ನೈಜೀರಿಯಾದಲ್ಲಿ ಗುರುವೊಬ್ಬರ ಅಪಹರಣ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ನೈಜೀರಿಯಾ ದೇಶದ ಕಫಾನ್ ಚನ್ ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳು ತಮ್ಮ ಧರ್ಮಕ್ಷೇತ್ರದ ಕಥೋಲಿಕ ಗುರುವನ್ನು ಅಪಹರಿಸಲಾಗಿದೆ ಎಂದು ದೂರಿದ್ದಾರೆ.
ಫಾದರ್ ಉಖೆ ಅವರು ಸುರಕ್ಷಿತವಾಗಿ ಹಿಂದಿರುಗುವಂತೆ ನಾವು ಪ್ರಾರ್ಥಿಸುವ ಹೊತ್ತಿನಲ್ಲೇ, ಹಣಕ್ಕಾಗಿ ನಮ್ಮ ಸಮಾಜದ ಮುಗ್ಧ ವ್ಯಕ್ತಿಗಳನ್ನು ಅಪಹರಿಸುವುದನ್ನು ಖಂಡಿಸುತ್ತೇವೆ ಎಂದು ಫಾದರ್ ಇಮ್ಯಾನುವೆಲ್ ಕಜ ಅವರು ಹೇಳಿದ್ದಾರೆ.
ಭಾನುವಾರ ಸಂತ ಥಾಮಸ್ ಚರ್ಚಿನ ಒಳಗೆ ನುಗ್ಗಿದ ಮಾರಕಸ್ತ್ರ ಹೊಂದಿದ ದುಷ್ಕರ್ಮಿಗಳು, ಫಾದರ್ ಗೆಬ್ರಿಯಲ್ ಉಕೆ ಅವರನ್ನು ಅಪಹರಿಸಿದ್ದಾರೆ.
ನೈಜೀರಿಯಾ ದೇಶದಾದ್ಯಂತ ಮಾರಕಸ್ತ್ರವನ್ನು ಹೊಂದಿರುವ ಅಪಹರಣಕಾರರು ಮುಗ್ದ ವ್ಯಕ್ತಿಗಳನ್ನು ಹಣಕ್ಕಾಗಿ ಹಾಗೂ ರಾಜಕೀಯ ಸಿದ್ದಾಂತಗಳ ಹಿನ್ನೆಲೆಯಲ್ಲಿ ಅಪಹರಿಸುವುದು ಸರ್ವೇಸಾಮಾನ್ಯವಾಗಿದೆ. ಹೀಗೆ ವ್ಯಕ್ತಿಗಳನ್ನು ಅಪಹರಿಸುವ ದುಷ್ಕರ್ಮಿಗಳು ದೊಡ್ಡ ಮಟ್ಟದ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
ಸ್ಥಳೀಯ ಧರ್ಮಸಭೆಯ ಅಧಿಕಾರಿಗಳು ಫಾದರ್ ಉಕೆ ಅವರ ಶೀಘ್ರ ಬಿಡುಗಡೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ ಮಾತ್ರವಲ್ಲದೆ, ಗುರುಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುವಂತೆ ಕೋರಿದ್ದಾರೆ.