ಹುಡುಕಿ

ಗಾನವೃಂದದ ಯುವ ಗಾಯಕರಿಗೆ ಪೋಪ್: ಪ್ರಾರ್ಥನೆಯಲ್ಲಿ ಪ್ರಭುವಿನೊಂದಿಗೆ ಮಾತನಾಡಿರಿ

ನಾಲ್ಕನೇ ಅಂತರಾಷ್ಟ್ರೀಯ ಗಾನವೃಂದ ಸಮಾವೇಷದಲ್ಲಿ ಭಾಗವಹಿಸಿ, ಯುವ ಗಾಯಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಸಾಮರಸ್ಯ, ಸಹಭಾಗಿತ್ವ ಹಾಗೂ ಸಂತೋಷದ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ನಾಲ್ಕನೇ ಅಂತರಾಷ್ಟ್ರೀಯ ಗಾನವೃಂದ ಸಮಾವೇಷದಲ್ಲಿ ಭಾಗವಹಿಸಿ, ಯುವ ಗಾಯಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಸಾಮರಸ್ಯ, ಸಹಭಾಗಿತ್ವ ಹಾಗೂ ಸಂತೋಷದ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ. ನಿಮ್ಮ ಆಧ್ಯಾತ್ಮಿಕತೆಯನ್ನು ಮುಂದುವರೆಸಿಕೊಂಡು ಪ್ರೀತಿಯಲ್ಲಿ ನಡೆಯಿರಿ. ನಿಮ್ಮ ದನಿಯಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ದೇವರನ್ನು ಸ್ತುತಿಸಿ, ಮಹಿಮೆ ಪಡಿಸಿರಿ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು ವ್ಯಾಟಿಕನ್ ದೈವಾರಾಧನಾ ವಿಧಿಯಲ್ಲಿ ಪರಿಣಾಮಕಾರಿಯಾಗಿ ಸಂಗೀತದ ಬಳಕೆಯ ಕುರಿತು ಮತ್ತಷ್ಟು ಆಳವಾಗಿ ಚಿಂತಿಸಲು ಬಯಸುತ್ತದೆ ಹಾಗೂ ಈ ಕುರಿತು ಇರು ಉಪಕ್ರಮಗಳನ್ನು ಅನ್ವೇಷಿಸಲಾಗುವುದು ಎಂದು ಹೇಳಿದರು.

ನೀವೆಲ್ಲರೂ ಶತಮಾನಗಳ ಕಲೆಯ ರಕ್ಷಕರಾಗಿದ್ದು, ಸಂಗೀತ ಎಂಬ ಪರಮೋನ್ನತ ಕಲೆಯನ್ನು ದೇವರನ್ನು ಸ್ತುತಿಸಲು ಹಾಗೂ ಅವರಿಗೆ ಘನಮಾನ ಮಹಿಮೆಯನ್ನು ಸಲ್ಲಿಸಲು ಉಪಯೋಗಿಸುತ್ತಿದ್ದೀರಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿಯೂ ಸಹ ಧರ್ಮಸಭೆ ಹಾಗೂ ಭಕ್ತಾಧಿಗಳನ್ನು ದೇವರೆಡೆಗೆ ಕರೆದೊಯ್ಯಲು ನೆರವಾಗಿರಿ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

08 June 2024, 18:24