೆರವಾದರು ಎಂದು ಪೋಪ್ ಫ್ರಾನ್ಸಿಸ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

01 June 2024, 16:38