ಪೋಪ್: ವಿದೇಶಿ ಸಾಲವನ್ನು ರದ್ದುಪಡಿಸಲು ಜ್ಯೂಬಿಲಿ ಸುಸಂದರ್ಭವಾಗಿದೆ

ಗ್ಲೋಬಲ್ ಸೌತ್ ನಲ್ಲಿ ಸಾಲ ಎಂಬ ವಿಷಯದ ಕುರಿತಂತೆ ವ್ಯಾಟಿಕನ್ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ, ಅಲ್ಲಿನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ವಿದೇಶಿ ಸಾಲವನ್ನು ರದ್ದುಪಡಿಸಲು ಜ್ಯೂಬಿಲಿ ಸುಸಂದರ್ಭವಾಗಿದೆ ಎಂದು ಹೇಳಿದ್ದಾರೆ.

ವರದಿ: ಜೋಸೆಫ್ ಟಲೋಚ್, ಅಜಯ್ ಕುಮಾರ್

ಬುಧವಾರ ಬೆಳಗ್ಗೆ ವ್ಯಾಟಿಕನ್ ನಗರದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು "ಗ್ಲೋಬಲ್ ಸೌತ್ ನಲ್ಲಿ ಸಾಲ ಸಂಘರ್ಷ" ಎಂಬ ಶೀರ್ಷಿಕೆಯ ಸಮಾವೇಶದಲ್ಲಿ ಭಾಗವಹಿಸಿ, ಅದರ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಹೀಗೆ ತಮ್ಮ ಮಾತನ್ನು ಆರಂಭಿಸಿದ ವಿಶ್ವಗುರು ಫ್ರಾನ್ಸಿಸ್, ಬೆಳಿಗ್ಗೆ 7.45ಕ್ಕೆ ಸಭೆಯನ್ನು ಆಯೋಜಿಸಿರುವುದರ ಹಿನ್ನೆಲೆಯಲ್ಲಿ, ನಿಮ್ಮನ್ನು ಬೇಗ ನಿದ್ರೆಯಿಂದ ಎಬ್ಬಿಸಿದ್ದಕ್ಕೆ ಕ್ಷಮಿಸಿ ಎಂದು ಹೇಳುವ ಮೂಲಕ ನಗೆ ಚಟಾಕಿಯನ್ನು ಹಾರಿಸಿದರು.

ಸಾಲ ಸಂಘರ್ಷ ಹಾಗೂ ಅದರ ಪರಿಣಾಮಗಳ ಕುರಿತು ಮಾತನಾಡಿದ ಅವರು, ಕೊರೊನಾ ಸಂಕ್ರಮಿಕ ಹಾಗೂ ಪ್ರಸ್ತುತ ಯುದ್ಧಗಳ ಹೊರತಾಗಿ ನಾವು ನೋಡುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಅದು ಸಾಲ. ದಿನೇ ದಿನೇ ಹೆಚ್ಚುತ್ತಿರುವ ಅಧಿಕ ಮೊತ್ತದ ಸಾಲಗಳಿಂದ ಗ್ಲೋಬಲ್ ಸೌತ್ ನಲ್ಲಿರುವ ದೇಶಗಳಿಗೆ ಇದು ಅತ್ಯಂತ ದೊಡ್ಡ ಹೊರೆಯಾಗಿದ್ದು, ಇದರಿಂದ ಹೊರಬರಲಾರದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

ಇದು ಲಕ್ಷಾಂತರ ಜನರು ಉತ್ತಮ ಭವಿಷ್ಯವನ್ನು ಹೊಂದುವುದನ್ನು ತಡೆಗಟ್ಟುತ್ತದೆ ಎಂದು ಹೇಳಿದರು.

ಇದನ್ನು ಹೇಗೆ ಪರಿಹರಿಸಬಹುದು ಎಂಬ ಕುರಿತು ಚಿಂತನೆಯನ್ನು ನಡೆಸಿದ ವಿಶ್ವಗುರು ಫ್ರಾನ್ಸಿಸ್, ಸಾಲ ಸಮಸ್ಯೆ ಎಂಬುದನ್ನು ಬಗೆಹರಿಸಲು ವಿಶ್ವದ ವಿವಿಧ ದೇಶಗಳು ಧೈರ್ಯಾತ್ಮಕ ಹಾಗೂ ಕ್ರಿಯಾಶೀಲ ಹೆಜ್ಜೆಗಳನ್ನು ಇಡಬೇಕು. ಇದಕ್ಕಾಗಿ ನೂತನ ಆರ್ಥಿಕ ಸಂರಚನೆಗಳನ್ನು ಒಳಗೊಂಡು, ಎಲ್ಲರಿಗೂ ಸೂಕ್ತವಾದ ಹಾಗೂ ಉತ್ತಮವಾದ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಜುಬಿಲಿ ವರ್ಷದಲ್ಲಿ ಸಾಲಗಳನ್ನು ರದ್ದು ಪಡಿಸುವ ಕುರಿತು ಮಾತನಾಡಿದ್ದಾರೆ.

05 June 2024, 17:33